ಖ್ಯಾತ ನಟನ ಜೊತೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ?

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸದ್ಯ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Recommended Video

ವೈದ್ಯರಿಗೆ ಕಲ್ಲು ಹೊಡಯುವುದು ನಿಲ್ಲಿಸಿ ಎಂದ ಸಲ್ಮಾನ್ ಖಾನ್

ವಿಶೇಷ ಅಂದರೆ ಫೈಟರ್ ತೆಲುಗು ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಈ ಮೂಲಕ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ ಅವರನ್ನು ಹಿಂದಿ ಚಿತ್ರರಂಗಕ್ಕೂ ಪರಿಚಯಿಸುತ್ತಿದ್ದಾರೆ. ಈ ನಡುವೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ ಕೂಡ ಸದ್ದು ಮಾಡುತ್ತಿದ್ದಿದೆ. ಹೌದು, ಪುರಿ ಜಗನ್ನಾಥ್ ಬಾಲಿವುಡ್ ನ ಖ್ಯಾತ ನಟನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗಾದರೆ ಆ ನಟ ಯಾರು? ಮುಂದೆ ಓದಿ..

ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ ಪುರಿ ಜಗನ್ನಾಥ್

ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ ಪುರಿ ಜಗನ್ನಾಥ್

ಪುರಿ ಜಗನ್ನಾಥ್ ಮತ್ತೆ ಹಿಂದಿ ಸಿನಿಮರಂಗಕ್ಕೆ ಮರಳಿದ್ದಾರೆ. 2011ರಲ್ಲಿ

ಬುದಾ ಹೋಗಾ ಟೆರ್ರಾ ಬಾಪ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪುರಿ ಆ ನಂತರ ಮತ್ತೆ ಹಿಂದಿ ಸಿನಿಮಾರಂಗದ ಕಡೆ ಹೋಗಿರಲಿಲ್ಲ. ಸದ್ಯ ಫೈಟರ್ ನಿರ್ದೇಶನ ಮಾಡುತ್ತಿರುವ ಫೈಟರ್ ಸಿನಿಮಾ ಹಿಂದಿಯಲ್ಲಿಯೂ ರಿಲೀಸ್ ಆಗುತ್ತಿದೆ. ಆದರೆ ಅದು ಸಂಪೂರ್ಣ ಹಿಂದಿ ಸಿನಿಮಾವಲ್ಲ. ಫೈಟರ್ ಸಿನಿಮಾ ಬ್ಯುಸಿಯ ನಡುವೆಯೂ ಪುರಿ ಬಾಲಿವುಡ್ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

ಸಲ್ಮಾನ್ ಖಾನ್ ಗೆ ನಿರ್ದೇಶನ

ಸಲ್ಮಾನ್ ಖಾನ್ ಗೆ ನಿರ್ದೇಶನ

ನಿರ್ದೇಶಕ ಪುರಿ ಜಗನ್ನಾಥ್ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೆ ಸಲ್ಮಾನ್ ಖಾನ್ ಗೆ ಕಥೆಯ ಬಗ್ಗೆ ವಿವರಿಸಿದ್ದು, ಕಥೆ ಕೇಳಿ ಇಂಪ್ರೆಸ್ ಆಗಿದ್ದಾರಂತೆ. ಕಥೆ ಅಭಿವೃದ್ದಿ ಮಾಡಲು ಪುರಿ ಜಗನ್ನಾಥ್ ಗೆ ಹೇಳಿದ್ದಾರಂತೆ.

ಲಾಕ್ ಡೌನ್ ನಲ್ಲಿ ಸಿದ್ಧವಾಗುತ್ತಿದೆ ಕಥೆ

ಲಾಕ್ ಡೌನ್ ನಲ್ಲಿ ಸಿದ್ಧವಾಗುತ್ತಿದೆ ಕಥೆ

ಲಾಕ್ ಡೌನ್ ಅವದಿಯಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಕಥೆಯನ್ನು ಸಿದ್ಧಪಡಿಸುತ್ತಿದ್ದಾರಂತೆ. ಈಗಾಗಲೆ ಬಹುತೇಕ ಕಥೆ ಸಂಪೂರ್ಣಗೊಳಿಸಿರುವ ಪುರಿ ಜಗನ್ನಾಥ್ ಯಾವಾಗ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿಸದೆ. ಪುರಿ ಮತ್ತು ಸಲ್ಮಾನ್ ಖಾನ್ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾವಾಗಿರಲಿದೆಯಂತೆ.

ತೆಲುಗು ಸಿನಿಮಾದ ರಿಮೇಕ್ ನಲ್ಲಿ ನಟಿಸಿರುವ ಸಲ್ಮಾನ್

ತೆಲುಗು ಸಿನಿಮಾದ ರಿಮೇಕ್ ನಲ್ಲಿ ನಟಿಸಿರುವ ಸಲ್ಮಾನ್

ಸಲ್ಮಾನ್ ಖಾನ್ ದಕ್ಷಿಣ ಭಾರತೀಯ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗು ಸಿನಿಮಾದ ಮೇಲೆ ಬಾಲಿವುಡ್ ನವರಿಗೆ ಎಲ್ಲಿಲ್ಲದ ಮೋಹ. ಹಾಗಾಗಿ ತೆಲುಗು ನಿರ್ದೇಶಕರ ಜೊತೆ ಕೆಲಸ ಮಾಡಲು ಸಲ್ಲು ಸಹ ಉತ್ಸುಕರಾಗಿರುತ್ತಾರೆ. ಪೋಕಿರಿ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಸಲ್ಲು ಮಿಂಚಿದ್ದರು. ಈಗ ತೆಲುಗು ನಿರ್ದೇಶಕರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

ರಾಧೆ ಮತ್ತು ಕಬಿ ಈದ್ ಕಬಿ ದಿವಾಳಿ ಸಿನಿಮಾದಲ್ಲಿ ಸಲ್ಮಾನ್

ರಾಧೆ ಮತ್ತು ಕಬಿ ಈದ್ ಕಬಿ ದಿವಾಳಿ ಸಿನಿಮಾದಲ್ಲಿ ಸಲ್ಮಾನ್

ಸಲ್ಮಾನ್ ಸದ್ಯ ರಾಧೆ ಮತ್ತು ಕಬಿ ಈದ್ ಕಬಿ ದಿವಾಳಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ರಾಧೆ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿರುವ ಸಲ್ಮಾನ್, ಜೊತೆಗೆ ಕಬಿ ಈದ್ ಕಬಿ ದಿವಾಳಿ ಸಿನಿಮಾದಲ್ಲೂ ನಿರತಾಗಿದ್ದಾರೆ. ಈ ಎರಡು ಸಿನಿಮಾ ಮುಗಿದ ಬಳಿಕ ಪುರಿ ಜಗನ್ನಾಥ್ ಸಿನಿಮಾದಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.

More from Filmibeat

English summary
Is Telugu director Puri Jagannadh will direct to Salman Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X