ಒಂದು ಉಂಗುರದ ಕಥೆ ; ಸದ್ದಿಲ್ಲದೇ ಹೊಸ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಸಮಂತಾ ?

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು.

ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ. ''ಸಮಂತಾ'' ಅವರಿಗೆ ಇದೇ ತರಹದ ಅನುಭವ ಆಗಿದೆಯಾ ಗೊತ್ತಿಲ್ಲ. ಆದರೆ, ''ಸಮಂತಾ'' ಮತ್ತು ನಿರ್ದೇಶಕ ''ರಾಜ್ ನಿಡಿಮೋರು'' ನಡುವೆ ಇರುವ ಸಂಬಂಧದ ಕುರಿತು ಹಲವು ದಿನಗಳಿಂದ ಹಲವರಲ್ಲಿ ಅನುಮಾನ ಇದ್ದೇ ಇದೆ.

The Ring Seen Round the World Are Samantha and Raj Nidimoru Engaged

ಸಮಂತಾ ಮತ್ತು ರಾಜ್ ನಿಡಿಮೋರು ಅವರ ನಡೆ ಕೂಡ ಇದಕ್ಕೆ ಪೂರಕವಾಗಿಯೇ ಇದೆ. ಹೋದಲ್ಲಿ .. ಬಂದಲ್ಲಿ .. ಕುಂತಲ್ಲಿ.. ನಿಂತಲ್ಲಿ.. ಸಮಂತಾ ಅವರನ್ನು ರಾಜ್ ನಿಡಿಮೋರು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಮುಂಬೈಯಿಂದ ಹಿಡಿದು ತಿರುಪತಿಯವರೆಗೂ.. ಹೈದರಾಬಾದ್‌ದಿಂದ ಹಿಡಿದು ಅಮೆರಿಕಾದವರೆಗೂ ಇಬ್ಬರು ಜೊತೆ ಜೊತೆಯಲ್ಲಿ ಓಡಾಡುತ್ತಿದ್ದಾರೆ. ಕೈ ಕೈ ಹಿಡಿದುಕೊಂಡು ಊರ್‌ ತುಂಬಾ ಸುತ್ತುತ್ತಿದ್ದಾರೆ.

ಇನ್ನು ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಸಮಂತಾ ಮತ್ತು ರಾಜ್ ನಿಡಿಮೋರು ಅವರ ಈ ಆತ್ಮೀಯತೆಯನ್ನು ಕಂಡು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಆಗಾಗ ಕೆರಳಿ ಕೆಂಡವಾಗುತ್ತಿದ್ದಾರೆ. ನಿಗೂಡಾರ್ಥದ ಪೋಸ್ಟ್‌ಗಳನ್ನು ಹಂಚಿಕೊಂಡು ಬದುಕು-ಕರ್ಮ-ಪಾಪ-ಪುಣ್ಯದ ಪಾಠವನ್ನು ಕೂಡ ಮಾಡುತ್ತಿರುತ್ತಾರೆ. ಹೀಗಿರುವಾಗ ಇದೀಗ ಸಮಂತಾ ಮತ್ತು ರಾಜ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.

ಹೌದು, ಅಸಲಿಗೆ ಚಿತ್ರರಂಗದಲ್ಲಿನ ಬಹುತೇಕ ನಾಯಕಿಯರಿಗೆ ತಮ್ಮ ಮೊಬೈಲ್‌ನಲ್ಲಿರುವ ಪ್ರತಿಯೊಂದು ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಹುಚ್ಚಿರುತ್ತೆ. ಸಮಂತಾ ಕೂಡ ಇದರಿಂದ ಹೊರತಾಗಿಲ್ಲ.

