ಸಾನಿಯಾ- ಶೋಯೆಬ್ ಸಂಸಾರದಲ್ಲಿ ಹುಳಿ ಹಿಂಡಿದ್ದು ಪಾಕಿಸ್ತಾನದ ಆ ನಟಿ?

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗುಸುಗುಸು ಶುರುವಾಗಿದೆ. ಶೀಘ್ರದಲ್ಲೇ ಜೋಡಿ ಡೈವೋರ್ಸ್ ತೆಗೆದುಕೊಳ್ಳುತ್ತದೆ ಎನ್ನುವ ಚರ್ಚೆಯೂ ನಡೀತಿದೆ. ಇದಕ್ಕೆಲ್ಲಾ ಕಾರಣ ಪಾಕಿಸ್ತಾನದ ಮಾಡೆಲ್ ಕಮ್ ನಟಿ ಆಯೇಷಾ ಓಮರ್ ಎನ್ನಲಾಗ್ತಿದೆ.

ಇತ್ತೀಚೆಗೆ ಸಾನಿಯಾ ಮಿರ್ಜಾ "ಹೃದಯ ಒಡೆದು ಹೋದ ಬಳಿಕ ಎಲ್ಲಿಗೆ ಹೋಗಬೇಕು? ಅಲ್ಲಾನ ಹುಡುಕಲು ಹೋಗಬೇಕೆ?" ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ನಂತರ ಮಗ ಇಝ್ಹಾನ್‌ ಮಿರ್ಜಾ ಮಲಿಕ್‌ ಜೊತೆಗಿನ ಫೋಟೊ ಶೇರ್ ಮಾಡಿ "ನನ್ನ ಕಠಿಣ ದಿನಗಳನ್ನು ಕಳೆಯುವ ಕ್ಷಣಗಳಿವು" ಎಂದು ಬರೆದಿದ್ದರು. ಇಲ್ಲಿಂದ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ ಡೈವೋರ್ಸ್ ಚರ್ಚೆ ಶುರುವಾಗಿತ್ತು. ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು? ಸಾನಿಯಾ ಪೋಸ್ಟ್ ಹಿಂದಿನ ಕಾರಣ ಏನು? ಎನ್ನುವುದರ ಬಗ್ಗೆ ಅಭಿಮಾನಿಗಳ ತಲೆ ಕೆಡಿಸಿಕೊಂಡಿದ್ದಾರೆ.

ಸದ್ಯ ಸಾನಿಯಾ ಹಾಗೂ ಶೋಯಬ್ ದಾಂಪತ್ಯದಲ್ಲಿ ಬಿರುಕು ಮೂಡಲು ಆ ನಟಿಯೇ ಕಾರಣ ಎನ್ನುವ ವದಂತಿ ಕೇಳಿಬರುತ್ತಿದೆ. ಪಾಕಿಸ್ತಾನದ ಮಾಡೆಲ್ ಆಯೇಷಾ ಓಮರ್ ಜೊತೆ ಶೋಯಬ್ ಮಲಿಕ್ ಒಂದು ಫೋಟೊಶೂಟ್‌ನಲ್ಲಿ ಭಾಗಿ ಆಗಿದ್ದರು. ಅಲ್ಲಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಅದೇ ಈ ರಾದ್ದಾಂತಕ್ಕೆ ಕಾರಣ ಎನ್ನಲಾಗ್ತಿದೆ.

ಸಾನಿಯಾ -ಶೋಯೆಬ್ ಡೈವೋರ್ಸ್?

ಸಾನಿಯಾ -ಶೋಯೆಬ್ ಡೈವೋರ್ಸ್?

ಪತಿ ಶೋಯಬ್ ಜೊತೆಗಿನ ಕಾನೂನು ಸಮರ ಬಗೆಹರಿಸಿಕೊಂಡ ಬಳಿಕ ಸಾನಿಯಾ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್‌ ವರದಿ ಮಾಡಿದೆ. ಈಗಾಗಲೇ ಇಬ್ಬರು ಈ ಬಗ್ಗೆ ಒಪ್ಪಂದಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಬಹಿರಂಗವಾಗಿ ಮಾತನಾಡಿಲ್ಲ. ಹಳೇ ಫೋಟೊಶೂಟ್ ವಿಡಿಯೋ ತೋರಿಸಿ, ಇದೇ ಕಾರಣಕ್ಕೆ ಸಾನಿಯಾ ಹಾಗೂ ಶೋಯಬ್ ಮಧ್ಯೆ ವೈಮನಸ್ಸು ಉಂಟಾಗಿದೆ. ಶೀಘ್ರದಲ್ಲೇ ಇಬ್ಬರೂ ದೂರಾಗುತ್ತಿದ್ದಾರೆ ಎನ್ನುತ್ತಿದ್ದಾರೆ.

