'ಚಿಲ್ಲಂ' ಚಿತ್ರಕ್ಕಾಗಿ ರಾಘಣ್ಣ ಬದಲಿಗೆ ಬಂದ ಮತ್ತೊಬ್ಬ 'ಸ್ಟಾರ್' ನಟ.!
Recommended Video

ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಬೇಕಿತ್ತು. ಆರಂಭದಲ್ಲಿ ಸಿನಿಮಾದಲ್ಲಿ ನಟಿಸುವ ಒಲವು ಹೊಂದಿದ್ದ ರಾಘಣ್ಣ ಈಗ 'ಚಿಲ್ಲಂ' ಚಿತ್ರಕ್ಕೆ ನೋ ಎಂದಿದ್ದಾರೆ.
ಇದೀಗ, ಚಿಲ್ಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಿಟ್ಟ ಪಾತ್ರವನ್ನ ನಿಭಾಯಿಸಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ, ಈ ನಟ ತೆಲುಗು ಇಂಡಸ್ಟ್ರಿಯವರು ಎಂಬುದು ವಿಶೇಷ.
ಅಷ್ಟಕ್ಕೂ, 'ಚಿಲ್ಲಂ' ಚಿತ್ರವನ್ನ ರಾಘಣ್ಣ ದಿಢೀರ್ ಅಂತ ಕೈ ಬಿಡಲು ಕಾರಣವೇನು.? ರಾಘಣ್ಣ ಹೊರಬಂದ ನಂತರ ಮನೋರಂಜನ್ ಚಿತ್ರಕ್ಕೆ ಸಾಥ್ ನೀಡಲಿರುವ ಆ ದೊಡ್ಡ ಸ್ಟಾರ್ ನಟ ಯಾರು.? ಎಂಬ ಕುತೂಹಲ ಈಗ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ಓದಿ....

ವಿಲನ್ ಪಾತ್ರ ಬೇಡ
ಚಿಲ್ಲಂ ಚಿತ್ರದಲ್ಲಿ ರಾಘಣ್ಣ ಮಾಡಬೇಕಿದಿದ್ದು ವಿಲನ್ ಪಾತ್ರ. ಹಲವು ವರ್ಷಗಳ ಬಳಿಕ ತೆರೆಮೇಲೆ ಕಮ್ ಬ್ಯಾಕ್ ಮಾಡುವ ಬಯಕೆ ಹೊಂದಿದ್ದ ರಾಘಣ್ಣ ಹೊಸ ರೀತಿಯಲ್ಲಿ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದರು. ಆದ್ರೆ, ಕೊನೆಯ ಸಮಯದಲ್ಲಿ ಈ ಸಿನಿಮಾವನ್ನ ಕೈ ಬಿಟ್ಟಿದ್ದಾರೆ. ವಿಲನ್ ಪಾತ್ರವನ್ನ ಮಾಡದಂತೆ ಅಭಿಮಾನಿಗಳು ಒತ್ತಾಯಿಸಿದ ಕಾರಣ ಈ ಪ್ರಾಜೆಕ್ಟ್ ನಿಂದ ದೂರು ಉಳಿದಿರುವುದಾಗಿ ರಾಘಣ್ಣ ತಿಳಿಸಿದ್ದಾರೆ.

ರಾಘಣ್ಣ ಬದಲು ಜಗಪತಿ ಬಾಬು.!
ರಾಘವೇಂದ್ರ ರಾಜ್ ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ ಈಗ ತೆಲುಗು ಸ್ಟಾರ್ ನಟ ಜಗಪತಿ ಬಾಬು ಅವರನ್ನ ಕರೆತರಲು ಪ್ರಯತ್ನ ಸಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮಾತುಕತೆ ನಡೆಯುತ್ತಿದೆ
ಅಂದ್ಹಾಗೆ, ಜಗಪತಿ ಬಾಬು ಈ ಸಿನಿಮಾವನ್ನ ಇನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಈ ಚಿತ್ರದಲ್ಲಿ ನಟಿಸುವಂತೆ ಸಂಪರ್ಕಿಸಲಾಗಿದೆ. ಒಂದು ಹಂತದ ಮಾತುಕತೆ ಕೂಡ ಮಾಡಲಾಗಿದೆ. ಈಗಾಗಲೇ ಕಥೆ ಮತ್ತು ಪಾತ್ರದ ಬಗ್ಗೆ ಮಾಹಿತಿ ಪಡೆದಿರುವ ಜಗಪತಿ ಬಾಬು ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ನಿರೀಕ್ಷೆ ಚಿತ್ರತಂಡಕ್ಕಿದೆಯಂತೆ.

ಪ್ರಿಯಾಂಕಾ ಹೀರೋಯಿನ್
ಇನ್ನು ಮನೋರಂಜನ್ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವಾಕರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ 'ಕ್ಲಾಟೆ' ಎಂಬ ಸಿನಿಮಾ ಮಾಡಿದ್ದ ಚಂದ್ರಕಲಾ ಈಗ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ

'ಅಮ್ಮನ ಮನೆ'ಯಲ್ಲಿ ರಾಘಣ್ಣ
ಚಿಲ್ಲಂ ಚಿತ್ರವನ್ನ ಕೈಬಿಟ್ಟ ರಾಘಣ್ಣ 'ಅಮ್ಮನ ಮನೆ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಆಗಸ್ಟ್ 15 ರಂದು ರಾಘವೇಂದ್ರ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಲಾಂಚ್ ಆಗಲಿದೆಯಂತೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಕೆಲಸ ಮತ್ತು ಸಂಸಾರ ಎರಡು ನಿಭಾಯಿಸುವ ಗೃಹಸ್ಥನ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











