»   » 'ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?

'ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?

Posted By:
Subscribe to Filmibeat Kannada

ಶೀರ್ಷಿಕೆ ನೋಡಿದ ತಕ್ಷಣ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವ ಬದಲು, ಪೂರ್ತಿ ಮ್ಯಾಟರ್ ಓದಿ... ನಾವು ಹೇಳಲು ಹೊರಟಿರುವುದು ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ 'ಸಿನಿಮಾ' ಸುದ್ದಿ ಅಷ್ಟೇ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ಚಕ್ರವರ್ತಿ' ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ 'ಚಕ್ರವರ್ತಿ' ದರ್ಶನ್ ರವರ 48ನೇ ಸಿನಿಮಾ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ರವರ 49ನೇ ಸಿನಿಮಾ ಮೂಡಿಬರಲಿದೆ.

ಇನ್ನೂ, ದರ್ಶನ್ ರವರ 50ನೇ ಚಿತ್ರಕ್ಕೆ ಸಹೋದರ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳುತ್ತಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದರೆ ಈಗ ಹೊಸ ಸುದ್ದಿ ಕೇಳಿ ಬರುತ್ತಿದೆ. ಅದೇನು ಅಂದ್ರೆ....

ದರ್ಶನ್ ರವರ '50'ನೇ ಚಿತ್ರಕ್ಕೆ ಸಾರಥಿ ಬೇರೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ '50'ನೇ ಚಿತ್ರವನ್ನ ದಿನಕರ್ ತೂಗುದೀಪ ನಿರ್ದೇಶಿಸುತ್ತಿಲ್ಲ. ಬದಲಾಗಿ ಬೇರೆ ಸಾರಥಿ (ನಿರ್ದೇಶಕ) ಸೆಲೆಕ್ಟ್ ಆಗಿದ್ದಾರಂತೆ.!

ಯಾರವರು.?

ದರ್ಶನ್ ರವರ '50'ನೇ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಸದ್ದು ಮಾಡುತ್ತಿದೆ.

'ಚೌಕ', 'ಕುಂಬಿ' ಮತ್ತು 'ರಾಬರ್ಟ್'

ತರುಣ್ ಸುಧೀರ್ ನಿರ್ದೇಶನದ 'ಚೌಕ' ಚಿತ್ರದಲ್ಲಿ 'ರಾಬರ್ಟ್' ಪಾತ್ರಧಾರಿ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಿದ್ದರು. ಈಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

'ಜಗ್ಗು' ದರ್ಶನ್ ಮತ್ತು 'ಕುಂಬಿ' ತರುಣ್

ಹೇಳಿ ಕೇಳಿ ತರುಣ್ ಸುಧೀರ್ ಮತ್ತು ದರ್ಶನ್ ಆಪ್ತ ಗೆಳೆಯರು. ಅದರಲ್ಲೂ ಇಬ್ಬರೂ 'ಸ್ಯಾಂಡಲ್ ವುಡ್ ಸ್ಟಾರ್ ವಿಲನ್'ಗಳ ಮಕ್ಕಳು. 'ನವಗ್ರಹ' ಚಿತ್ರದಲ್ಲಿ 'ಕುಂಬಿ' ತರುಣ್ ಹಾಗೂ 'ಜಗ್ಗು' ದರ್ಶನ್ ಒಟ್ಟಿಗೆ ಅಭಿನಯಿಸಿದ್ದರು. ಹೀಗಾಗಿ ಸ್ನೇಹಿತ ತರುಣ್ ಗಾಗಿ '50'ನೇ ಸಿನಿಮಾ ಫಿಕ್ಸ್ ಮಾಡಿದ್ದಾರಂತೆ ದರ್ಶನ್.

ದರ್ಶನ್ 50ನೇ ಸಿನಿಮಾ ದಿನಕರ್ ಗೆ ಮೀಸಲಿತ್ತು.!

ಹಾಗ್ನೋಡಿದ್ರೆ, ದರ್ಶನ್ ರವರ 50ನೇ ಸಿನಿಮಾ ಸಹೋದರ ದಿನಕರ್ ತೂಗುದೀಪ ರವರಿಗೆ ಮೀಸಲಿತ್ತು. ಅದಕ್ಕೆ ದಿನಕರ್ 'ಸರ್ವಾಂತರ್ಯಾಮಿ' ಅಂತ ಟೈಟಲ್ ಕೂಡ ಫಿಕ್ಸ್ ಮಾಡಿ ಸ್ಕ್ರಿಪ್ಟ್ ವರ್ಕ್ ಗೆ ಚಾಲನೆ ನೀಡಿದ್ದರು.

