ಮತ್ತೆ ಸೂಪರ್ ಸ್ಟಾರ್ 'ಬಾಷಾ' ರೀಮೆಕ್? ಹೀರೊ ಯಾರು ಗೊತ್ತಾ?

ರಜನಿಕಾಂತ್ ಸಿನಿಕರಿಯರ್‌ನಲ್ಲಿ ಎಂದೂ ಮರೆಯಲಾಗದ ಸಿನಿಮಾ 'ಬಾಷಾ'. 1995ರಲ್ಲಿ ತೆರೆಗಪ್ಪಳಿಸಿದ ಈ ಗ್ಯಾಂಗ್‌ಸ್ಟರ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಈ ಚಿತ್ರವನ್ನು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರೀಮೆಕ್ ಮಾಡಿ ಗೆದ್ದಿದ್ದರು. ಇದೀಗ ಮತ್ತೆ ಈ ಚಿತ್ರವನ್ನು ರೀಮೆಕ್ ಮಾಡುವ ಬಗ್ಗೆ ಚರ್ಚೆ ನಡೀತಿದೆ.

ಸುರೇಶ್ ಕೃಷ್ಣ ನಿರ್ದೇಶನದ 'ಬಾಷಾ' ಸಿನಿಮಾ 90ರ ದಶಕದ ಬ್ಲಾಕ್‌ಬಸ್ಟರ್ ಸಿನಿಮಾ. ದಕ್ಷಿಣ ಭಾರತದಲ್ಲಿ ಈ ಸಿನಿಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಚಿತ್ರದಲ್ಲಿ ಮಾಣಿಕಂ ಹಾಗೂ ಮಾಣಿಕ್ ಬಾಷಾ ಆಗಿ 2 ಶೇಡ್‌ಗಳಿದ್ದ ಪಾತ್ರದಲ್ಲಿ ಸೂಪರ್ ಸ್ಟಾರ್ ಅಬ್ಬರಿಸಿದ್ದರು. ಇನ್ನು ಡಾನ್ ಬಾಷಾ ಆಗಿ ತಲೈವಾ ಲುಕ್ಕು, ಗೆಪ್ಪು, ಸ್ಟೈಲ್, ಬಾಡಿ ಲಾಂಗ್ವೇಜ್, ಸ್ವಾಗ್ ಇನ್ನು ಅಭಿಮಾನಿಗಳು ಮರೆತ್ತಿಲ್ಲ. ಈ ಚಿತ್ರವನ್ನು ಮತ್ತೆ ತಮಿಳಿನಲ್ಲಿ ರೀಮೆಕ್ ಮಾಡುವ ಬಗ್ಗೆ ಗುಸುಗುಸು ಶುರುವಾಗಿದೆ.

ಹಳೇ ಚಿತ್ರವನ್ನು ಅದೇ ಭಾಷೆಯಲ್ಲಿ ರೀಮೆಕ್ ಮಾಡಿ ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ಕೆಲವೊಮ್ಮೆ ನಡೆಯುತ್ತದೆ. ಈ ಹಿಂದೆ ರಜನಿಕಾಂತ್ ನಟನೆಯ 'ಬಿಲ್ಲಾ' ಚಿತ್ರವನ್ನು ಥಲಾ ಅಜಿತ್ ರೀಮೆಕ್ ಮಾಡಿ ಗೆದ್ದಿದ್ದರು. ಮುಂದೆ ಸಿನಿಮಾ ತೆಲುಗಿಗೂ ರೀಮೆಕ್ ಆಗಿತ್ತು.

'ಬಾಷಾ' ರೀಮೆಕ್‌ನಲ್ಲಿ ಥಲಾ ಅಜಿತ್?

'ಬಾಷಾ' ರೀಮೆಕ್‌ನಲ್ಲಿ ಥಲಾ ಅಜಿತ್?

ರಜನಿಕಾಂತ್ ನಟನೆಯ ಎವರ್‌ಗ್ರೀನ್ 'ಬಾಷಾ' ಚಿತ್ರವನ್ನು ಅಜಿತ್ ರೀಮೆಕ್ ಮಾಡುತ್ತಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ಈ ಹಿಂದೆ 'ಬಿಲ್ಲಾ' ಚಿತ್ರವನ್ನು ರೀಮೆಕ್ ಮಾಡಿ ಗೆದ್ದಿದ್ದ ನಿರ್ದೇಶಕ ವಿಷ್ಣುವರ್ಧನ್ ಮತ್ತೊಮ್ಮೆ ಅಂತಹ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ರೀಮೆಕ್ ರೈಟ್ಸ್ ಕೂಡ ನಿರ್ದೇಶಕರ ಬಳಿ ಇದೆಯಂತೆ. 'ಥುನಿವು' ನಂತರ ಅಜಿತ್ ಈ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. 'ಬಾಷಾ' ಕಥೆನಯನ್ನು ಕೊಂಚ ಬದಲಿಸುವುದು ಅಥವಾ ಅದರ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೀತಿದೆ.