ತಮ್ಮ ಬದುಕಿನ ಇಂಚಿಂಚೂ ವಿವರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಸಮಂತಾ ಎರಡು ದಿನದ ಹಿಂದೆ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ಒಂದು ಫೋಟೊದಲ್ಲಿ ಸಮಂತಾ ಕೈಯಲ್ಲಿದ್ದ ಉಂಗುರ ಗಮನ ಸೆಳೆದಿದೆ. ಹೊಸದೊಂದು ಚರ್ಚೆಗೆ ಕೂಡ ಕಾರಣವಾಗಿದೆ. ಯಾಕೆಂದರೆ.. ಸಮಂತಾ ಬೆರಳಿನಲ್ಲಿ ಈ ಹಿಂದೆ ಈ ಉಂಗುರವನ್ನು ಯಾರು ನೋಡಿರಲಿಲ್ಲ. ಬದಲಿಗೆ ನಾಗಚೈತನ್ಯ ಅವರಿಂದ ದೂರವಾದ ನಂತರ ತಮ್ಮ ನಿಶ್ಚಿತಾರ್ಥದ ವಜ್ರದ ರಿಂಗ್‌ನ್ನು ಸ್ಯಾಮ್ ಪೆಂಡೆಂಟ್ ಆಗಿ ಬದಲಿಸಿದ್ದರು. ತಮ್ಮ ಕೊರಳಿನಲ್ಲಿ ಹಾಕಿಕೊಂಡಿದ್ದರು.

The Ring Seen Round the World Are Samantha and Raj Nidimoru Engaged

ಆದರೆ ಈಗ ಸಮಂತಾ ಅವರ ಕೈಯಲ್ಲಿ ಉಂಗುರ ಕಂಡು ಬಂದಿದೆ. ಹೀಗಾಗಿಯೇ ತಲೆ ಕೆಡಿಸಿಕೊಂಡಿರುವ ಅನೇಕರು ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲು ಶುರು ಮಾಡಿದ್ದಾರೆ. ಸದ್ದಿಲ್ಲದೇ ರಾಜ್ ನಿಡಿಮೋರು ಜೊತೆ ಸಮಂತಾ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಂದಿನಂತೆ ಸಮಂತಾ ಆಗಲಿ ರಾಜ್ ಆಗಲಿ ಈ ಅಂತೆ-ಕಂತೆಗಳಿಗೆ ಎಲ್ಲಾ ಪ್ರತಿಕ್ರಿಯೆಯನ್ನು ನೀಡಿಲ್ಲ. ಬದಲಿಗೆ ತಮ್ಮ ಲೈಫ್‌ನ ಸಂಪೂರ್ಣವಾಗಿ ಇಬ್ಬರು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇವರ ಅಭಿಮಾನಿಗಳು ಮಾತ್ರ ತಮ್ಮ ಬದುಕಿನ ಚಿಕ್ಕ ಪುಟ್ಟ ಖುಷಿಯನ್ನು ಇವರಿಬ್ಬರ ಸಂಬಂಧದ ಕುರಿತು ಯೋಚನೆ ಮಾಡುತ್ತಾ ಕಾಲಹರಣವನ್ನು ಮಾಡುತ್ತಿದ್ದಾರೆ.

The Ring Seen Round the World Are Samantha and Raj Nidimoru Engaged

ಒಟ್ನಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸಂಬಂಧದ ಕುರಿತು ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ. ನಿಜಕ್ಕೂ ಸಮಂತಾ ಮತ್ತು ರಾಜ್ ನಿಡಿಮೋರು ಪ್ರೀತಿಸುತ್ತಿದ್ದಾರಾ ? ಸದ್ದಿಲ್ಲದೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ? ಇಬ್ಬರು ಮದುವೆಯಾಗ್ತಾರಾ ? ಉತ್ತರ ಸರಿಯಾದ ಸಮಯ ಬಂದಾಗಲೇ ಗೊತ್ತಾಗಲಿದೆ.

More from Filmibeat

English summary
Is Samantha Ruth Prabhu engaged? Her recent ring photo with Raj Nidimoru has sent fans into a frenzy. Find out what's behind the viral picture and the latest speculation.
Read more about: samantha engagement tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X