ಶಿವಣ್ಣ ಚಿತ್ರಕ್ಕಾಗಿ ಕನ್ನಡಕ್ಕೆ ಬಂದ ತೆಲುಗು ಚೆಲುವೆ.!

Recommended Video

ಶಿವಣ್ಣನಿಗಾಗಿ ಬಂದ ತೆಲುಗು ಫೇಮಸ್ ನಟಿ..! | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಗಳಿಗೆ ಹೊಸ ಹೊಸ ನಾಯಕಿಯರು ಬರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಅದರಂತೆ ಇದೀಗ ಮತ್ತೊಬ್ಬ ತೆಲುಗು ನಟಿ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ.

ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕಾಗಿ ಟಾಲಿವುಡ್ ನ ಸಕ್ಸಸ್ ಫುಲ್ ನಾಯಕಿ ಈಶಾ ರೆಬ್ಬಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಅಭಿಮಾನಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಟೈಟಲ್ ನಿಂದಲೇ ಹೆಚ್ಚು ಸದ್ದು ಮಾಡುತ್ತಿದೆ.

ಸದ್ಯ, ಜೂನಿಯರ್ ಎನ್.ಟಿ.ಆರ್ ಅಭಿನಯಿಸುತ್ತಿರುವ 'ಅರವಿಂದ ಸಮೇತ' ಚಿತ್ರದಲ್ಲಿ ನಟಿಸುತ್ತಿರುವ ಈ ನಟಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅಷ್ಟಕ್ಕೂ, ಈಶಾ ರೆಬ್ಬಾ ಯಾರು.? ಯಾವ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗ್ತಿದ್ದಾರೆ ಎಂಬ ಕುತೂಹಲಕಾರಿ ವಿಷ್ಯ ತಿಳಿಯಲು ಮುಂದೆ ಓದಿ.....

ಎಸ್.ಆರ್.ಕೆಗೆ ಜೋಡಿ.!

ಎಸ್.ಆರ್.ಕೆಗೆ ಜೋಡಿ.!

ರಾಜ್ ಕುಟುಂಬದ ಸದಸದ್ಯರಾಗಿರುವ ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ 'ಎಸ್.ಆರ್.ಕೆ' ಚಿತ್ರಕ್ಕಾಗಿ ಈಶಾ ರೆಬ್ಬಾ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಂತಿಮ ಹಂತದ ಮಾತುಕತೆ ಮುಗಿದಿದ್ದು, ಅಧಿಕೃತವಾಗಿ ಘೋಷಣೆಯೊಂದೆ ಬಾಕಿ ಎನ್ನಲಾಗಿದೆ.

ಉಪನ್ಯಾಸಕಿ ಪಾತ್ರದಲ್ಲಿ ಈಶಾ.!

ಉಪನ್ಯಾಸಕಿ ಪಾತ್ರದಲ್ಲಿ ಈಶಾ.!

ಎಸ್.ಆರ್.ಕೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿರುವ ಈಶಾ ಉಪನ್ಯಾಸಕಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಇವರಿಗೆ ಮೊದಲ ಕನ್ನಡ ಸಿನಿಮಾ. ಇದಕ್ಕೂ ಮುಂಚೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಅನುಭವ ಹೊಂದಿದ್ದಾರೆ.

ಯಾರು ಈ ಈಶಾ ರೆಬ್ಬಾ.?

ಯಾರು ಈ ಈಶಾ ರೆಬ್ಬಾ.?

2013ರಲ್ಲಿ 'ಅಂತಕಾ ಮುಂದು ಆ ತರ್ವಾತಾ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಈಶಾ, ಬಂಡಿಪೋಟ, ಅಮಿ ತುಮಿ, ದರ್ಶಕಡು, ಅವೇ ಅಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ 'ಓಯ್' ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಜೂನಿಯರ್ ಎನ್.ಟಿ.ಆರ್ ಅವರ 'ಅರವಿಂದ ಸಮೇತ' ಚಿತ್ರದಲ್ಲಿ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

ಶಿವಣ್ಣ ಅಭಿಮಾನಿಯ ಎಸ್.ಆರ್.ಕೆ

ಶಿವಣ್ಣ ಅಭಿಮಾನಿಯ ಎಸ್.ಆರ್.ಕೆ

ಅಂದ್ಹಾಗೆ, ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಕಿರಣ್ ಕುಮಾರ್. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಸದ್ಯ, ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣ ಸಜ್ಜಾಗಿರುವ ಈ ಸಿನಿಮಾ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ.

More from Filmibeat

English summary
Telugu actress Eesha Rebba to make Kannada debut with Shiva rajkumar's SRK movie. Eesha, who started with Telugu film Anthaka Mundu Aa Tarvatha, has worked in Bandipotu, Oyee, Ami Thumi and Awe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X