ಖುಷಿಯಲ್ಲೊಂದು ನಿರಾಸೆ: 'ವಿಲನ್' ಬರುವ ದಿನ ಮತ್ತೆ ಬದಲಾಯ್ತು.!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಆರಂಭವಾಗಿದೆ. ಇತ್ತೀಚಿಗಷ್ಟೆ ಸೆನ್ಸಾರ್ ಮುಗಿಸಿದ್ದ ಈ ಸಿನಿಮಾ ಇದೇ ತಿಂಗಳು ತೆರೆಗೆ ಬರಲಿದೆ ಎಂದು ಹಬ್ಬವನ್ನ ಆಚರಿಸಲು ಅಭಿಮಾನಿ ಬಳಗ ಸಜ್ಜಾಗುತ್ತಿದ್ದಾರೆ.

ಗೌರಿ-ಗಣೇಶ ಹಬ್ಬದ ಪ್ರಯುಕ್ತ 'ದಿ ವಿಲನ್' ಚಿತ್ರದ ಬಿಡುಗಡೆ ದಿನಾಂಕವನ್ನ ನಿರ್ದೇಶಕ ಪ್ರೇಮ್ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಅದರಂತೆ ಈಗ ಡೇಟ್ ಅನೌನ್ಸ್ ಮಾಡಿದ್ದಾರೆ. ನಿರ್ದೇಶಕ ಪ್ರೇಮ್, ಆನಂದ್ ಆಡಿಯೋ ಕಂಪನಿ ಸೇರಿದಂತೆ ಚಿತ್ರತಂಡದಿಂದ ಅಧಿಕೃತ ದಿನಾಂಕ ಬಹಿರಂಗವಾಗಿದೆ.

ಹೌದು, ವಿಲನ್ ರಿಲೀಸ್ ಬಗ್ಗೆ ಎಲ್ಲರೂ ಅಂದುಕೊಂಡಿದ್ದೇ ಒಂದು. ಆದ್ರೀಗ, ಆಗಿರೋದು ಮತ್ತೊಂದು. 'ದಿ ವಿಲನ್' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು, ಸಿನಿಮಾ ಮತ್ತಷ್ಟು ಮುಂದಕ್ಕೆ ಹೋಗಿದೆ. ಹಾಗಿದ್ರೆ, ವಿಲನ್ ಸಿನಿಮಾ ಯಾವಾಗ ರಿಲೀಸ್.? ಮುಂದೆ ಓದಿ.....

ಅಕ್ಟೋಬರ್ ತಿಂಗಳಲ್ಲಿ 'ವಿಲನ್' ಎಂಟ್ರಿ

ಅಕ್ಟೋಬರ್ ತಿಂಗಳಲ್ಲಿ 'ವಿಲನ್' ಎಂಟ್ರಿ

ಇದೇ ತಿಂಗಳು 'ವಿಲನ್' ಸಿನಿಮಾ ಬರಲಿದೆ ಎನ್ನಲಾಗುತ್ತಿತ್ತಾದರೂ, ಅಂತಿಮ ಕ್ಷಣದಲ್ಲಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ಚಿತ್ರದ ರಿಲೀಸ್ ಪೋಸ್ಟರ್ ಬಂದಿದ್ದು, 'ದಿ ವಿಲನ್' ಸಿನಿಮಾ ಅಕ್ಟೋಬರ್ 18ಕ್ಕೆ ತೆರೆಕಾಣಲಿದೆ. ಅಂದ್ರೆ, ದಸರಾ ಹಬ್ಬದ ಪ್ರಯುಕ್ತ ವಿಲನ್ ಬರ್ತಿದೆ.

ಇದು ನಿರಾಸೆನಾ, ಖುಷಿನಾ.?

ಇದು ನಿರಾಸೆನಾ, ಖುಷಿನಾ.?

