For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಜೇಮ್ಸ್' ಚಿತ್ರಕ್ಕೆ ಎಂಟ್ರಿಕೊಟ್ಟ ತೆಲುಗು ಸ್ಟಾರ್ ನಟ!

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಯುವರತ್ನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಬಳಿಕ ಚೇತನ್ ಕುಮಾರ್ ನಿರ್ದೇಶಿಸಲಿರುವ ಜೇಮ್ಸ್ ಸಿನಿಮಾ ಆರಂಭಿಸಲಿದ್ದಾರೆ ಅಪ್ಪು.

  ಕಳೆದ ಎರಡ್ಮೂರು ವರ್ಷದಿಂದ ಜೇಮ್ಸ್ ಸಿನಿಮಾ ಭಾರಿ ಸದ್ದು ಮಾಡ್ತಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತೆ ಜೇಮ್ಸ್ ಎಂಬ ನಿರೀಕ್ಷೆಯಿಂದ ಅಪ್ಪು ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ, ಜೇಮ್ಸ್ ಸಿನಿಮಾ ಕುರಿತು ಸರ್ಪ್ರೈಸ್ ಸುದ್ದಿಯೊಂದು ಹೊರಬಿದ್ದಿದೆ. ಪುನೀತ್ ಜೊತೆ ತೆಲುಗು ಸ್ಟಾರ್ ನಟರೊಬ್ಬರು ಎಂಟ್ರಿಯಾಗಿದ್ದಾರೆ ಎಂದು ಹೇಳಲಾಗಿದೆ. ಯಾರದು? ಮುಂದೆ ಓದಿ...

  'ಜೇಮ್ಸ್' ಚಿತ್ರದಿಂದ ರಿವೀಲ್ ಆಯ್ತು ಪುನೀತ್ ಮತ್ತೊಂದು ಲುಕ್'ಜೇಮ್ಸ್' ಚಿತ್ರದಿಂದ ರಿವೀಲ್ ಆಯ್ತು ಪುನೀತ್ ಮತ್ತೊಂದು ಲುಕ್

  ಜೇಮ್ಸ್ ಚಿತ್ರಕ್ಕೆ ಶ್ರೀಕಾಂತ್ ಎಂಟ್ರಿ

  ಜೇಮ್ಸ್ ಚಿತ್ರಕ್ಕೆ ಶ್ರೀಕಾಂತ್ ಎಂಟ್ರಿ

  ಚೇತನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಜೇಮ್ಸ್ ಚಿತ್ರಕ್ಕೆ ಟಾಲಿವುಡ್ ಸ್ಟಾರ್ ನಟ ಶ್ರೀಕಾಂತ್ ಎಂಟ್ರಿಯಾಗಿದ್ದಾರೆ ಎಂದು ಹೇಳಲಾಗಿದೆ.

  ಅಧಿಕೃತ ಆಗಬೇಕಿದೆ

  ಅಧಿಕೃತ ಆಗಬೇಕಿದೆ

  ಪುನೀತ್ ರಾಜ್ ಕುಮಾರ್ ಬಿಟ್ಟರೆ ಜೇಮ್ಸ್ ಸಿನಿಮಾದಲ್ಲಿ ಬೇರೆ ಯಾವ ಕಲಾವಿದರು ಆಯ್ಕೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ, ಶ್ರೀಕಾಂತ್ ಎಂಟ್ರಿ ಸಹ ಸರ್ಪ್ರೈಸ್ ಆಗಿದೆ. ಇದು ನಿಜನಾ ಅಥವಾ ಕೇವಲ ವದಂತಿ ಎನ್ನುವುದು ಚರ್ಚೆಯಾಗ್ತಿದೆ.

  'ದಿ ವಿಲನ್' ಚಿತ್ರದಲ್ಲಿ ಶ್ರೀಕಾಂತ್

  'ದಿ ವಿಲನ್' ಚಿತ್ರದಲ್ಲಿ ಶ್ರೀಕಾಂತ್

  ತೆಲುಗು ನಟ ಶ್ರೀಕಾಂತ್ ಇದುವರೆಗೂ ಕನ್ನಡದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಕೊನೆಯದಾಗಿ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದ ದಿ ವಿಲನ್ ಸಿನಿಮಾದಲ್ಲಿ ಶ್ರೀಕಾಂತ್ ವಿಲನ್ ಆಗಿ ಕಾಣಿಸಿಕೊಂಡಿದ್ದರು.

  ರಾಮ್-ಲಕ್ಷ್ಮಣ ಮಾಸ್ಟರ್

  ರಾಮ್-ಲಕ್ಷ್ಮಣ ಮಾಸ್ಟರ್

  ಈಗಾಗಲೇ ಜೇಮ್ಸ್ ಚಿತ್ರೀಕರಣ ಆರಂಭವಾಗಿದೆ. ಜೇಮ್ಸ್ ಚಿತ್ರಕ್ಕೆ ತೆಲುಗಿನ ಖ್ಯಾತ ಫೈಟ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಸಹ ಎಂಟ್ರಿಯಾಗಿದ್ದು, ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಲಿದ್ದಾರೆ. ಈ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಜೇಮ್ಸ್ ತಾಂತ್ರಿಕ ವರ್ಗ

  ಜೇಮ್ಸ್ ತಾಂತ್ರಿಕ ವರ್ಗ

  ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಕಿಶೋರ್ ಪತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶ್ರೀಷಾ ಕುದುವಲ್ಲಿ ಛಾಯಾಗ್ರಹಣ ಇದೆ. ದೀಪು ಎಸ್ ಕುಮಾರ್ ಎಡಿಟಿಂಗ್, ಚೇತನ್ ಕುಮಾರ್ ಅವರ ಸಾಹಿತ್ಯ ಒಳಗೊಂಡಿದೆ.

  English summary
  Tollywood Actor Srikanth to play a prominent role in Puneeth Rajkumar's James Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X