For Quick Alerts
  ALLOW NOTIFICATIONS  
  For Daily Alerts

  ಈ ಸ್ಯಾಂಡಲ್ ವುಡ್ ಜೋಡಿಹಕ್ಕಿಗಳು ಲವ್ ಮಾಡ್ತವ್ರಾ?

  By ಜೀವನರಸಿಕ
  |

  ಇಡೀ ಜಗತ್ತೇ ಪ್ರೇಮಿಗಳ ದಿನವನ್ನ ಆಚರಿಸಿಕೊಂಡು ಸಂಭ್ರಮಿಸಿದ್ದಾಗಿದೆ. ಕನ್ನಡ ಚಿತ್ರರಂಗದಲ್ಲೂ ಒಂದಷ್ಟು ಪ್ರೇಮಿಗಳಿಲ್ಲ ಅಂದ್ರೆ ಹೇಗೆ. ಪ್ರೇಮಿಗಳ ದಿನ ಮುಗಿದುಹೋಗಿದೆ. ಆದರೆ ಪ್ರೇಮದ ಧ್ಯಾನ ಮಾತ್ರ ಹಾಗೆಯೇ ಇದೆ. ಕನ್ನಡ ಚಿತ್ರರಂಗದ ಒಂದಷ್ಟು ಪ್ರೇಮಪಕ್ಷಿಗಳು ನೆನಪಾಗ್ತಾನೆ ಇರ್ತಾರೆ.

  ಅವರೆಲ್ಲಾ ಪ್ರೇಮಿಗಳ ದಿನವನ್ನ ನೆನಪಿಸಿಕೊಳ್ತಾರೋ ಸೆಲೆಬ್ರೇಟ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಆವತ್ತಿನ ಚಿತ್ರಪ್ರೇಮಿಗಳಲ್ಲಿ ಪ್ರೇಮಧಾರೆ ಹರಿಸಿದ ಸಿನಿ ಜೋಡಿ ನೋಡಿದ್ರೆ ನೆನಪಾಗೋದು ಮಾತ್ರ ರಾಜ್-ಭಾರತಿ, ವಿಷ್ಣು-ಸುಹಾಸಿನಿ, ಅನಂತ್ ನಾಗ್-ಲಕ್ಷ್ಮಿ, ರವಿಚಂದ್ರನ್-ಜೂಹಿಚಾವ್ಲಾ ಜೋಡಿಗಳು.

  ಈಗ ನೆನಪಾಗೋ ಒಂದಷ್ಟು ಜೋಡಿಗಳನ್ನು ನಾವ್ ನಿಮ್ ಮುಂದೆ ಇಡ್ತೀವಿ. ಆದರೆ ಅವರು ಲವ್ ಮಾಡ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಇನ್ನು ಕೆಲವರು ಸಿನಿಮಾದ ಮೂಲಕ ಜೋಡಿಯಾಗಿ ಮರೆಯಲಾಗದ ಛಾಯೆ ಉಳಿಸಿಹೋದ ಪ್ರೇಮ ಜೋಡಿಗಳು. [ಮೇಘನಾ, ಚಿರಂಜೀವಿ ಸರ್ಜಾ ಮದುವೆ ನಿಜವೇ?]

  ನಂದಿನಿ-ಪ್ರೀತಮ್

  ನಂದಿನಿ-ಪ್ರೀತಮ್

  ಮುಂಗಾರುಮಳೆ ಸಿನಿಮಾ ನೋಡಿದ ಅಷ್ಟೂ ಮಂದಿ ಅಂದುಕೊಂಡಿದ್ದು ಈ ಜೋಡಿ ಮತ್ತೊಂದು ಸಿನಿಮಾದಲ್ಲಾದ್ರೂ ಒಂದಾಗಬಾರ್ದಾ ಅಂತ. ಹಾಗೆ ಕಾಡಿತ್ತು ಈ ಪ್ರೇಮಜೋಡಿ. ಈಗಲೂ ಪ್ರೀತಿ ಪ್ರೇಮ ಅದರ ತೀವ್ರತೆ ಅಂದರೆ ನೆನಪಾಗೋದು ಮುಂಗಾರುಮಳೆ ಅಂದ್ರೆ ಪ್ರೀತಮ್-ನಂದಿನಿ.

