ಮೌಳಿ- ಮಹೇಶ್ ಚಿತ್ರಕ್ಕೆ ನಾಯಕಿಯಾಗಿ ಇಂಡೋನೇಷ್ಯಾ ನಟಿ ಆಯ್ಕೆ? ಲುಕ್ ಟೆಸ್ಟ್ ನಡೀತಾ?
ರಾಜಮೌಳಿ ಮುಂದಿನ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಸಿನಿಮಾ ಬಜೆಟ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದೀಗ ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಊಹಾಪೋಹ ಶುರುವಾಗಿದೆ. ಮೌಳಿ ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೋಡಿಯಾಗಿ ಇಂಡೋನೇಷ್ಯಾ ನಟಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.
'RRR' ಬಳಿಕ ಜಕ್ಕಣ್ಣ ಹಾಲಿವುಡ್ ರೇಂಜ್ ಚಿತ್ರಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಮಹೇಶ್ ಬಾಬು ಹೀರೊ ಆಗಿ ನಟಿಸೋದು ಕನ್ಫರ್ಮ್ ಆಗಿದೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ ಒದಗಿಸಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಒಂದ್ಕಡೆ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ.

ಶೀಘ್ರದಲ್ಲೇ ಮೌಳಿ- ಪ್ರಿನ್ಸ್ ಮೆಗಾ ಕಾಂಬಿನೇಷನ್ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದ್ದು ಲೊಕೇಶನ್ ನೋಡುವು, ಶೆಡ್ಯೂಲ್ ಪ್ಲ್ಯಾನ್ ಮಾಡುವ ಕೆಲಸಗಳು ನಡೀತಿದೆ. ಇದೆಲ್ಲದರ ಜೊತೆಗೆ ಮೌಳಿ ಸ್ಟಾರ್‌ಕಾಸ್ಟ್ ಫೈನಲ್ ಮಾಡುವ ಪ್ರಯತ್ನದಲ್ಲಿದ್ದಾರೆ. ಇದು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯ SSMB29 ಎಂದು ಎಂದು ಕರೆಯಲಾಗುತ್ತಿದೆ.
SSMB29 ಚಿತ್ರಕ್ಕೆ ಇಂಡೊನೇಷ್ಯಾ ಮೂಲದ ನಟಿ ಚೆಲ್ಸಿ ಇಸ್ಲಾನ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಮಾತುಕತೆ ನಡೀತಿದ್ದು ಜಕ್ಕಣ್ಣ ಲುಕ್ ಟೆಸ್ಟ್ ಸಹ ಮಾಡಿದ್ದಾರೆ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ.
ನ್ಯೂಯಾರ್ಕ್‌ನಲ್ಲಿ ಹುಟ್ಟಿದ ನಟಿ ಚೆಲ್ಸಿ ಇಸ್ಲಾನ್ ಬಳಿಕ ಜಾಕಾರ್ತದಲ್ಲಿ ಓದಿ ಬೆಳೆದರು. ಒಂದಷ್ಟು ಇಂಡೋನೇಷ್ಯಾ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಏಪ್ರಿಲ್‌ನಲ್ಲಿ SSMB29 ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ ಒಂದು ವರ್ಕ್‌ಶಾಪ್ ಮಾಡಲು ಮೌಳಿ ಪ್ಲ್ಯಾನ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆ ಇಡೀ ತಂಡ ಇದರಲ್ಲಿ ಭಾಗಿ ಆಗಲಿದೆ.

ಪ್ರಪಂಚ ಸುತ್ತಿ ಬರುವ ಸಾಹಸಿಯ ಕಥೆಯನ್ನು ತಮ್ಮ ಮುಂದಿನ ಸಿನಿಮಾದಲ್ಲಿ ಹೇಳುವುದಾಗಿ ರಾಜಮೌಳಿ ಹೇಳಿದ್ದಾರೆ. ಹಾಗಾಗಿ ವಿವಿಧ ದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಪ್ಲ್ಯಾನ್ ನಡೀತಿದೆ. ಅಮೇಜಾನ್ ಕಾಡುಗಳಲ್ಲಿ ಕೂಡ ಶೂಟಿಂಗ್ ಪ್ಲ್ಯಾನ್ ಮಾಡಲಾಗುತ್ತಿದೆ. ಸಿನಿಮಾ ಬಜೆಟ್ ಬರೋಬ್ಬರಿ 1500 ಕೋಟಿ ರೂ. ಎನ್ನಲಾಗ್ತಿದೆ.
ಅಂದಹಾಗೆ ಈ ಚಿತ್ರವನ್ನು ಹಾಲಿವುಡ್‌ನ ಪ್ರಮುಖ ಸ್ಟುಡಿಯೋ ಜೊತೆ ಕೆ. ಎಲ್ ನಾರಾಯಣ ನಿರ್ಮಿಸಲಿದ್ದಾರೆ. ಎಂ. ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದು ಪಿ. ಎಸ್ ವಿನೋದ್ ಛಾಯಾಗ್ರಹಣ ಇರುತ್ತದೆ ಎನ್ನಲಾಗ್ತಿದೆ. ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ಚೆಲ್ಸಿ ಇಸ್ಲಾನ್ ನಟಿಸ್ತಾರಾ? ಅಥವಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
SSMB29 ಜೇಮ್ಸ್ ಬಾಂಡ್ ಶೈಲಿಯ ಆಕ್ಷನ್ ಅಡ್ವೆಂಚರಸ್ ಸಿನಿಮಾ ಎನ್ನಲಾಗುತ್ತಿದೆ. ದಕ್ಷಿಣ ಭಾರತದ ಕಲಾವಿದರ ಜೊತೆಗೆ ಬಾಲಿವುಡ್ ಹಾಗೂ ಹಾಲಿವುಡ್ ಕಲಾವಿದರು ಈ ಸಿನಿಮಾದಲ್ಲಿ ನಟಿಸೋ ಸಾಧ್ಯತೆಯಿದೆ. ಈ ಹಿಂದೆ ಮಹೇಶ್ ಬಾಬು ಈ ಸಿನಿಮಾ ಬಗ್ಗೆ ಮಾತನಾಡಿದ್ದರು. "ರಾಜಮೌಳಿ ಜೊತೆ ಕೆಲಸ ಮಾಡುವ ಕನಸು ನನಸಾಗಲಿದೆ. ರಾಜಮೌಳಿ ಜೊತೆ ಒಂದು ಸಿನಿಮಾ ಮಾಡಿದರೆ 25 ಸಿನಿಮಾ ಮಾಡಿದಂತೆ. ಈ ಪ್ರಾಜೆಕ್ಟ್ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಈ ಚಿತ್ರ ರಾಷ್ಟ್ರಮಟ್ಟದ ಗಡಿಯನ್ನು ಅಳಿಸಿ ಹಾಕಲಿದೆ" ಎಂದಿದ್ದರು.


Click it and Unblock the Notifications