'ಕೋಟಿಗೊಬ್ಬ' ಆಗಿ ದಾದಾ ಸಕ್ಸಸ್

'ಕೋಟಿಗೊಬ್ಬ' ಆಗಿ ದಾದಾ ಸಕ್ಸಸ್

ತಲೈವಾ ನಟನೆಯ 'ಬಾಷಾ' ಸಿನಿಮಾ 2001ರಲ್ಲಿ ಕನ್ನಡಕ್ಕೂ ರೀಮೆಕ್ ಆಗಿತ್ತು. ನಾಗಣ್ಣ ನಿರ್ದೇಶನದಲ್ಲಿ ವಿಷ್ಣುವರ್ಧನ್ 'ಕೋಟಿಗೊಬ್ಬ' ಆಗಿ ಅಬ್ಬರಿಸಿದ್ದರು. ನಂಜುಂಡ ಹಾಗೂ ಜಯಸಿಂಹ ಎನ್ನುವ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ದಾದಾ ಕಮಾಲ್ ಮಾಡಿದ್ದರು. ಪ್ರಿಯಾಂಕ ಉಪೇಂದ್ರ ನಾಯಕಿಯಾಗಿ ನಟಿಸಿದರೆ ಸತ್ಯಪ್ರಿಯಾ, ರಮೇಶ್ ಭಟ್, ಅವಿನಾಶ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಸಿನಿಮಾ 30 ವಾರ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು.

ಅಜಿತ್ ಅಭಿಮಾನಿಗಳ ಕಾತರ

ಅಜಿತ್ ಅಭಿಮಾನಿಗಳ ಕಾತರ

ರಜನಿಕಾಂತ್ ನಟನೆಯ 'ಬಿಲ್ಲಾ' ಚಿತ್ರವನ್ನು ಮಾಡಿ ಅಜಿತ್ ಸಕ್ಸಸ್ ಕಂಡಿದ್ದರು. 'ಬಿಲ್ಲಾ' ಮೊದಲಿಗೆ ಹಿಂದಿಯಲ್ಲಿ ಬಂದಿತ್ತು. ಅಮಿತಾಬ್ ಬಚ್ಚನ್ ಹೀರೊ ಆಗಿ ಅಬ್ಬರಿಸಿದ್ದರು. ಮುಂದೆ ಶಾರುಕ್ ಖಾನ್ ಅದನ್ನು ರೀಮೆಕ್ ಮಾಡಿ ಗೆದ್ದಿದ್ದರು. ನಂತರ ಅಜಿತ್ ಕೂಡ ಅದೇ ಸಿನಿಮಾ ಮಾಡಿ ಗೆಲುವಿನ ನಗೆ ಬೀರಿದ್ದರು. ಅಜಿತ್‌ಗೆ ಗ್ಯಾಂಗ್‌ಸ್ಟರ್ ಸಿನಿಮಾಗಳು ಒಪ್ಪುತ್ತದೆ. 'ಬಿಲ್ಲಾ' ಚಿತ್ರದಲ್ಲಿ ಥಲಾ ನಟನೆ ನೋಡಿದಮೇಲೆ ಅಭಿಮಾನಿಗಳು 'ಬಾಷಾ' ಪಾತ್ರ ಕೂಡ ಅವರಿಗೆ ಮಾತ್ರ ಸೂಕ್ತ ಎನ್ನುತ್ತಿದ್ದಾರೆ.

ಅಜಿತ್ ಮನಸ್ಸು ಮಾಡ್ತಾರಾ?

ಅಜಿತ್ ಮನಸ್ಸು ಮಾಡ್ತಾರಾ?

ಹಾಗ್ ನೋಡಿದ್ರೆ, 'ಬಿಲ್ಲಾ' ಸಕ್ಸಸ್ ಬೆನ್ನಲ್ಲೇ 'ಬಾಷಾ' ರೀಮೆಕ್ ಮಾಡಲು ನಿರ್ದೇಶಕ ವಿಷ್ಣುವರ್ಧನ್ ಮನಸ್ಸು ಮಾಡಿದ್ದರು. ಆದರೆ ಆಗ ಅಜಿತ್ ಮತ್ತೆ ಹಳೇ ಸಿನಿಮಾ ರೀಮೆಕ್ ಬೇಡ, ಹೊಸ ಕಥೆ ಮಾಡಿ ಎಂದು ಹೇಳಿದ್ದರಂತೆ. ಸದ್ಯ ವಿಷ್ಣುವರ್ಧನ್ ನಿರ್ದೇಶನದಲ್ಲಿ ಅಜಿತ್ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದ್ದು, ಆ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುವ ಸಾಧ್ಯತೆಯಿದೆ. ಆ ಚಿತ್ರಕ್ಕಾಗಿ ಅಜಿತ್ 'ಬಾಷಾ' ರೀಮೆಕ್‌ಗೆ ಒಪ್ಪಿಕೊಂಡರೆ ಅಭಿಮಾನಿಗಳಿಗೆ ಹಬ್ಬ ಎನ್ನಲಾಗ್ತಿದೆ.

More from Filmibeat

English summary
Thala Ajith To Remake Rajinikanth's Blockbuster Baasha? Director Vishnuvardhan Planning To do Baasha Remake with Ajith. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X