ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ತಮಿಳು ನಟ ಸೂರ್ಯ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ಧಾರೆ. 'ಸುರರೈ ಪೊಟ್ರು' ಹಾಗೂ ಜೈ 'ಭೀಮ್' ಸಿನಿಮಾಗಳಿಂದ ದೇಶ್ಯಾದ್ಯಂತ ಸೂರ್ಯ ಸದ್ದು ಮಾಡಿದ್ದರು. ಇದೀಗ ಬಹುಕೋಟಿ ವೆಚ್ಚದ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಸೂರ್ಯ ಬಣ್ಣ ಹಚ್ಚಿದ್ದಾರೆ. ಇದೆಲ್ಲದರ ನಡುವೆ ಮುಂಬೈನಲ್ಲಿ ತಮಿಳು ನಟ ಲಗ್ಜುರಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಸೂರ್ಯ ನಟನೆಯ 'ಸುರರೈ ಪೊಟ್ರು' ಸಿನಿಮಾ ಹಿಂದಿಗೆ ರೀಮೆಕ್ ಆಗ್ತಿದೆ. ಅದರಲ್ಲಿ ಅಕ್ಷಯ್ ಕುಮಾರ್ ಜೊತೆ ಸೂರ್ಯ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಚಿತ್ರಕ್ಕೆ ಸಹ ನಿರ್ಮಾಪಕರು ಆಗಿದ್ದಾರೆ. ಇದೆಲ್ಲದರ ನಡುವೆ ಸೂರ್ಯ ಪತ್ನಿ ಸಮೇತ ಮುಂಬೈಗೆ ಶಿಫ್ಟ್ ಆಗ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈಗಾಗಲೇ ದಂಪತಿ ದುಬಾರಿ ಫ್ಲಾಟ್‌ವೊಂದನ್ನು ಅಲ್ಲಿ ಖರೀದಿಸಿದ್ದಾರಂತೆ. ಮುಂಬೈನಲ್ಲಿ ಖ್ಯಾತ ಸೆಲೆಬ್ರೆಟಿಗಳ ವಾಸಿಸುವ ಏರಿಯಾದಲ್ಲೇ ಸೂರ್ಯ ಫ್ಲಾಟ್ ಖರೀದಿಸಿದ್ದು ಈ ವಿಚಾರ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ವೆಚ್ಚದ ಅಪಾರ್ಟ್‌ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿಬರ್ತಿದೆ. ಗಾರ್ಡನ್ ಏರಿಯಾ, ಪಾರ್ಕಿಂಗ್, ಸ್ವಿಮ್ಮಿಂಗ್ ಫೂಲ್, ಜಿಮ್, ಥಿಯೇಟರ್ ಸೇರಿದಂತೆ ಎಲ್ಲಾ ಸೌಕರ್ಯ ಇದೆಯಂತೆ. ಈ ಫ್ಲಾಟ್ ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಇದೆಯಂತೆ. 2006ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.
ಶೀಘ್ರದಲ್ಲೇ ದಂಪತಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಪೋಷಕರ ಜೊತೆಗಿನ ಮನಸ್ತಾಪದಿಂದ ಸೂರ್ಯ- ಜ್ಯೋತಿಕಾ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಇಬ್ಬರು ಮುಂಬೈಗೆ ಶಿಫ್ಟ್ ಆಗ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಸೂರ್ಯ ಇನ್ನು ಹೆಸರಿಡದ ಐತಿಹಾಸಿಕ ಕಥಾಹಂದರ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಡಲಿದ್ದಾರೆ. ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡದಲ್ಲಿ 'KGF', ತೆಲುಗಿನಲ್ಲಿ 'ಬಾಹುಬಲಿ' ಹಾಗೂ 'RRR' ರೀತಿಯಲ್ಲೇ ತಮಿಳಿನಲ್ಲಿ ಈ ಸಿನಿಮಾ ಮೂಡಿ ಬರ್ತಿದೆಯಂತೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಸ್ಟ್ಯೂಮ್ ಡ್ರಾಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಏಕಕಾಲಕ್ಕೆ 10 ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇದು ಸೂರ್ಯ ನಟನೆಯ 42ನೇ ಸಿನಿಮಾ. ಹಾಗಾಗಿ 'ಸೂರ್ಯ42' ಎನ್ನುವ ಟೆಂಟಟೀವ್ ಟೈಟಲ್‌ನಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ.

ಸಾಮಾನ್ಯವಾಗಿ ಸೂರ್ಯ ನಟಿಸುವ ಸಿನಿಮಾಗಳ ಬಜೆಟ್‌ಗಿಂತ 3 ಪಟ್ಟು ಹೆಚ್ಚು ಬಜೆಟ್‌ನಲ್ಲಿ 'ಸೂರ್ಯ42' ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ನಿರ್ಮಾಪಕ ಜ್ಞಾನವೇಲ್ ಹೇಳಿದ್ದಾರೆ. ಚಿತ್ರದಲ್ಲಿ 1000 ವರ್ಷಗಳ ಹಿಂದಿನ ಕಥೆ ಹೇಳಲಾಗುತ್ತಿದೆ. ಅಂದಿಕ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಗ್ರಾಫಿಕ್ಸ್ ವರ್ಕ್ ಹೆಚ್ಚು ಇದೆ. ಚಿತ್ರವನ್ನು ತ್ರಿಡಿಯಲ್ಲೂ ತೆರೆಗೆ ತರಲಾಗುತ್ತಿದೆ. ನಟ ಸೂರ್ಯ 5 ಬೇರೆ ಬೇರೆ ಪಾತ್ರಗಳಲ್ಲಿ ನಟಿಸುತ್ತಿದ್ದಾರಂತೆ. ತೆಲುಗು ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಮ್ಯೂಸಿಕ್ ಚಿತ್ರಕ್ಕಿದೆ. ರಾಜಮೌಳಿ ಸಿನಿಮಾಗಳಿಂದ ಪ್ರೇರಣೆಗೊಂದು ಈ ಚಿತ್ರವನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದೆ ಚಿತ್ರತಂಡ.
ಏಪ್ರಿಲ್ 14ಕ್ಕೆ 'ಸೂರ್ಯ42' ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಮುಂದಿನ ವರ್ಷ ಸಂಕ್ರಾಂತಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.


Click it and Unblock the Notifications