ಆಕೆ ಜೊತೆ ಶೋಯಬ್ 2ನೇ ಮದುವೆ

ಆಕೆ ಜೊತೆ ಶೋಯಬ್ 2ನೇ ಮದುವೆ

ಆಯೇಷಾ ಓಮರ್ ಜೊತೆ ಶೋಯಬ್ ಮಲಿಕ್ 2ನೇ ಮದುವೆ ಮನಸ್ಸು ಮಾಡಿದ್ದಾರಂತೆ. ಹಿಂದೆ ಕೂಡ ಈ ಫೋಟೋಶೂಟ್ ಬಗ್ಗೆ ಶೋಯಬ್ ಸರಿಯಾದ ಉತ್ತರವನ್ನು ಕೊಟ್ಟಿರಲಿಲ್ಲ. ಇಂತಹ ಬೋಲ್ಡ್ ಫೋಟೊಶೂಟ್ ಮಾಡಿದ್ದೀರಾ ಸಾನಿಯಾ ಏನು ಹೇಳಲಿಲ್ಲವಾ ? ಎಂದು ಆಂಕರ್ ಕೇಳಿದ್ದಕ್ಕೆ ನಿಮ್ಮ ಗಂಡ ಈ ತರ ಮಾಡಿದ್ದರೆ ನೀವು ಏನು ಮಾಡುತ್ತಿದ್ದಿರಿ ಎಂದು ಮರು ಪ್ರಶ್ನೆ ಹಾಕಿದ್ದರು. ಅದಕ್ಕೆ ಆಂಕರ್ ನನಗೆ ಇನ್ನು ಮದುವೆ ಆಗಿಲ್ಲ ಎಂದಿದ್ದಳು. ಸಾನಿಯಾ ಕೂಡ ಅದೇ ರೀತಿ ಲೈಟ್ ಆಗಿ ತಗೊಂಡಿದ್ದಾಳೆ ಎಂದು ಶೋಯಬ್ ಹೇಳಿದ್ದರು.

ಆಯೇಷಾ ಓಮರ್ ಯಾರು?

ಆಯೇಷಾ ಓಮರ್ ಯಾರು?

ಲಾಹೋರ್‌ನಲ್ಲಿ ಹುಟ್ಟಿಬೆಳೆದ ಆಯೇಷಾ ಓಮರ್ ಮಾಡೆಲ್ ಆಗಿ ನಟಿಯಾಗಿ ಯೂಟ್ಯೂಬರ್ ಆಗಿ ಗುರ್ತಿಸಿಕೊಂಡಿದ್ದಾಳೆ. ಸಾಕಷ್ಟು ಉರ್ದು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾಳೆ. ಪಾಕಿಸ್ತಾನ ಕಿರುತೆರೆ ಕಾರ್ಯಕ್ರಮ, ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾಳೆ. ಪಾಕಿಸ್ತಾನದ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಆಯೇಷಾ ಕಮಾಲ್ ಮಾಡುತ್ತಿದ್ದಾಳೆ.

ಮೌನ ವಹಿಸಿದ ದಂಪತಿ

ಮೌನ ವಹಿಸಿದ ದಂಪತಿ

ಸಾನಿಯಾ ಹಾಗೂ ಶೋಯೆಬ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಆದರೂ ಈ ಬಗ್ಗೆ ದಂಪತಿ ಮಾತನಾಡುವ ಗೋಜಿಗೆ ಹೋಗಿಲ್ಲ. ತಮ್ಮ ದಾಂಪತ್ಯದ ಜೀವನ ಅಥವಾ ಬಿರುಕಿನ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್ ಮಲ್ಲಿಕ್ ಆಗಲಿ ಎಲ್ಲಿಯೂ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಇತ್ತೀಚೆಗೆ ಮಗನ ಹುಟ್ಟುಹಬ್ಬ ಆಚರಿಸಲು ದಂಪತಿ ದುಬೈ ಪ್ರವಾಸಕ್ಕೆ ತೆರಳಿದ್ದರು.

More from Filmibeat

English summary
The reason behind the divorce of Sania Mirza and Shoaib Malik is Ayesha Omar. Sania Mirza and Shoaib Malik’s divorce rumours started when she posted a cryptic post leaving speculations. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X