For Quick Alerts
  ALLOW NOTIFICATIONS  
  For Daily Alerts

  ಯಶ್ - ಶಂಕರ್ ಕಾಂಬಿನೇಷನ್‌ ಚಿತ್ರಕ್ಕೆ ನೆಟ್‌ಫ್ಲಿಕ್ಸ್- ಕರಣ್ ಜೋಹರ್ ಬಂಡವಾಳ?

  |

  ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಆದರೆ ರಾಕಿಭಾಯ್ 19ನೇ ಸಿನಿಮಾ ಬಗ್ಗೆ ದಿನಕ್ಕೊಂದು ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದರಲ್ಲೂ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಅನ್ನುವ ಸುದ್ದಿ ಬಹಳ ಜೋರಾಗಿಯೇ ಸದ್ದು ಮಾಡ್ತಿದೆ.

  'KGF' ಸರಣಿ ನಂತರ ಯಶ್ ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರೆ ಎನ್ನುವ ಕುತೂಹಲ ಬಾಲಿವುಡ್ ಮಂದಿಗೂ ಇದೆ. ಬಿಟೌನ್ ಫಿಲ್ಮ್ ಮೇಕರ್ಸ್ ಕೂಡ ರಾಕಿಂಗ್ ಸ್ಟಾರ್ ಜೊತೆ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿ ಸ್ಟಾರ್ ಡೈರೆಕ್ಟರ್‌ಗಳೆಲ್ಲಾ ರಾಕಿ ಭಾಯ್‌ಗೆ ಆಕ್ಷನ್ ಕಟ್ ಹೇಳಲು ನಾಮುಂದು ತಾಮುಂದು ಎನ್ನುತ್ತಿದ್ದಾರೆ. ಆದರೆ ಯಶ್ ಮಾತ್ರ ಒಳ್ಳೆ ಕಥೆ ಸಿಗುವವರೆಗೂ ಸೈಲೆಂಟ್ ಆಗಿ ಇರುವ ಮನಸ್ಸು ಮಾಡಿದ್ದಾರೆ. ಇತ್ತೀಚೆಗೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಈ ಪ್ರಶ್ನೆಗೆ "ಸಮಯ ಬಂದಾಗ ಹೇಳ್ತೀನಿ" ಎನ್ನುವ ಉತ್ತರ ಕೊಟ್ಟಿದ್ದಾರೆ.

  ಕೆಜಿಎಫ್​-2 ಚಿತ್ರವನ್ನು ಹಾಡಿ ಹೊಗಳಿದ ಬಾಲಿವುಡ್​ ನಿರ್ಮಾಪಕಕೆಜಿಎಫ್​-2 ಚಿತ್ರವನ್ನು ಹಾಡಿ ಹೊಗಳಿದ ಬಾಲಿವುಡ್​ ನಿರ್ಮಾಪಕ

  ಯಶ್ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇದು ಒಂದು ರೀತಿಯಲ್ಲಿ ಒತ್ತಡ ಕೂಡ ತಂದಿದೆ. ಅದೇ ಕಾರಣಕ್ಕೆ ಅಳಿದು ತೂಗಿ ಕಥೆ ಆಯ್ಕೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಈ ಹಿಂದೆ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ನಟಿಸ್ತಾರೆ ಎನ್ನಲಾಗಿತ್ತು.

  ಶಂಕರ್ ನಿರ್ದೇಶನದ ಚಿತ್ರದಲ್ಲಿ ಯಶ್?

  ಶಂಕರ್ ನಿರ್ದೇಶನದ ಚಿತ್ರದಲ್ಲಿ ಯಶ್?

  'KGF' ನಂತರ ಅಂತದ್ದೇ ಯಶ್ ಅಂಥದ್ದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕಿದೆ. ಪ್ರಾಜೆಕ್ಟ್‌ನ ಸರಿಯಾಗಿ ಡೀಲ್ ಮಾಡುವ ನಿರ್ದೇಶಕ ಬೇಕಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಅನ್ನಲಾಗ್ತಿದೆ. ಸದ್ಯ ಶಂಕರ್ RC15 ಹಾಗೂ ಇಂಡಿಯನ್-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಯಶ್ ಸಿನಿಮಾ ಕೈಗೆತ್ತಿಕೊಳ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

  'ಕತ್ತಲು ನನ್ನ ಸ್ವಂತ': ಮುಂದಿನ ಸಿನಿಮಾ ಬಗ್ಗೆ ದೊಡ್ಡ ಸಿಗ್ನಲ್ ಕೊಟ್ರಾ ಯಶ್?'ಕತ್ತಲು ನನ್ನ ಸ್ವಂತ': ಮುಂದಿನ ಸಿನಿಮಾ ಬಗ್ಗೆ ದೊಡ್ಡ ಸಿಗ್ನಲ್ ಕೊಟ್ರಾ ಯಶ್?

