ಯಶ್ ಬಗ್ಗೆ ಕೇಳಿಬರುತ್ತಿದೆ ಹೀಗೊಂದು ಸುದ್ದಿ: 'ಇಂಡಿಯನ್' ನಿರ್ದೇಶಕರ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸಂಜಯ್ ದತ್ ಎಂಟ್ರಿಗೆ ಕಾಯುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಸಂಜಯ್ ದತ್ ಸಿನಿಮಾತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನೇನು ಕೆಜಿಎಫ್-2 ಚಿತ್ರೀಕರಣ ಮುಗಿಯುತ್ತಾ ಬಂತು. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಈಗಾಗಲೇ ಸಾಕಷ್ಟು ನಿರ್ದೇಶಕರ ಹೆಸರು ಕೇಳಿಬರುತ್ತಿದೆ. ಯಶ್ ಮುಂದಿನ ಸಿನಿಮಾಗೆ ಪೂರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದಾರೆ, ಮಫ್ತಿ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಆದರೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್, ಯಶ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಯಶ್

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಯಶ್

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಂಡಿಯನ್, ನಾಯಕ್, ಅನ್ನಿಯನ್, ಎಂದಿರನ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಹೆಮ್ಮೆಯ ವಿಚಾರ.

ಅರ್ಧಕ್ಕೆ ನಿಂತಿರುವ ಇಂಡಿಯನ್-2 ಸಿನಿಮಾ

ಅರ್ಧಕ್ಕೆ ನಿಂತಿರುವ ಇಂಡಿಯನ್-2 ಸಿನಿಮಾ

ಶಂಕರ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಕಲಕಲಾವಲ್ಲಭ ಕಮಲ್ ಹಾಸನ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಇನ್ನು ಮುಕ್ತಾಯವಾಗಿಲ್ಲ. ಆದರೆ ಆಗಲೇ ನಿರ್ದೇಶಕ ಶಂಕರ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕ್ರೇನ್ ಅವಘಡದ ಬಳಿಕ ಚಿತ್ರೀಕರಣ ಪ್ರಾರಂಭವಾಗಿಲ್ಲ

ಕ್ರೇನ್ ಅವಘಡದ ಬಳಿಕ ಚಿತ್ರೀಕರಣ ಪ್ರಾರಂಭವಾಗಿಲ್ಲ

ಇಂಡಿಯನ್-2 ಸಿನಿಮಾದ ಚಿತ್ರೀಕರಣ ತಡವಾಗುತ್ತಿರುವ ಕಾರಣ ನಿರ್ದೇಶಕ ಶಂಕರ್ ಈ ನಿರ್ಧಾರ ಮಾಡಿದ್ದಾರಂತೆ. ಈ ಸಿನಿಮಾದ ಚಿತ್ರೀಕರಣ ವೇಳೆ ಕ್ರೇನ್ ಅವಘಡದಿಂದ ಚಿತ್ರತಂಡದ ಮೂವರು ಮಂದಿ ಮೃತಪಟ್ಟಿದ್ದರು. ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಂಭವಿಸಿದ ಈ ಅವಘಡದಿಂದ ಇಡೀ ಚಿತ್ರರಂಗ ಬೆಚ್ಚಿಬಿದ್ದಿತ್ತು. ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿಲ್ಲ.

ಇಂಡಿಯನ್-2 ಸಿನಿಮಾಗೂ ಮೊದಲೇ ಯಶ್ ಸಿನಿಮಾ

ಇಂಡಿಯನ್-2 ಸಿನಿಮಾಗೂ ಮೊದಲೇ ಯಶ್ ಸಿನಿಮಾ

ಇಂಡಿಯನ್-2 ಸಿನಿಮಾಗೂ ಮೊದಲೇ ಮತ್ತೊಂದು ಚಿತ್ರ ಮಾಡಿ ಮುಗಿಸುವ ಪ್ಲಾನ್ ಮಾಡಿದ್ದಾರೆ. ಶಂಕರ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ವಿಶೇಷ ಅಂದರೆ ಮಲ್ಟಿ ಸ್ಟಾರರ್ ಸಿನಿಮಾ ಇದಾಗಲಿದೆಯಂತೆ. ಈ ಸಿನಿಮಾದಲ್ಲಿ ಯಶ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Recommended Video

ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯಶ್

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯಶ್

ಯಶ್ ಜೊತೆಗೆ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದ್ದು, ದೊಡ್ಡ ತಾರಾಬಳಗ ಸಿನಿಮಾದಲ್ಲಿ ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯದಲ್ಲೇ ಹೊಸ ಸಿನಿಮಾದ ವಿಚಾರ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಈ ಸಿನಿಮಾ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿದೆಯಂತೆ.

More from Filmibeat

English summary
Tamil Famous Director Shankar to start Multi starrer film with Actor Yash in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X