  ಪ್ರೇಮಲೋಕದ ಪಾರಿಜಾತಗಳು

  ಪ್ರೇಮಲೋಕದ ಪಾರಿಜಾತಗಳು

  ಪಾರಿಜಾತ ಸಿನಿಮಾ ಮೂಲಕ ಕಲರ್ ಫುಲ್ ಪ್ರೇಮಲೋಕವನ್ನ ಕೊಟ್ಟ 'ಮನಸಾರೆ' ಪ್ರೀತಿಸಿದ ಜೋಡಿ ಐಂದ್ರಿತಾ-ದಿಗಂತ್ ಸ್ಯಾಂಡಲ್ ವುಡ್ ಜೋಡಿಹಕ್ಕಿಗಳು ಅನ್ನೋ ಸುದ್ದಿ ಆಗಾಗ ಕೇಳಿಬರುತ್ತೆ. ಒಂದು ದೂದ್ ಪೇಡ-ಇನ್ನೋದು ಜಿಲೇಬಿ ವಾವ್. ಎರಡೂ ಸೇರಿ ಪ್ರೇಮಪಾಕ.

  ಮಲ್ಲನ ಪ್ರೀತಿಯ ಪ್ರಿಯೆ

  ಮಲ್ಲನ ಪ್ರೀತಿಯ ಪ್ರಿಯೆ

  ಮಲ್ಲ ಸಿನಿಮಾದಲ್ಲಿ ಕಾಡಿದ ಪ್ರೀತಿಯ ತೀವ್ರತೆಯಲ್ಲಿ ಇಷ್ಟವಾದ ಜೋಡಿ ರವಿಚಂದ್ರನ್-ಪ್ರಿಯಾಂಕ ಜೋಡಿ. ಇವರಿಬ್ಬರ ಜೋಡಿಯನ್ನ ನೋಡೋಕಾಗೀನೇ ಅದೆಷ್ಟೋ ಚಿತ್ರಪ್ರೇಮಿಗಳು ಥಿಯೇಟರ್ ಗೆ ಮತ್ತೆ ಹೋಗ್ತಿದ್ದಾರೆ.

  ಕಿಚ್ಚನ ರಾ'ಗಿಣಿ'

  ಕಿಚ್ಚನ ರಾ'ಗಿಣಿ'

  ಕಿಚ್ಚನಿಂದ ಹೀರೊಯಿನ್ನಾದ ಚೆಲುವೆ ರಾಗಿಣಿ ದ್ವಿವೇದಿ. ಹೈಟು ವೇಟ್ ನಿಂದ ಕಿಚ್ಚನಿಗೆ ಸಖತ್ ಸೂಟಬಲ್ ಜೋಡಿ. 'ವೀರಮದಕರಿ' ನಂತರ 'ಕೆಂಪೇಗೌಡ'ನ ಮನದರಸಿಯಾದ ರಾಗಿಣಿ-ಕಿಚ್ಚ ಜೋಡಿ ಥರಥರವಾಗಿ ಚಿತ್ರಪ್ರೇಮಿಗಳನ್ನ ಕಾಡುತ್ತೆ.

  ಸುಮ್ ಸುಮ್ನೆ ಅಂತಾರೆ, ಇವ್ರಿಬ್ಬರೂ ಪ್ರೇಮಿಗಳಲ್ಲ?

  ಸುಮ್ ಸುಮ್ನೆ ಅಂತಾರೆ, ಇವ್ರಿಬ್ಬರೂ ಪ್ರೇಮಿಗಳಲ್ಲ?

  ಧಾರಾವಾಹಿಯಿಂದ ಸಿನಿಮಾಗೆ ಒಟ್ಟಾಗಿ ಎಂಟ್ರಿಕೊಟ್ಟ ರಾಧಿಕಾ ಪಂಡಿತ್ ಹಾಗೂ ಯಶ್ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಗಾಸಿಪ್ ಗಳು ಒಂದೆರೆಡು ವರ್ಷ ಹರಿದಾಡ್ತಾನೇ ಇತ್ತು. ಸದ್ಯ ಇದು ಸೈಲೆಂಟಾಗಿದೆ.

  ತಿಲಕ್-ಶ್ವೇತಾ ಪಂಡಿತ್

  ತಿಲಕ್-ಶ್ವೇತಾ ಪಂಡಿತ್

  ಬಿಗ್ ಬಾಸ್ ನಲ್ಲಿ ಬಿಂದಾಸಾಗಿ ಓಡಾಡಿಕೊಂಡು ಜೋಡಿಯಾಗಿದ್ದ ನಟ ತಿಲಕ್ ಮತ್ತು ಶ್ವೇತಾ ಪಂಡಿತ್ ಲವ್ ಮಾಡ್ತಿರೋದು ಗ್ಯಾರಂಟಿ ಅನ್ನೋದು ಅವರಿವರ ಮಾತು. ನಿಜಾನಾ ಅಂತ ಅವ್ರೇ ಹೇಳ್ಬೇಕು.

  English summary
  Sandalwood’s on-screen lovebirds have always inspired fans. Here is the hottest new lovebirds of Sandalwood. Let us learn romance from these hit reel-life couples of Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X