ಮಾಜಿ ಮುಖ್ಯಮಂತ್ರಿಯ ಮೊಮ್ಮಗನ ಜೊತೆ ಬ್ರೇಕಪ್ ; ಖ್ಯಾತ ನಟನ ಜೊತೆ 'ಟಾಕ್ಸಿಕ್' ನಟಿಯ ಲವ್ವಿ ಡವ್ವಿ ?

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್‌ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಯಾಕೆಂದರೆ ಚಿತ್ರರಂಗದ ಧ್ರುವತಾರೆಯರ ... ಬದುಕಿನಲ್ಲಿ ಬ್ರೇಕಪ್ಪು .. ಲವ್ವು .. ಡವ್ವುಗೆ .. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಪ್ರೀತಿಸುವುದು, ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಇವರಿಗೆ ಹೊಸದೇನೂ ಅಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸದ್ಯ ಆದಿತ್ಯ ರಾಯ್ ಕಪೂರ್ ಮತ್ತು ತಾರಾ ಸುತಾರಿಯಾ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.

Tara Sutaria and Aditya Roy Kapur Spark Major Dating Rumours Following Veer Pahariya Split

ಹೌದು, ಆದಿತ್ಯ ರಾಯ್ ಕಪೂರ್.. ಬಾಲಿವುಡ್‌ನ ಸುರಸುಂದರ. ''ಆಶಿಕಿ 2'' ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದ ಚೆಲುವ. ''ಯೇ ಜವಾನಿ ಹೈ ದಿವಾನಿ''.. ''ಲುಡೋ''.. ''ಮಲಂಗ್''.. ''ಮೆಟ್ರೋ ಇನ್ ದಿನೋ''.. ''ಸಡಕ್ 2''.. ಹೀಗೆ ಒಂದಾದ ಮೇಲೊಂದು ಚಿತ್ರ ಮಾಡಿದ ಆದಿತ್ಯ ರಾಯ್ ಕಪೂರ್ ಈ ಹಿಂದೆ ಅನನ್ಯಾ ಪಾಂಡೆಯನ್ನು ಮನಸಾರೆ ಇಷ್ಟ ಪಡುತ್ತಿದ್ದರು. ಎರಡು ವರ್ಷ ಜೊತೆಯಲ್ಲಿ ಓಡಾಡಿದರು. ಆದರೆ ಈ ಸಂಬಂಧ ಮುಂದುವರೆಯಲಿಲ್ಲ.

ಇನ್ನೂ ತಾರಾ ಸುತಾರಿಯಾ.. ''ಸ್ಟೂಡೆಂಟ್ ಆಫ್ ದಿ ಇಯರ್ 2'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ''ಮರ್‌ಜಾವಾ''.. ''ತಡಪ್''.. ''ಹೀರೋಪಂತಿ 2'' ಚಿತ್ರದಲ್ಲಿ ಕೂಡ ನಾಯಕಿ ಪಾತ್ರ ನಿರ್ವಹಿಸಿದ್ದ ತಾರಾ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಚಿತ್ರ ''ಟಾಕ್ಸಿಕ್‌''ನ ಕಥಾನಾಯಕಿಯಲ್ಲಿ ಒಬ್ಬರು.

ಚಿತ್ರರಂಗದಲ್ಲಿ ಮೂರು ಮತ್ತೊಂದು ಚಿತ್ರವನ್ನು ಮಾಡಿರುವ ಈ ತಾರಾ ಸುತಾರಿಯಾ ಮೊದಲಿಂದ ತಮ್ಮ ಚಿತ್ರಕ್ಕಿಂತ ತಮ್ಮ ವ್ಯೆಯಕ್ತಿಕ ಬದುಕಿನ ವಿಚಾರದಿಂದ ಹೆಚ್ಚು ಸದ್ದು ಮಾಡುತ್ತಾ ಬಂದ ಇವರ ಹೃದಯವನ್ನು ಈ ಹಿಂದೆ ವೀರ್ ಪಹಾರಿಯಾ ಕದ್ದಿದ್ದರು.

