ನರೇಶ್-ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್: ಏನಂತಿದೆ ಟಾಲಿವುಡ್‌?

By ಫಿಲ್ಮಿಬೀಟ್ ಡೆಸ್ಕ್

ಇಬ್ಬರು ಹಿರಿಯ ಕಲಾವಿದರು ಕೆಲವು ದಿನಗಳ ಹಿಂದಷ್ಟೆ ವಿವಾದಕ್ಕೆ ಸಿಲುಕಿದ್ದರು. ಅವರು ಮತ್ಯಾರೂ ಅಲ್ಲ ನರೇಶ್ ಹಾಗೂ ಪವಿತ್ರಾ ಲೋಕೇಶ್. ಇವರಿಬ್ಬರ ಅಫೇರ್ ಇಡೀ ದೇಶದಲ್ಲಿಯೇ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಈ ಆರೋಪ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಅದರಲ್ಲೂ ನರೇಶ್ ಹಾಗೂ ಪ್ರವಿತಾ ಲೋಕೇಶ್ ಇಬ್ಬರು ಮೈಸೂರಿನ ಹೊಟೇಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈ ಸಿಕ್ಕಿಬಿದ್ದಿದ್ದರು. ಆ ಬಳಿಕ ಇಬ್ಬರ ನಡುವಿನ ಅಫೇರ್ ಕನ್ಫರ್ಮ್ ಆಗಿತ್ತು. ಆಗಲೂ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರೂ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಈಗ ಟಾಲಿವುಡ್‌ನಿಂದ ಮತ್ತೊಂದು ಸುದ್ದಿ ಹರಿದು ಬರುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ನರೇಶ್-ಪವಿತ್ರಾ ಲೋಕೇಶ್ ವಿವಾದ

ನರೇಶ್-ಪವಿತ್ರಾ ಲೋಕೇಶ್ ವಿವಾದ

ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಟಾಲಿವುಡ್‌ನಲ್ಲಿ ಬಹುಬೇಡಿಕೆ ಕಲಾವಿದರು. ಇಬ್ಬರೂ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಇಬ್ಬರೂ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಆದರೆ, ಇತ್ತೀಚೆಗೆ ಇದೇ ಜೋಡಿ ವಿವಾದವನ್ನು ಮೈಮೇಲೆ ಎಳೆದುಕೊಂಡು ರಾಡಿ ಮಾಡಿಕೊಂಡಿತ್ತು. ಪವಿತ್ರಾ ಲೋಕೇಶ್‌ ಹಾಗೂ ನರೇಶ್ ವಿವಾದದ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ.

ನರೇಶ್- ಪವಿತ್ರಾ ಲೋಕೇಶ್ ಬ್ರೇಕಪ್?

ನರೇಶ್- ಪವಿತ್ರಾ ಲೋಕೇಶ್ ಬ್ರೇಕಪ್?

ಮಾಧ್ಯಮಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಹಲ್‌ಚಲ್ ಎಬ್ಬಿಸಿದ ಬಳಿಕ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಇವರಿಬ್ಬರ ನಡುವಿನ ಸಂಬಂಧ ಸರಿಯಾಗಿಲ್ಲ. ಇಬ್ಬರೂ ಕಿತ್ತಾಡಿಕೊಂಡಿದ್ದು, ಬೇರೆಯಾಗಿದ್ದಾರೆ ಅಂತ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ತೆಲುಗು ವೆಬ್‌ ಪೋರ್ಟಲ್‌ಗಳು ಈ ಸುದ್ದಿಯನ್ನು ಪ್ರಕಟಿಸಿದ ಬಳಿಕ ಇಬ್ಬರೂ ಆರ್ಟಿಸ್ಟ್‌ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನರೇಶ್ ಅಥವಾ ಪವಿತ್ರಾ ಲೋಕೇಶ್ ಪ್ರತಿಕ್ರಿಯೆ ನೀಡಿದ ಬಳಿಕವೇ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ.

ಸಿನಿಮಾಗಳಲ್ಲೂ ಆಫರ್ ಸಿಕ್ಕಿಲ್ಲ

ಸಿನಿಮಾಗಳಲ್ಲೂ ಆಫರ್ ಸಿಕ್ಕಿಲ್ಲ

ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾದದ ಬಳಿಕ ಟಾಲಿವುಡ್‌ ಫಿಲ್ಮ್‌ಮೇಕರ್ಸ್ ಸಿನಿಮಾ ಕೊಡುತ್ತಿಲ್ಲ ಅನ್ನೋ ಮಾತಿದೆ. ಬಹುಬೇಡಿಕೆಯ ನಟಿಯಾಗಿದ್ದ ಪವಿತ್ರಾ ಲೋಕೇಶ್‌ಗೆ ಈ ಪ್ರಕರಣದ ಬಳಿಕ ಭಾರೀ ಹಿನ್ನೆಡೆಯಾಗಿದೆ ಎನ್ನಲಾಗಿದೆ. ಅಲ್ಲದೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ ಎರಡರಲ್ಲೂ ಪವಿತ್ರಾ ಲೋಕೇಶ್ ವಿರುದ್ಧವೇ ಹಲವು ಆರೋಪ ಮಾಡಿದ್ದರು. ಹೀಗಾಗಿ ಹೊಸ ಸಿನಿಮಾಗಳಿಲ್ಲದೆ ಕಂಗಾಲಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

3ನೇ ಪತ್ನಿಯಿಂದ ನರೇಶ್‌ಗೆ ಸಂಕಷ್ಟ!

3ನೇ ಪತ್ನಿಯಿಂದ ನರೇಶ್‌ಗೆ ಸಂಕಷ್ಟ!

ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ತಿರುಗಿಬಿದ್ದಿದ್ದರು. ನನಗೆ ವಿಚ್ಛೇದನ ಬೇಡ ಎಂದು ಸಾರಿ ಹೇಳಿದ್ದರು. ಅಲ್ಲದೆ ನರೇಶ್ ಬಗ್ಗೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಈ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಅನ್ನೋ ಮಾತು ಕೇಳಿ ಬಂದಿದೆ. ಆದ್ರೀಗ ಇಬ್ಬರ ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸ್ಪಷ್ಟನೆ ಮಾಡಬೇಕಿದೆ.

More from Filmibeat

English summary
Telugu Actor V K Naresh And Pavitra Lokesh Breakup Rumours Goes Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X