  ವೇಲ್‌ಪರಿ ಕಾದಂಬರಿ ಆಧರಿತ ಸಿನಿಮಾ

  ವೇಲ್‌ಪರಿ ಕಾದಂಬರಿ ಆಧರಿತ ಸಿನಿಮಾ

  ತಮಿಳು ಸಾಹಿತಿ ಎಸ್. ವೆಂಕಟೇಶನ್ ಬರೆದ 'ವೇಲ್‌ಪರಿ' ಎನ್ನುವ ಐತಿಹಾಸಿಕ ಕಥಾಹಂದರದ ಕಾದಂಬರಿ ಆಧರಿಸಿ ಶಂಕರ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಸೂರ್ಯ ಹೀರೊ ಆಗಿ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ರಾಜ ವೇಪ್‌ಪರಿ ಪಾತ್ರದಲ್ಲಿ ಯಶ್ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತೆ ಎನ್ನಲಾಗುತ್ತಿದೆ.

  1000 ಕೋಟಿ ಬಜೆಟ್‌ನಲ್ಲಿ ಯಶ್‌-ಶಂಕರ್ ಪ್ರಾಜೆಕ್ಟ್?

  1000 ಕೋಟಿ ಬಜೆಟ್‌ನಲ್ಲಿ ಯಶ್‌-ಶಂಕರ್ ಪ್ರಾಜೆಕ್ಟ್?

  ಶಂಕರ್ 'ವೇಲ್‌ಪರಿ' ಕಾದಂಬರಿಯನ್ನು 1000 ಕೋಟಿ ರೂ. ಬಜೆಟ್‌ನಲ್ಲಿ ತೆರೆಗೆ ತರುವ ಮನಸ್ಸು ಮಾಡಿದ್ದಾರಂತೆ. ಈಗಾಗಲೇ ಎಸ್. ವೆಂಕಟೇಶನ್ ಅವರಿಗೆ ಚಿತ್ರಕಥೆ ಬರೆಯಲು ಸೂಚಿಸಿದ್ದಾರೆ. 'ಬಾಹುಬಲಿ', 'ಪೊನ್ನಿಯಿನ್ ಸೆಲ್ವನ್' ರೀತಿಯ ಕಾಸ್ಟ್ಯೂಮ್ ಡ್ರಾಮಾ ಆಗಿರುವುದರಿಂದ ಚಿತ್ರಕ್ಕೆ ಭಾರೀ ಮೊತ್ತದ ಬಜೆಟ್ ಬೇಕು ಎನ್ನಲಾಗ್ತಿದೆ. ಅದ್ಧೂರಿ ಸೆಟ್‌ಗಳು, ಗ್ರಾಫಿಕ್ಸ್‌, ಕಲಾವಿದರ ಸಂಭಾವನೆ ಸೇರಿ ಬರೋಬ್ಬರಿ 1000 ಕೋಟಿ ರೂ. ಬಂಡವಾಳ ಬೇಕಾಗಬಹುದು ಎಂದು ಅಂದಾಜಿಸಲಾಗ್ತಿದೆ.

  ನೆಟ್‌ಫ್ಲಿಕ್ಸ್‌- ಕರಣ್‌ ಜೋಹರ್ ಬಂಡವಾಳ?

  ನೆಟ್‌ಫ್ಲಿಕ್ಸ್‌- ಕರಣ್‌ ಜೋಹರ್ ಬಂಡವಾಳ?

  'KGF' -2 ಸಿನಿಮಾ ಬರೋಬ್ಬರಿ 1200 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಯಶ್ ಮುಂದಿನ ಸಿನಿಮಾ ಬಜೆಟ್ಟೇ 1000 ಕೋಟಿ. ರೂ ಎನ್ನಲಾಗ್ತಿದೆ. ಬಾಲಿವುಡ್ ನಿರ್ದೇಶಕ ನಿರ್ಮಾಪಕ ಈ ಚಿತ್ರಕ್ಕೆ ಬಂಡವಾಳ ಹೂಡುವ ಬಗ್ಗೆ ಮಾತುಕತೆ ನಡೀತಿದೆಯಂತೆ. ಕರಣ್ ಜೋಹರ್ ಜೊತೆಗೆ ನೆಟ್‌ಫಿಕ್ಸ್‌ ಕೈ ಜೋಡಿಸುತ್ತಿದ್ದು, ಭಾರತೀಯ ಚಿತ್ರರಂಗದಲ್ಲೇ ಇದು ಹೈಬಜೆಟ್ ಸಿನಿಮಾ ಆಗಬಹುದು ಎಂದು ಊಹಿಸಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಗಬೇಕಿದೆ. ಅಥವಾ ಇದೆಲ್ಲಾ ಬರೀ ಅಂತೆ ಕಂತೆ ಸುದ್ದಿ ಅಷ್ಟೇನಾ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Tamil Director Shankar Planning A Movie with Yash with 1000 crore Budget. Know more.
  Tuesday, September 20, 2022, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X