ಧನುಷ್-ಮೃಣಾಲ್ ನಡುವೆ ಮೂರನೇ ವ್ಯಕ್ತಿ ?ರಜಿನಿ ಮಾಜಿ ಅಳಿಯ ಅಲ್ಲ,ಈ ಸುರಸುಂದರಾಂಗನ ಕೈ ಹಿಡಿತಾರಾ ಸೀತಾರಾಮಂ ಚೆಲುವೆ?
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು...
ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ. ಕೆಲ ಒಮ್ಮೆ ಹೀಗೆ ಹಬ್ಬಿದ ಸುದ್ದಿ ನಿಜಾ ಕೂಡ ಆಗಿದೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಈ ಸಾಲಿಗೆ ಈಗ ಮೃಣಾಲ್ ಠಾಕೂರ್ ಅವರ ಪ್ರೇಮ ಕಥೆ ಕೂಡ ಸೇರಿಕೊಳ್ಳುತ್ತಾ ಎನ್ನುವ ಚರ್ಚೆ ಈಗ ಶುರುವಾಗಿದೆ.

ಹೌದು, ಅಸಲಿಗೆ ಕಳೆದ ಕೆಲ ದಿನಗಳಿಂದ ಮೃಣಾಲ್ ಠಾಕೂರ್ ಮತ್ತು ಧನುಷ್ ಸಂಬಂಧ ಚರ್ಚೆಯಲ್ಲಿದೆ. ಇನ್ನೇನು ಈ ಪ್ರೇಮಿಗಳ ದಿನಕ್ಕೆ (ಫೆಬ್ರವರಿ 14 ) ಇಬ್ಬರು ಮದುವೆಯಾಗುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ಸುದ್ದಿ ಕೇಳಿ ಪುಳಕಿತಗೊಂಡ ಕೆಲವರು ಈಗಾಗಲೇ AI ತಂತ್ರಜ್ಞಾನದ ಸಹಾಯದ ಮೂಲಕ ಇಬ್ಬರ ಮದುವೆಯನ್ನು ಕೂಡ ಮಾಡಿಸಿದ್ದಾರೆ. ಆದರೆ ಈ ಮದುವೆಯ ಸುದ್ದಿಯ ಭರಾಟೆಯ ನಡುವೆ ಮೃಣಾಲ್ ತಮ್ಮ ಅಸಲಿ ಪ್ರೇಮ ಸಂಬಂಧವನ್ನು ಮರೆ ಮಾಚುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.
ಹೀಗೆ ಧನುಷ್ ವಿಚಾರದಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಸೀತಾರಾಮದ ಈ ಸೀತೆ ಹಿಂದಿ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ದೋ ದಿವಾನೆ ಶೆಹರ್ ಮೇ''. ಸಿದ್ದಾಂತ್ ಚತುರ್ವೇದಿ ಈ ಚಿತ್ರದ ಕಥಾನಾಯಕ. ಸದ್ಯ ಇದೇ ಸಿದ್ದಾಂತ್ ಚತುರ್ವೇದಿ ಜೊತೆ ಮೃಣಾಲ್ ಪ್ರೀತಿ ಕಿತಾಬು ಓದುತ್ತಿದ್ದಾರೆ ಎನ್ನುವ ಅನುಮಾನ ಹಲವರದ್ದು. ಇದಕ್ಕೆ ಪೂರಕವಾಗಿ ಇಬ್ಬರಲ್ಲಿ ಇಬ್ಬರು ಕಲಾವಿದರ ನಡುವೆ ಇರಬೇಕಾದ ಆತ್ಮೀಯತೆ ಕಾಣಿಸುತ್ತಿಲ್ಲ. ''ದೋ ದಿವಾನೆ ಶೆಹರ್ ಮೇ'' ಚಿತ್ರದ ಆಸ್ಮಾ ಹಾಡು ನೋಡಿದರೆ ಇಬ್ಬರು ಅಭಿನಯಿಸುತ್ತಿಲ್ಲ. ಬದಲಿಗೆ ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಅನುಮಾನ ಬಾರದೇ ಇರಲ್ಲ. ಹಾಡಿನಲ್ಲಿನ ಇವರ ಕೆಮೆಸ್ಟ್ರೀ ಸದ್ಯ ಗಾಸಿಪ್ ಅಂಗಳದಲ್ಲಿ ಕ್ವೆಶ್ಚನ್ ಮಾರ್ಕ್ ಮೂಡಿಸಿದೆ.
ಇನ್ನು ಸದ್ಯ ಚಿತ್ರದ ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಇಬ್ಬರು ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ಇವರ ಆತ್ಮೀಯತೆ ಹಲವರ ಕಣ್ಣು ಕುಕ್ಕುತ್ತಿದೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೃಣಾಲ್ ಠಾಕೂರ್ ಮತ್ತು ಸಿದ್ದಾಂತ್ ಚತುರ್ವೇದಿ ಹಂಚಿಕೊಳ್ತಿರುವ ಫೋಸ್ಟ್‌ಗಳು ಅನುಮಾನವನ್ನು ಇನ್ನೂ ಹೆಚ್ಚಿಸುತ್ತಿವೆ.
ಈ ಹಿನ್ನೆಲೆ ಮೃಣಾಲ್ ಠಾಕೂರ್ ಮತ್ತು ಸಿದ್ಧಾಂತ್ ಚತುರ್ವೇದಿ ನಡುವೆ ಪ್ರೀತಿ ಚಿಗುರೊಡೆದಿದೆ ಎನ್ನುವ ಮಾತು ಸದ್ಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಭಿಮಾನಿ ವಲಯದಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಕೆಲವರು ಈ ಆತ್ಮೀಯತೆ ಮತ್ತು ಈ ಲವ್ ಸ್ಟೋರಿಯ ಸುದ್ದಿ ಚಿತ್ರದ ಪ್ರಚಾರದ ತಂತ್ರವೂ ಆಗಿರಬಹುದು ಎನ್ನುವ ಅನುಮಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರದ ತಂತ್ರವಾಗಿದ್ದರೆ ಬುದ್ದಿವಂತಿಕೆಯ ಕೆಲಸ, ಒಂದು ವೇಳೆ ನಿಜಾ ಆದರೆ ಬಣ್ಣದ ಪ್ರಪಂಚದಲ್ಲಿನ ಸುಂದರ ಜೋಡಿಗಳ ಪೈಕಿ ಈ ಜೋಡಿ ಕೂಡ ಒಂದಾಗುತ್ತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಂದಿನಂತೆ ತಮ್ಮ ಬಗ್ಗೆ ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಮೃಣಾಲ್ ಠಾಕೂರ್ ಆಗಲಿ ಸಿದ್ಧಾಂತ್ ಚತುರ್ವೇದಿ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಹಿನ್ನೆಲೆ ಈಗಲೇ ಇಬ್ಬರ ಪ್ರೇಮಕಥೆ ವಿಚಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯ ಇಲ್ಲ. ಧನುಷ್ ವಿಚಾರದಲ್ಲಿ ಮೃಣಾಲ್ ಪರೋಕ್ಷವಾಗಿ ಕೆಲ ಫೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಸಿದ್ಧಾಂತ್ ವಿಚಾರದಲ್ಲಿ ಕೂಡ ಮೃಣಾಲ್ ಇದೇ ರೀತಿ ಸುಳಿವು ಏನಾದರೂ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಮೃಣಾಲ್ ಠಾಕೂರ್ ಮತ್ತು ಸಿದ್ದಾಂತ್ ಚತುರ್ವೇದಿ ಅವರ ಈ ಲವ್ ಗಾಸಿಪ್ ಸದ್ಯ ಬಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಇನ್ನುಳಿದಂತೆ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದಲ್ಲಿ ಸಿದ್ಧವಾದ ''ದೋ ದಿವಾನೆ ಶೆಹರ್ ಮೇ'' ಚಿತ್ರವನ್ನು ರವಿ ಉದಯವರ್ ನಿರ್ದೇಶನ ಮಾಡಿದ್ದಾರೆ. ಇದೇ ಫೆಬ್ರವರಿ 20ರಂದು ಚಿತ್ರ ತೆರೆಗೆ ಬರಲಿದೆ.


Click it and Unblock the Notifications











