ರಜಿನಿ ಮಗಳು 'ಐಶ್ವರ್ಯ'ನ ಮರೆತು ಸೀತಾರಾಮನ ಸಖಿಯ ಹಿಂದೆ ಬಿದ್ದ ಧನುಷ್ ? ಸಿಕ್ಕೇ ಬಿಡ್ತು ಸಾಕ್ಷಿ ?

ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇಷ್ಟೇ ಅಲ್ಲ ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ...

ಹೇಗಾದರು ಮತ್ತೆ ಹುಟ್ಟಬಹುದು ಎಂದು ಹೇಳುತ್ತಲೇ ಮತ್ತೊಂದು ಸಂಬಂಧಕ್ಕೆ ಹಾತೊರೆಯುತ್ತಾರೆ. ತಮ್ಮ ಹಳೆಯ ಗಂಡ/ಹೆಂಡತಿಯನ್ನು ಮರೆತು ಬೇರೆಯವರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಈ ಸಾಲಿಗೆ ಈಗ ಧನುಷ್ ಸೇರಿಕೊಂಡಿದ್ದಾರೆ ಎನ್ನುವುದೇ ಸದ್ಯದ ಸುದ್ದಿ.

The Mrunal Thakur amp amp Dhanush Saga A Viral Video A Divorce and A Shocking New Romance

ಹೌದು, ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದ ಧನುಷ್ ಸದ್ಯ ಸಿಂಗಲ್ ಆಗಿರುವುದು ಎಲ್ಲರಿಗೆ ಗೊತ್ತೇ ಇದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಗಳು ಐಶ್ವರ್ಯ ಜೊತೆ 2022ರಲ್ಲಿಯೇ ಸಂಬಂಧ ಕಡಿದುಕೊಂಡ ಧನುಷ್ ಕಳೆದ ವರ್ಷ ವಿಚ್ಛೇದನ ಪಡೆದರು. ಈ ಮೂಲಕ 20 ವರ್ಷದ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟರು.

ಇಂಥಾ ಧನುಷ್ ಈಗ ''ಸೀತಾರಾಮ''ನ ಸಖಿ ''ಮೃಣಾಲ್ ಠಾಕೂರ್'' ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಕುರಿತು ಚರ್ಚೆ ಕೂಡ ನಡೆಯುತ್ತಿದೆ.

ಹೌದು, ಅಸಲಿಗೆ ಹಲವು ವರ್ಷಗಳ ನಂತರ ಮೃಣಾಲ್ ಠಾಕೂರ್ ಹಿಂದಿ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಹೆಸರು ''ಸನ್ ಆಫ್ ಸರ್ದಾರ್ 2''. ಅಜಯ್ ದೇವಗನ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಕಳೆದ ವಾರವಷ್ಟೇ ತೆರೆಗೆ ಬಂದಿದೆ.

ಈ ಹಿನ್ನೆಲೆ.. ಚಿತ್ರದ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಮುಂಬೈನಲ್ಲಿ ಹಮ್ಮಿಕೊಂಡಿತ್ತು. ವಿಶೇಷ ಅಂದರೆ ಈ ಪ್ರದರ್ಶನಕ್ಕೆ ತಮ್ಮ ಎಲ್ಲಾ ಕೆಲಸವನ್ನು ಬದಿಗಿಟ್ಟು ಧನುಷ್ ಹೋಗಿದ್ದಾರೆ. ಮುಂಬೈನಲ್ಲಿ ಮೃಣಾಲ್ ಜೊತೆ ಚಿತ್ರವನ್ನು ಕಣ್ತುಂಬಿಕೊಂಡಿದ್ಧಾರೆ.

ಇನ್ನು ಮೃಣಾಲ್ ತೆಲುಗು ಪ್ರೇಕ್ಷಕರಿಗೆ ತುಂಬಾ ಚಿರಪರಿಚಿತ ನಾಯಕಿ. ಎಲ್ಲಕ್ಕಿಂತ ಹೆಚ್ಚಾಗಿ ಧನುಷ್ ಜೊತೆ ಮೃಣಾಲ್ ಒಂದೇ ಒಂದು ಚಿತ್ರವನ್ನು ಕೂಡ ಮಾಡಿಲ್ಲ. ಆದರೂ ಕೂಡ ಧನುಷ್ ಈ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ತಮ್ಮ ಜೊತೆ ಅಭಿನಯಿಸಿರುವ ತೆಲುಗು ಸ್ಟಾರ್‌ಗಳನ್ನು ಕರೆಯದ ಮೃಣಾಲ್, ಧನುಷ್ ಅವರನ್ನು ಮಾತ್ರ ಕರೆದಿದ್ದು ಹೇಗೆ ? ಯಾಕೆ ? ಎನ್ನುವ ಪ್ರಶ್ನೆ ಈಗ ಹಲವರಲ್ಲಿದೆ.

ಇನ್ನು ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗುವುದಲ್ಲದೇ ಮೃಣಾಲ್ ಠಾಕೂರ್ ಜೊತೆ ಧನುಷ್ ''ಪಾರ್ಟಿ''ಯನ್ನು ಕೂಡ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಕೃತಿ ಸನೋನ್.. ರಾಂಜಾನ ನಿರ್ದೇಶಕ ಆನಂದ್ ರೈ.. ಭೂಮಿ ಪೆಡ್ನೇಕರ್.. ಬರಹಗಾರ್ತಿ ಕನ್ನಿಕಾ ದಿಲ್ಲೋನ್ ಕೂಡ ಇದ್ದಾರೆ ಆದರೂ ಎಲ್ಲರ ಕಣ್ಣು ಧನುಷ್ ಮತ್ತು ಮೃಣಾಲ್ ಅವರ ಮೇಲೆಯೇ ಬಿದ್ದಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಚರ್ಚೆ ರೆಡಿಟ್‌ನಲ್ಲಿ ನಡೆಯುತ್ತಿದೆ. ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಇದೆಲ್ಲದಕ್ಕೆ ಪೂರಕವಾಗಿ ತೆಲುಗು ಮಾಧ್ಯಮಗಳು ಕೂಡ ಧನುಷ್ ಮತ್ತು ಮೃಣಾಲ್ ಆಗಾಗ ಜೊತೆಯಾಗಿ ಪಾರ್ಟಿಗಳನ್ನು ಮಾಡುತ್ತಿರುತ್ತಾರೆ, ಓಡಾಡುತ್ತಾರೆ ಎಂದು ವರದಿಯನ್ನು ಕೂಡ ಮಾಡಿವೆ.

ಎಂದಿನಂತೆ ಮೃಣಾಲ್ ಆಗಲಿ ಧನುಷ್ ಆಗಲಿ ತಮ್ಮ ಕುರಿತು ನಡೆಯುತ್ತಿರುವ ಈ ಚರ್ಚೆಗೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ.. ಸದ್ಯ ಇವರ ಫೋಟೊಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ನಿಜಾಂಶವೇನು ಎನ್ನುವುದು ಇವರಿಬ್ಬರಿಗೆ ಗೊತ್ತು.

More from Filmibeat

English summary
Are Dhanush and Mrunal Thakur dating? A viral video, Dhanush's recent divorce from Aishwarya Rajinikanth, and frequent public appearances are fueling romance rumors. Get the full story here.
Read more about: dhanush mrunal thakur kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X