For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಕೈಗೆ ಸಿಕ್ಕಿಬಿದ್ದ ಮೇಲೆ ನರೇಶ್ -ಪವಿತ್ರಾ ಲೋಕೇಶ್ ತೆಗೆದುಕೊಂಡ ಖಡಕ್ ನಿರ್ಧಾರವೇನು?

  |

  ತೆಲುಗು ನಟ ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ಬೀದಿ ರಂಪಾಟ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ವಿಚ್ಛೇದನ ನೀಡದೆ ಪವಿತ್ರಾ ಲೋಕೇಶ್‌ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಆರೋಪ ಮಾಡಿದ್ದರು.

  ಕಳೆದ ಹಲವು ದಿನಗಳಿಂದ ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ಕಿತ್ತಾಟ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಲೇ ಇದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳು ಮಾಡುತ್ತಿದ್ದಂತೆ ಮೂವರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು.

  ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?

  ಮೈಸೂರಿನ ಹೋಟೆಲ್‌ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಒಟ್ಟಿಗೆ ಇರುವಾಗ ರಮ್ಯಾ ರಘುಪತಿ ರಂಪಾಟ ಮಾಡಿದ್ದರು. ಆ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಾಧ್ಯಮಗಳ ಮುಂದೆ ಬಂದಿಲ್ಲ. ಇತ್ತ ರಮ್ಯಾ ಕೂಡ ಸೈಲೆಂಟ್ ಆಗಿದ್ದಾರೆ. ಈ ಬೆಳವಣಿಗೆ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲೇ ಬಾರದು ಎಂದು ನಿರ್ಧರಿಸಿದ್ದಾರಂತೆ.

  ರಮ್ಯಾ ,ನರೇಶ್, ಪವಿತ್ರಾ ಲೋಕೇಶ್ ರಂಪಾಟ

  ರಮ್ಯಾ ,ನರೇಶ್, ಪವಿತ್ರಾ ಲೋಕೇಶ್ ರಂಪಾಟ

  ತೆಲುಗು ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಕಳೆದ ಹಲವು ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಪತ್ನಿಗೆ ವಿಚ್ಛೇದನ ನೀಡದೇನೆ ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ್ದರು. ಅಲ್ಲದೆ, ನರೇಶ್ ಒಬ್ಬ ಹೆಣ್ಣುಬಾಕ ಎಂದು ಆರೋಪ ಮಾಡಿದ್ದರು. ಮದುವೆ ಬಗ್ಗೆ ನರೇಶ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಇದೇ ವಿಚಾರವಾಗಿ ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ಮೂರವರು ತಮ್ಮ ವೈಯಕ್ತಿಕ ವಿಚಾರವನ್ನು ಬೀದಿಗೆ ತಂದು ರಂಪಾಟ ಮಾಡಿದ್ದರು.

  ಮೂರನೇ ಪತ್ನಿ ಕೈಯಲ್ಲಿ ಸಿಕ್ಕಿಬಿದ್ದ ನರೇಶ್-ಪವಿತ್ರಾ ಲೋಕೇಶ್: ರಮ್ಯಾ ರಘುಪತಿ ಮುಂದಿನ ನಡೆಯೇನು?ಮೂರನೇ ಪತ್ನಿ ಕೈಯಲ್ಲಿ ಸಿಕ್ಕಿಬಿದ್ದ ನರೇಶ್-ಪವಿತ್ರಾ ಲೋಕೇಶ್: ರಮ್ಯಾ ರಘುಪತಿ ಮುಂದಿನ ನಡೆಯೇನು?

  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಿರಲು ನಿರ್ಧಾರ

  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಿರಲು ನಿರ್ಧಾರ

  ಮೈಸೂರು ಹೋಟೆಲ್‌ನಲ್ಲಿ ನಡೆದ ಗಲಾಟೆ ಬಳಿಕ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬಂದಿಲ್ಲ. ರಮ್ಯಾ ವಿರುದ್ಧ ತಿರುಗೇಟು ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಲೇ ಬಾರದು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿರುವ ಇಬ್ಬರ ಸ್ನೇಹಿತರು ಇಂತಹದ್ದೊಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

  ಕಾನೂನು ಪ್ರಕಾರವೇ ಪವಿತ್ರಾ ಲೋಕೇಶ್ ಹೋರಾಟ?

  ಕಾನೂನು ಪ್ರಕಾರವೇ ಪವಿತ್ರಾ ಲೋಕೇಶ್ ಹೋರಾಟ?

  ತೆಲುಗು ನಟ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳಿಗೆ ಕಾನೂನು ಪ್ರಕಾರವೇ ಉತ್ತರ ಕೊಡಲು ಮುಂದಾಗಿದ್ದಾರೆ ಎಂದು ತೆಲುಗು ಮಾಧ್ಯಮ ವರದಿ ಮಾಡಿದೆ. ಈಗಾಗಲೇ ನರೇಶ್ ರಮ್ಯಾಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ಆದರೆ, ರಮ್ಯಾ ತನಗೆ ವಿಚ್ಛೇದನ ಬೇಡ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಈ ವಿಚಾರಕ್ಕಾಗಿ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಲೇ ಇದೆ ಎನ್ನಲಾಗಿದೆ.

  ಹೈದರಾಬಾದ್‌ನಲ್ಲಿ ನರೇಶ್-ಪವಿತ್ರಾ!

  ಹೈದರಾಬಾದ್‌ನಲ್ಲಿ ನರೇಶ್-ಪವಿತ್ರಾ!

  ಸದ್ಯ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಹೈದರಾಬಾದ್‌ನಲ್ಲಿದ್ದಾರೆ. ಮೊದಲಿನಂತೆ ಸಹಜ ಬದುಕಿಗೆ ಮರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತ ರಮ್ಯಾ ರಘುಪತಿ ತನ್ನ ತಾಯಿಯ ಅನಾರೋಗ್ಯದ ಹಿನ್ನೆಲೆ ತಲೆಕೆಡಿಸಿಕೊಂಡಿದ್ದು, ಶೀಘ್ರದಲ್ಲಿಯೇ ತೆಲುಗು ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಲಿದ್ದಾರೆ ಎಂದು ಆಪ್ತರು ಹೇಳುತ್ತಿದ್ದಾರೆ. ಆ ಬಳಿಕ ಈ ಪ್ರಕರಣಕ್ಕೆ ಅದ್ಯಾವ ತಿರುವು ಸಿಗಬಹುದೆಂದು ಈಗಲೇ ತಿಳಿಯುವುದು ಕಷ್ಟ.

  English summary
  Telugu Actor Naresh Babu and Pavitra Lokesh Decided Stop Giving Reaction to Media, Know More.
  Sunday, July 10, 2022, 14:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X