ಕನ್ನಡದಲ್ಲಿ 'ಮಾಸ್ಟರ್' ಬಿಡುಗಡೆ: ನಟ ವಿಜಯ್ ಫ್ಯಾನ್ಸ್ ನಿರಾಸೆ
ತಮಿಳು ನಟ ವಿಜಯ್ ನಟಿಸುತ್ತಿರುವ ಮಾಸ್ಟರ್ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ.
ಸದ್ಯ ಮಾಸ್ಟರ್ ಸಿನಿಮಾದ ಬಿಡುಗಡೆ ಕುರಿತು ಚರ್ಚೆಯಾಗುತ್ತಿದೆ. ದೀಪಾವಳಿಗೆ ಮಿಸ್ ಆಯ್ತು, ಸಂಕ್ರಾಂತಿಗೆ ಪಕ್ಕಾ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದು ನಿರಾಸೆ ತರಿಸಬಹುದು. ಮತ್ತೊಂದೆಡೆ ಕನ್ನಡ ಸಿನಿ ಪ್ರೇಮಿಗಳಿಗೆ ವಿಜಯ್ ಚಿತ್ರವನ್ನು ಕನ್ನಡದಲ್ಲಿ ನೋಡುವ ಅವಕಾಶ ಸಿಗುತ್ತಿದೆ ಎನ್ನುವುದು ವಿಶೇಷ. ಮುಂದೆ ಓದಿ....

ಏಕಕಾಲದಲ್ಲಿ ಕನ್ನಡಕ್ಕೂ ಮಾಸ್ಟರ್ ಆಗಮನ
ಸದ್ಯದ ಮಾಹಿತಿ ಪ್ರಕಾರ ವಿಜಯ್ ನಟಿಸಿರುವ ಮಾಸ್ಟರ್ ಸಿನಿಮಾ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕನ್ನಡದಲ್ಲೂ ಡಬ್ ಮಾಡಿ ರಿಲೀಸ್ ಮಾಡುವ ತಯಾರಿ ನಡೆದಿದೆ. ವಿಶೇಷ ಅಂದ್ರೆ ತಮಿಳು ಸಿನಿಮಾ ಬಿಡುಗಡೆಯ ದಿನದಂತೆ ಕನ್ನಡ ವರ್ಷನ್ ಸಹ ರಿಲೀಸ್ ಆಗಲಿದೆ ಎನ್ನಲಾಗಿದೆ. ಏಕಕಾಲದಲ್ಲಿ ಮಾಸ್ಟರ್ ಎರಡೂ ಭಾಷೆಯಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ
ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದವರಿಗೆ ಇದು ಆಘಾತ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಮಾಸ್ಟರ್ ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ ಇಂಡಿಯಾ ಭಾರಿ ಬೆಲೆಗೆ ಖರೀದಿಸಿದೆ ಎಂದು ಹೇಳಲಾಗಿದೆ. ಈ ಮೂಲಕ ಥಿಯೇಟರ್‌ನಲ್ಲಿ ನೋಡುವ ಆಸೆ ಕೈಕೊಟ್ಟಿದೆ.

ಅಭಿಮಾನಿಗಳಿಗೆ ನಿರಾಸೆ
ವಿಜಯ್ ಮಾಸ್ಟರ್ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದಕ್ಕೂ ಮುಂಚೆ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ಚಿತ್ರಮಂದಿರದಲ್ಲೇ ಮಾಸ್ಟರ್ ಸಿನಿಮಾ ಬರಲಿದೆ ಎಂದು ತಿಳಿಸಿದ್ದರು. ಆದ್ರೀಗ, ಯೋಜನೆಯೇ ಸಂಪೂರ್ಣವಾಗಿ ಬದಲಾಗಿದೆ. ಥಿಯೇಟರ್ ಬಿಟ್ಟು ಆನ್‌ಲೈನ್ ಮೊರೆ ಹೋಗಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
Recommended Video

ಏಪ್ರಿಲ್‌ನಲ್ಲಿ ಬಿಡುಗಡೆ!
ಸದ್ಯಕ್ಕೆ ತಿಳಿದು ಬಂದಿರುವ ಪ್ರಕಾರ ಮಾಸ್ಟರ್ ಸಿನಿಮಾ ಜನವರಿ ತಿಂಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಆದರೆ, ನೆಟ್‌ಫ್ಲಿಕ್ಸ್ ಖರೀಸಿದ ಬಳಿಕ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಅಂದ್ಹಾಗೆ, ವಿಜಯ್ ಜೊತೆ ವಿಜಯ್ ಸೇತುಪತಿ ಸಹ ಕಾಣಿಸಿಕೊಂಡಿದ್ದಾರೆ.


Click it and Unblock the Notifications