'ವಿಲನ್' ಸಿನಿಮಾ ಈಗಾಗಲೇ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಹೀಗಾಗಿ, ಇದೇ ತಿಂಗಳಲ್ಲಿ ಸಿನಿಮಾ ಬರುತ್ತೆ ಎಂಬ ನಿರೀಕ್ಷೆ ಮಾಡಿದ್ದರು ಅಭಿಮಾನಿಗಳು. ಆದ್ರೀಗ, ಇನ್ನು ಒಂದು ತಿಂಗಳು ಮುಂದಕ್ಕೆ ಹೋಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ರಿಲೀಸ್ ದಿನಾಂಕ ಅನೌನ್ಸ್ ಆಯ್ತು ಅಂತ ಖುಷಿ ಪಡೋದಾ ಅಥವಾ ಇನ್ನು ಒಂದು ತಿಂಗಳು ಮುಂದಕ್ಕೆ ಹೋಯ್ತು ಅಂತಾ ನಿರಾಸೆಯಾಗೋದಾ ಗೊತ್ತಿಲ್ಲ.

ಒಂದು ತಿಂಗಳು ಗ್ಯಾಪ್ ಯಾಕೆ.?

ಒಂದು ತಿಂಗಳು ಗ್ಯಾಪ್ ಯಾಕೆ.?

ಸಿನಿಮಾ ಕಂಪ್ಲೀಟ್ ಆಗಿದೆ. ಸೆನ್ಸಾರ್ ಮುಗಿದಿದೆ. ಆಡಿಯೋ ಬಿಡುಗಡೆಯಾಗಿದೆ. ಪ್ರೊಮೋಷನ್ ಸಾಕಾಷ್ಟಾಗಿದೆ. 1000 ಚಿತ್ರಮಂದಿರದಲ್ಲಿ ಸಿನಿಮಾ ಬರಲು ಸಜ್ಜಾಗುತ್ತಿದೆ. ಇಷ್ಟೆಲ್ಲಾ ತಯಾರಿ ಆಗಿರಬೇಕಾದರೇ, ಇನ್ನು ಒಂದು ತಿಂಗಳು ಗ್ಯಾಪ್ ಯಾಕೆ ಎಂಬ ಕುತೂಹಲ ಕಾಡುತ್ತಿದೆ. ಆದ್ರೆ, ಇದನ್ನ ನಿರ್ದೇಶಕ ಪ್ರೇಮ್ ಅವರೇ ಹೇಳಬೇಕಿದೆ.

ಸಿನಿಮಾ ತುಂಬಾ ದೊಡ್ದದು

ಸಿನಿಮಾ ತುಂಬಾ ದೊಡ್ದದು

ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿರುವ ಪ್ರಕಾರ 'ದಿ ವಿಲನ್' ಇಡೀ ಚಿತ್ರದ ಅವಧಿ 175 ನಿಮಿಷ 34 ಸೆಕೆಂಡ್ ಇದೆ. ಅಂದರೆ, ಸಿನಿಮಾದ ಸಮಯ ಬರೋಬ್ಬರಿ 2 ಗಂಟೆ 55 ನಿಮಿಷ ಚಿತ್ರ ಇದೆ. ಒಂದು ಚಿತ್ರಕ್ಕೆ 2 ಗಂಟೆ 55 ನಿಮಿಷ ತುಂಬ ದೊಡ್ಡದಲ್ಲ ಆದರೆ, ಇಂದು ಬರುತ್ತಿರುವ ಚಿತ್ರಗಳಿಗೆ ಹೋಲಿಸಿದರೆ ಈ ಸಮಯ ತುಂಬ ಹೆಚ್ಚಿದೆ.

ಮೂರು ಭಾಷೆಯಲ್ಲಿ ವಿಲನ್

ಮೂರು ಭಾಷೆಯಲ್ಲಿ ವಿಲನ್

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ 'ದಿ ವಿಲನ್' ಸಿನಿಮಾ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಈ ಬಾರಿಯ ಆಯುಧ ಪೂಜೆ ಮತ್ತಷ್ಟು ಅದ್ಧೂರಿಯಾಗಲಿದೆ.

More from Filmibeat

English summary
Kiccha sudeep and shiva rajkumar starrer the villain movie release date announced. the movie will releasing on october 18th. the movie directed by prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X