ಕಾಲ್ಚೆಂಡಿನ ಚತುರನಿಗೆ ಮನಸೋತ ಬಳಕುವ ಬಳ್ಳಿ ; ಪುಟ್ಬಾಲ್ ಪ್ಲೇಯರ್ ಜೊತೆ ನೋರಾ ಫತೇಹಿ ಮದುವೆ ?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್‌ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ ಮನ ಸೋತಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲ. ಪುಟ್ಬಾಲ್‌ನ ಕಾಲ್ಚೆಂಡು ಕೂಡ ಹಲವು ಬೆಡಗಿಯರನ್ನು ಮೋಡಿ ಮಾಡಿದೆ. ಉದಾಹರಣೆಗೆ ಹಾಲಿವುಡ್‌ನಲ್ಲಿ ಪುಟ್ಬಾಲ್‌ನ ದಂತಕಥೆ ಡೇವಿಡ್ ಬೆಕ್ಹ್ಯಾಮ್‌ಗೆ ನಟಿ ವಿಕ್ಟೋರಿಯಾ ಶರಣಾದರೆ ಗೆರಾರ್ಡ್ ಪಿಕೆ ಅವರಿಗೆ ಜಗದ್ವಿಖ್ಯಾತ ಗಾಯಕಿ ಶಕೀರಾ ಮನ ಸೋತಿದ್ದರು. ಸದ್ಯ ಈ ಸಾಲಿಗೆ ನೋರಾ ಫತೇಹಿ ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಕಾಣ್ತಿವೆ.

ಹೌದು,''ನೋರಾ ಫತೇಹಿ'' .. ಯಾರಿಗೆ ತಾನೇ ಗೊತ್ತ್ ಇಲ್ಲ. ಬಾಲಿವುಡ್ ನ ''ರಾಣಿ ಜೇನು''. ವಯ್ಯಾರದಿಂದ ನೋರಾ ಕುಣಿಯುತ್ತಿದ್ದರೆ, ಅನೇಕರು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುತ್ತಾರೆ. ಇವತ್ತು ನೋರಾ ಹೆಸರಿಗೆ ಒಂದು ''ಬೆಲೆ'' ಇದೆ.
ಇಂಥಾ ನೋರಾ ಫತೇಹಿಗೆ ಏಕಾಏಕಿ ಈಗ ಪುಟ್ಬಾಲ್ ಮೇಲೆ ಆಸಕ್ತಿ ಬಂದಿದೆ. ಇದಕ್ಕೆ ಪುರಾವೆ ಎನ್ನುವಂತೆ ಮೊನ್ನೆ ಮೊನ್ನೆ ನೋರಾ ಮೊರಾಕ್ಕೊದ ರಬಾತ್ ನಲ್ಲಿರುವ ಪ್ರಿನ್ಸ್ ಮೌಲೆ ಅಬ್ದೆಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಿದ್ದರು. ಮೊರಾಕ್ಕೊ ಮತ್ತು ಕ್ಯಾಮರೂನ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡರು. ಮೊರಾಕ್ಕೊ ಗೆಲುವಿಗೆ ಪ್ರಾರ್ಥನೆಯನ್ನು ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಭ್ರಮವನ್ನು ಕೂಡ ಹಂಚಿಕೊಂಡರು.
ನೋರಾ ಫತೇಹಿ ಅವರ ಈ ನಡೆ ಹಲವರಲ್ಲಿ ಅನುಮಾನದ ಬೀಜ ಬಿತ್ತಿತ್ತು. ನೋರಾ ಹೃದಯವನ್ನು ಪುಟ್ ಬಾಲ್ ಪ್ಲೇಯರ್ ಒಬ್ಬರು ಕದ್ದಿರಬಹುದು ಎನ್ನುವ ಶಂಕೆ ವ್ಯಕ್ತವಾಗಲು ಶುರುವಾಯ್ತು. ಸದ್ಯ ಈ ಅನುಮಾನ ಇನ್ನೂ ಹೆಚ್ಚಾಗಿದ್ದು ನೋರಾ ಹೃದಯ ಕದ್ದ ಆ ಚೋರ ಚಿತ್ತ ಚೋರ ಬೇರೆ ಯಾರು ಅಲ್ಲ ಬದಲಿಗೆ ಮೊರಾಕ್ಕೊದ ನಾಯಕ ಅಷ್ರಫ್ ಹಕಿಮಿ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ವಿಶೇಷ ಅಂದರೆ ನೋರಾ ಮತ್ತು ಅಷ್ರಫ್ ಹಕಿಮಿ ಮೂಲ ಒಂದೇ. ಇಬ್ಬರು ಮೊರಾಕ್ಕೊ ಹಿನ್ನೆಲೆಯವರೇ.
ಇನ್ನೂ ಇದರ ನಡುವೆ ಅಷ್ರಫ್ ಹಕಿಮಿ ಸುಮ್ಮನೆ ಇರಲಾರದೇ ನೋರಾ ಫತೇಹಿ ಹಂಚಿಕೊಂಡಿದ್ದ ಪೋಸ್ಟ್‌ವೊಂದನ್ನು ಲೈಕ್ ಮಾಡಿದ್ದಾರೆ. ಹೀಗಾಗಿ ಈ ಸುದ್ದಿಗಳಿಗೆ ಈಗ ರೆಕ್ಕೆ ಪುಕ್ಕ ಬಂದಂತಾಗಿದೆ. ಇಬ್ಬರು ಲವ್ವಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸದ್ಯ ಕೇಳಿ ಬರುತ್ತಿದೆ.

ಅಂದ್ಹಾಗೇ ಬಳಕುವ ಬಳ್ಳಿ ನೋರಾ ಫತೇಹಿಗೆ ಈಗ 33ವರ್ಷ. ಮತ್ತೊಂದೆಡೆ ಅಶ್ರಫ್ ಹಕಿಮಿಗೆ 27ವರ್ಷ. ಇಬ್ಬರ ನಡುವೆ 6 ವರ್ಷಗಳ ಅಂತರ ಇದೆ. ಈ ವಿಚಾರ ಕೆಲವರಿಗೆ ಇಷ್ಟ ಆಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇಬ್ಬರ ಸಂಬಂಧಕ್ಕೆ ಅಪಸ್ವರ ತೆಗೆಯುತ್ತಿದ್ದಾರೆ.
ಇನ್ನುಳಿದಂತೆ ಅಷ್ರಫ್ ಹಕಿಮಿ ಮೊರಾಕ್ಕೋ ತಂಡದ ನಾಯಕ ಮಾತ್ರ ಅಲ್ಲ ಪ್ಯಾರಿಸ್ ಸೈಂಟ್ ಜರ್ಮನ್ ತಂಡದ ಸ್ಟಾರ್ ಆಟಗಾರ ಕೂಡ ಹೌದು. ಇನ್ನು 2022ರ ವಿಶ್ವಕಪ್‌ನಲ್ಲಿ ಮೊರಾಕ್ಕೊ ತಂಡ ಸಮಿಫೈನಲ್ ಪ್ರವೇಶ ಮಾಡಿದಾಗ ತಂಡದಲ್ಲಿ ಇವರ ಪಾತ್ರ ತುಂಬಾನೇ ದೊಡ್ಡದಿತ್ತು. ಸದ್ಯ ತಮ್ಮ ಬಗ್ಗೆ ಹರಿದಾಡುತ್ತಿರುವ ಈ ಸುದ್ದಿಗಳಿಗೆ ನೋರಾ ಫತೇಹಿ ಆಗಲಿ ಅಷ್ರಫ್ ಹಕಿಮಿ ಅವರಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.ಮುಂಬರುವ ದಿನಗಳಲ್ಲಿ ನೋರಾ ಈ ಕುರಿತು ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