ಕಳೆದ ವರ್ಷ ದಿನಕರ್ ಹೀಗೆ ಹೇಳಿದ್ದರು.!

'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಬಿಡುಗಡೆ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ, ''ದರ್ಶನ್ ರವರ 50ನೇ ಸಿನಿಮಾ 'ಸರ್ವಾಂತರ್ಯಾಮಿ' ನಾನೇ ಡೈರೆಕ್ಟ್ ಮಾಡ್ತೀನಿ. ಈಗಾಗಲೇ ಸ್ಕ್ರಿಪ್ಟ್ ರೆಡಿ ಇದೆ. ಆದರೆ ಸ್ಕ್ರೀನ್ ಪ್ಲೇ ಮಾಡೋಕೆ ಇನ್ನೂ ಟೈಮ್ ಇದೆ'' ಅಂತ ದಿನಕರ್ ತೂಗುದೀಪ ಹೇಳಿದ್ದರು.[ದರ್ಶನ್ 50ನೇ ಸಿನಿಮಾ ಬಗ್ಗೆ ದಿನಕರ್ ಏನಂದ್ರು ಗೊತ್ತಾ]

ಆಮೇಲೆ ಬಂತು ಹೊಸ ಸುದ್ದಿ.!

ದರ್ಶನ್ ಮತ್ತು ದಿನಕರ್ ಕಾಂಬಿನೇಷನ್ ನಲ್ಲಿ ಮೂಡಿಬರಬೇಕಿದ್ದ 'ಸರ್ವಾಂತರ್ಯಾಮಿ' ಚಿತ್ರ ಮುಂದಕ್ಕೆ ಹೋಗಿದ್ದು, ತಮ್ಮ 50ನೇ ಚಿತ್ರವನ್ನು ಗೆಳೆಯರಿಗಾಗಿ ದರ್ಶನ್ ಮೀಸಲಿಟ್ಟಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಅಲ್ಲದೇ, ಈ ಚಿತ್ರದಿಂದ ಬರುವ ಹಣವನ್ನು ಮೈಸೂರಿನ ತಮ್ಮ ಗೆಳೆಯರ ಜೀವನಕ್ಕೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುವ ಬಗ್ಗೆ ದರ್ಶನ್ ಮನಸ್ಸು ಮಾಡಿರುವ ಬಗ್ಗೆ ವರದಿ ಆಗಿತ್ತು.

ಎಂ.ಡಿ.ಶ್ರೀಧರ್ ನಿರ್ದೇಶನ ಮಾಡಬೇಕಿತ್ತು.!

ಅಂದ್ಹಾಗೆ, ಗೆಳೆಯರಿಗಾಗಿ ಮೀಸಲಿಟ್ಟ ದರ್ಶನ್ ರವರ 50ನೇ ಚಿತ್ರವನ್ನ ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಾರೆ. 'ವೀರಂ' ಚಿತ್ರದ ರೀಮೇಕ್ ಇದಾಗಿರಲಿದೆ ಅಂತ ಹೇಳಲಾಗಿತ್ತು. ಆದರೆ ಈಗ ಈ ಪ್ಲಾನ್ ಕೂಡ ಬದಲಾಗಿರುವ ಹಾಗೆ ಕಾಣುತ್ತಿದೆ.[ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು!]

'ಸರ್ವಾಂತರ್ಯಾಮಿ' ಮುಂದಕ್ಕೆ ಹೋಗಲು ಕಾರಣ.?

ಮೂಲಗಳ ಪ್ರಕಾರ, 'ಸರ್ವಾಂತರ್ಯಾಮಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಇನ್ನೂ ಮುಗಿದಿಲ್ಲ. ಇನ್ನೂ 'ವೀರಂ' ಚಿತ್ರದ ರೀಮೇಕ್ ಬಗ್ಗೆ ಸುದ್ದಿಯೇ ಇಲ್ಲ. ಹೀಗಿರುವಾಗಲೇ, 'ಕುಂಬಿ' ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ರವರ '50'ನೇ ಸಿನಿಮಾ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವಾಗುತ್ತಾ.? ನೋಡೋಣ...

English summary
According to the latest Grapevine, 'Chowka' Director Tarun Sudheer to direct Challenging Star Darshan's 50th movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada