ಒಬ್ಬನ ಜೊತೆ ಮದ್ವೆಗೂ ಮೊದ್ಲೆ ಮಗು.. ಹೊಸ ಬಾಯ್‌ಫ್ರೆಂಡ್ ಜೊತೆ ಆ್ಯಮಿ ಜಾಕ್ಸನ್‌ ಕಲ್ಯಾಣ?

ಬ್ರಿಟನ್ ಬ್ಯೂಟಿ ಆ್ಯಮಿ ಜಾಕ್ಸನ್‌ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಈ ಬ್ರಿಟೀಷ್ ಮೂಲದ ನಟಿಯನ್ನು ಜೋಗಿ ಪ್ರೇಮ್ ಕನ್ನಡಕ್ಕೂ ಕರ್ಕೊಂಡು ಬಂದಿದ್ರು. 'ದಿ ವಿಲನ್' ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಬಿಂದಾಸ್ ಚೆಲುವೆ ಮಿಂಚಿದ್ದಳು.

ಬಣ್ಣದ ಲೋಕದಲ್ಲಿ ಈಗ ಹೊಸ ಟ್ರೆಂಡ್ ನಡೀತಿದೆ. ಡೇಟಿಂಗ್ ಅನ್ನೋದು ಕಾಮನ್ ಅನ್ನುವಂತಾಗಿಬಿಟ್ಟಿದೆ. ಇನ್ನು ಮದುವೆಗೂ ಮೊದಲೇ ಮಕ್ಕಳು ಮಾಡಿಕೊಳ್ಳುವುದು, ಮಗು ಹುಟ್ಟಿದ ಮೇಲೆ ಮದುವೆ ಆಗುವುದು ಫ್ಯಾಷನ್ ಆಗ್ಬಿಟ್ಟಿದೆ. ಹಾಗಂತ ಮಕ್ಕಳು ಮಾಡಿಕೊಂಡವನ ಜೊತೆನೇ ಮದುವೆ ಆಗ್ಬೇಕು ಅಂತೇನು ಇಲ್ಲ ಅಲ್ವಾ? 'ದಿ ವಿಲನ್' ಬ್ಯೂಟಿ ಆ್ಯಮಿ ಜಾಕ್ಸನ್‌ ಕೂಡ ಇದೇ ಹಾದಿಯಲ್ಲಿ ಇರುವಂತೆ ಕಾಣುತ್ತಿದೆ.

ಉದ್ಯಮಿ ಜಾರ್ಜ್‌ ಪನಯಿಟೊ ಜೊತೆ ಆ್ಯಮಿ ಡೇಟಿಂಗ್ ನಡೆಸುತ್ತಿದ್ದಾಗಲೇ ಗರ್ಭಿಣಿ ಆಗಿದ್ದರು. ನಂತರ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಂಡು ಆದಷ್ಟು ಬೇಗ ಮದುವೆ ಆಗುವುದಾಗಿ ಹೇಳಿದ್ದರು. ಮದುವೆಗೂ ಮೊದಲೇ ಬಹುಭಾಷಾ ನಟಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ್ಯಮಿ ಹಾಗೂ ಜಾರ್ಜ್‌ ಜೋಡಿ ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿದ್ದರು. ಆದರೆ ನಂತರ ಇಬ್ಬರು ಬ್ರೇಕಪ್‌ ಮಾಡಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಜಾರ್ಜ್‌ ಸಂಬಂಧಿಸಿದ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ್ದರು.

The villain Actress Amy Jackson Set To Tie Knot With New Boyfriend

ಜಾರ್ಜ್‌ನಿಂದ ದೂರಾದ ಮೇಲೆ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಆ್ಯಮಿ ಸುತ್ತಾಟ ನಡೆಸುತ್ತಿದ್ದಾರೆ. ಇವರಿಬ್ಬರ ರಿಲೇಶಷನ್‌ಶಿಪ್‌ನಲ್ಲಿ ಇರೋದಾಗಿ ಬ್ರಿಟನ್ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇವರಿಬ್ಬರು ಕಿಸ್ ಮಾಡುತ್ತಿರುವ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇತ್ತೀಚೆಗೆ ಹೊಸ ಪ್ರಿಯಕರನ ಹುಟ್ಟುಹಬ್ಬವನ್ನು ತಮ್ಮ ಫ್ಯಾಮಿಲಿ ಜೊತೆ ಆ್ಯಮಿ ಸೆಲೆಬ್ರೇಟ್ ಮಾಡಿದ್ದರು.

The villain Actress Amy Jackson Set To Tie Knot With New Boyfriend

ತಮಿಳಿನ 'ಮದ್ರಾಸಿಪಟ್ಟಿಣಂ' ಸಿನಿಮಾ ಮೂಲಕ ಭಾರತದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಆ್ಯಮಿ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಳು. ತಮಿಳಿನ 'ತಾಂಡವಂ', ತೆಲುಗಿನ 'ಯವಡು' ಸಿನಿಮಾಗಳಲ್ಲಿ ಗ್ಲಾಮರ್ ಡಾಲ್ ಆಗಿ ಮಿಂಚಿದ್ದಳು. 'ಸಿಂಗ್ ಈಸ್ ಬ್ಲಿಂಗ್‌', 'ಅಭಿನೇತ್ರಿ', 'ತೆರಿ', 'ಫೀಕ್ರಿ ಅಲಿ', 'ದೇವಿ' ಆ್ಯಮಿ ನಟಿಸಿದ ಕೆಲ ಸಿನಿಮಾಗಳು. ಕನ್ನಡದ 'ದಿ ವಿಲನ್' ಚಿತ್ರದಲ್ಲಿ ಸೀತಾ ಎನ್ನುವ ಪಾತ್ರದಲ್ಲಿ ನಟಿಸಿದ್ದಳು. ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ '2.0' ಈ ಬ್ರಿಟನ್ ಚೆಲುವೆಯ ಕೊನೆ ಸಿನಿಮಾ.

More from Filmibeat

English summary
The villain Actress Amy Jackson Set To Tie Knot With New Boyfriend. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X