ಈ ವೀರ್ ಪಹಾರಿಯಾ ಬೇರೆ ಯಾರು ಅಲ್ಲ. ಮಾಜಿ ಮುಖ್ಯಮಂತ್ರಿ ಸುಶೀಲ್​ಕುಮಾರ್ ​ಶಿಂಧೆ ಅವರ ಮೊಮ್ಮಗ. ತಾರಾ ಸುತಾರಿಯಾ ಅವರಿಗಿಂತ ಮುಂಚೆ ಹಿಂದೊಮ್ಮೆ ಸಾರಾ ಅಲಿ ಖಾನ್ ಜೊತೆ ಪ್ರೀತಿ ಕಿತಾಬು ಓದಿದವರು ಇವರು. ಇಷ್ಟೇ ಅಲ್ಲ ಜಾಹ್ನವಿ ಕಪೂರ್ ಹೃದಯ ಕದ್ದ ಶಿಖರ್ ಪಹಾರಿಯಾ ಅವರ ಸಹೋದರ ಕೂಡ ಹೌದು ಈ ವೀರ್ ಪಹಾರಿಯಾ.

Tara Sutaria and Aditya Roy Kapur Spark Major Dating Rumours Following Veer Pahariya Split

ಇಂತಹ ವೀರ್ ಪಹಾರಿಯಾ ಜೊತೆ ತಾರಾ ಇನ್ನೇನು ಮದುವೆಯಾಗಲಿದ್ದಾರೆ ಎಂದು ಇಡೀ ಮುಂಬೈ ಮಾತನಾಡಿಕೊಂಡಿತ್ತು. ಆದರೆ. ವೀರ್ ಪಹಾರಿಯಾ ಕಣ್ಣೆದುರೇ ಇಂಡೋ-ಕೆನಡಿಯನ್ ಗಾಯಕ ಎ.ಪಿ.ಧಿಲ್ಲೋನ್ ಅವರಿಗೆ ಹಿಂದೆ ಮುಂದೆ ಯೋಚನೆ ಮಾಡದೇ ತಾರಾ ಸುತಾರಿಯಾ ಕಿಸ್ ಮಾಡಿದರು.

ತಾನು ಮದುವೆಯಾಗುತ್ತಿರುವ ಹುಡುಗಿಯಿಂದ ಇಂತಹದ್ದೊಂದು ನಡೆ ನಿರೀಕ್ಷೆ ಮಾಡದ ವೀರ್ ಪಹಾರಿಯಾ ಆ ನಂತರ ತಮ್ಮ ಸಂಬಂಧವನ್ನು ಕಡಿದುಕೊಂಡರು. ಹೀಗೆ ಲವ್ ಮತ್ತು ಬ್ರೇಕಪ್ ವಿಚಾರದಲ್ಲಿ ತಮ್ಮದೇ ಆದ ಕಥೆಯನ್ನು ಹೊಂದಿರುವ ಆದಿತ್ಯ ರಾಯ್ ಕಪೂರ್ ಮತ್ತು ತಾರಾ ಸುತಾರಿಯಾ ಈಗ ಬಾಲಿವುಡ್‌ನ ಹೊಸ ಜೋಡಿ ಹಕ್ಕಿ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.

ಇದಕ್ಕೆ ಪೂರಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ, ಜೊತೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ''ಫಿಲ್ಮ್‌ಫೇರ್'' ಕೂಡ ವರದಿ ಮಾಡಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಬಾಲಿವುಡ್‌ನಲ್ಲಿ ಇವರಿಬ್ಬರ ಸಂಬಂಧದ ಕುರಿತು ಚರ್ಚೆ ಶುರುವಾಗಿದೆ. ತಾರಾ ಸುತಾರಿಯಾ ಅಥವಾ ಆದಿತ್ಯ ರಾಯ್ ಕಪೂರ್ ಎಂದಿನಂತೆ ಈ ಸುದ್ದಿಗೆ ಪ್ರತಿಕ್ರಿಯೆ ಇನ್ನು ನೀಡಿಲ್ಲವಾದರೂ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇಂತಹ ವದಂತಿಗಳೇ ನಿಜಾ ಆದ ಉದಾಹರಣೆಗಳಿವೆ. ಯಾರಿಗೆ ಗೊತ್ತು ಈ ಸಾಲಿಗೆ ಇವರಿಬ್ಬರು ಸೇರಿದರು ಸೇರಬಹುದು.

English summary
Tara Sutaria and Aditya Roy Kapur are the talk of Bollywood. See why fans are convinced they are the newest pair following the Veer Pahariya breakup news.
Read more about: rumours love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X