ತೆಲುಗು ನಟ ನಿತಿನ್ ಮದುವೆ ದಿಢೀರ್ ಮುಂದೂಡಿಕೆ.! ಏಕೆ ಹೀಗೆ.?

ತೆಲುಗಿನ ಸೂಪರ್ ಹಿಟ್ ಸಿನಿಮಾ 'ಜಯಂ' ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟ ನಿತಿನ್. 'ದಿಲ್', 'ಸೈ', 'ರಾಮ್', 'ದ್ರೋಣ', 'ಮಾರೋ', 'ಹಾರ್ಟ್ ಅಟ್ಯಾಕ್' ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ನಿತಿನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಇತ್ತೀಚೆಗಷ್ಟೇ ಬ್ರೇಕ್ ಆಗಿತ್ತು.

ಈ ವರ್ಷ ಏಪ್ರಿಲ್ 15 ರಂದು ದುಬೈನಲ್ಲಿ ನಿತಿನ್ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದ್ರೀಗ, ಹೊರಬಿದ್ದಿರುವ ಬ್ರೇಕಿಂಗ್ ನ್ಯೂಸ್ ಪ್ರಕಾರ, ನಿತಿನ್ ಮದುವೆ ಮುಂದಕ್ಕೆ ಹೋಗಿದೆ.

ನಿಗದಿ ಆಗಿದ್ದ ದಿನಾಂಕ (ಏಪ್ರಿಲ್ 15)ದಂದು ನಿತಿನ್ ಮದುವೆ ದುಬೈನಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ಏನು.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ..

ನಿತಿನ್ ಮದುವೆ ಮುಂದಕ್ಕೆ.!

ನಿತಿನ್ ಮದುವೆ ಮುಂದಕ್ಕೆ.!

ತೆಲುಗು ನಟ ನಿತಿನ್ ಮದುವೆ ಪೋಸ್ಟ್ ಪೋನ್ ಆಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಏಪ್ರಿಲ್ 15 ರಂದು ನಿಗದಿ ಆಗಿದ್ದ ಮದುವೆ, ಮೇ ತಿಂಗಳಲ್ಲಿ ಜರುಗಲಿದೆ. ದುಬೈನ ಐಷಾರಾಮಿ ಹೋಟೆಲ್ ನಲ್ಲಿ ನಿತಿನ್ ವಿವಾಹ ಮಹೋತ್ಸವ ನೆರವೇರಲಿದೆ.

ಕಾರಣ ಏನು.?

ಕಾರಣ ಏನು.?

ದಿಢೀರ್ ಅಂತ ನಿತಿನ್ ಮದುವೆ ಮುಂದಕ್ಕೆ ಹೋಗಲು ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದ್ರೆ, ಮದುವೆ ತಯಾರಿ ಮಾಡಿಕೊಳ್ಳಲು ಕಡಿಮೆ ಸಮಯ ಉಳಿದಿದೆ ಎಂಬ ಕಾರಣಕ್ಕೆ, ಕುಟುಂಬಸ್ಥರು ಏಪ್ರಿಲ್ ಬದಲು ಮೇ ತಿಂಗಳಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹುಡುಗಿ ಯಾರು.?

ಹುಡುಗಿ ಯಾರು.?

ನಿತಿನ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಶಾಲಿನಿ. ಯು.ಕೆ.ನಲ್ಲಿ ಶಾಲಿನಿ ಎಂ.ಬಿ.ಎ ವಿದ್ಯಾಭ್ಯಾಸ ಮುಗಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಿತಿನ್ ಮತ್ತು ಶಾಲಿನಿ ಆತ್ಮೀಯ ಸ್ನೇಹಿತರು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ಮೇಲೆ ಅದಕ್ಕೆ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ. ಗುರು-ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ನಿತಿನ್-ಶಾಲಿನಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

'ಭೀಷ್ಮ' ಆಗಿ ತೆರೆಮೇಲೆ ನಿತಿನ್.!

'ಭೀಷ್ಮ' ಆಗಿ ತೆರೆಮೇಲೆ ನಿತಿನ್.!

ವೆಂಕಿ ಕುಡುಮುಲಾ ನಿರ್ದೇಶನದ 'ಭೀಷ್ಮ' ಚಿತ್ರದಲ್ಲಿ ನಿತಿನ್ ನಾಯಕನಾಗಿ ಅಭಿನಯಿಸಿದ್ದಾರೆ. ನಿತಿನ್ ಗೆ ನಾಯಕಿ ಆಗಿ ರಶ್ಮಿಕಾ ಮಂದಣ್ಣ ಇದ್ದಾರೆ. ಫೆಬ್ರವರಿ 21 ರಂದು 'ಭೀಷ್ಮ' ತೆರೆಗೆ ಬರಲಿದೆ. ಇದಾದ ಬಳಿಕ ನಿತಿನ್ ಕೈಯಲ್ಲಿ ಎರಡ್ಮೂರು ಪ್ರಾಜೆಕ್ಟ್ ಗಳಿವೆ.

More from Filmibeat

English summary
Telugu Actor Nithin marriage postponed to May instead of April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X