ಟಿ ಆರ್ ಪಿ ಕಳ್ಳಾಟ : ಕನ್ನಡದ ಮೂರು ಧಾರಾವಾಹಿಗಳನ್ನು ಮುಗಿಸಲು ಸೂಚನೆ

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ಕಳ್ಳಾಟ ಮತ್ತೆ ಸದ್ದು ಮಾಡುತ್ತಿದೆ. ವಾಹಿನಿಯೊಂದರ ಮೂರು ಧಾರಾವಾಹಿಗಳನ್ನು ಒಟ್ಟಿಗೇ ನಿಲ್ಲಿಸಲು ಹೇಳಿರುವುದು ಈ ಬಾರಿ ದೊಡ್ಡ ವಿಷಯವಾಗಿ ಚರ್ಚೆಯಾಗುತ್ತಿದೆ.

ಅದರಲ್ಲೂ ರೇಟಿಂಗ್ ಎಜೆನ್ಸಿ ಬಾರ್ಕ್ ಸಂಸ್ಥೆ ನೇರವಾಗಿ ಟಿ ಆರ್ ಪಿ ಕಳ್ಳಾಟಕ್ಕೆ ಲಗಾಮು ಹಾಕಲು ಮುಂದಾಗಿದ್ದು ಕಳ್ಳಾಟದ ಧಾರಾವಾಹಿಗಳನ್ನು ನಿಲ್ಲಿಸುವುದಷ್ಟೆ ಅಲ್ಲ ಅಂತಹ ನಿರ್ಮಾಪಕರನ್ನು ಚಾನಲ್‌ಗಳಿಂದ ಬ್ಯಾನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಇದು ಕೆಲ ನಿರ್ಮಾಪಕರಲ್ಲಿ ನಡುಕ ಹುಟ್ಟಿಸಿದೆ.

Three major Kannada mythology serials ordered to be stopped due to TRP cheating

ಕಳೆದ ವಾರ ಏನಾಯ್ತು ?

ಕಳೆದ ವಾರ ವಾಹಿನಿಯೊಂದರ ಮುಂಬಯಿ ಮುಖ್ಯಸ್ಥರು ತಮ್ಮದೇ ವಾಹಿನಿಯಲ್ಲಿ ರಾತ್ರಿ ಪ್ರಸಾರವಾಗುವ ಮೂರು ಧಾರಾವಾಹಿಗಳನ್ನು ಸಡನ್ ಆಗಿ ನಿಲ್ಲಿಸಲು ಸೂಚಿಸಿದ್ದಾರೆ. ಇದರ ಹಿನ್ನೆಲೆ ಕೆದಕಿದಾಗ ಗೊತ್ತಾಗಿದ್ದೇನೆಂದರೆ ರೇಟಿಂಗ್ ಎಜೆನ್ಸಿ ಬಾರ್ಕ್ ಸಂಸ್ಥೆ ಆಂತರಿಕ ತನಿಖೆ ಮಾಡಿ ಈ ಮೂರು ಧಾರಾವಾಹಿಗಳ ರೇಟಿಂಗ್‌ನಲ್ಲಿ ಕಳ್ಳಾಟ ನಡೆದಿರುವುದನ್ನು ಪತ್ತೆ ಹಚ್ಚಿ ವಾಹಿನಿಗೆ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ. ಗಮನಿಸಬೇಕಾದ ಅಂಶ ಅಂದರೆ ಈ ಮೂರು ಧಾರಾವಾಹಿಗಳ ನಿರ್ಮಾಪಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ವಾಹಿನಿ ಕೂಡಾ ಧಾರಾವಾಹಿ ನಿರ್ಮಾಣದ ಅವಕಾಶ ನೀಡಬಾರದು ಎಂಬ ಕಟ್ಟು ನಿಟ್ಟಿನ ಆದೇಶ ಕೂಡಾ ಬಾರ್ಕ್ ನಿಂದ ನೀಡಲಾಗಿದೆಯಂತೆ.

ಕಳ್ಳಾಟ ಹೇಗೆ ನಡೆಯುತ್ತೆ?

ವಾಹಿನಿಗಳಿಗೆ ಪ್ರತಿ ಗುರುವಾರ ಟಿ ಆರ್ ಪಿ ಕಳಿಸುವುದು ಬಾರ್ಕ್ ಎಂಬ ಸಂಸ್ಥೆ. ಈ ಸಂಸ್ಥೆ ಕೆಲವು ಮನೆಗಳನ್ನು ಗುರುತಿಸಿ ಆ ಮನೆಯ ಟಿ.ವಿ ಗಳಿಗೆ ರೇಟಿಂಗ್ ಮೀಟರ್‌ಗಳನ್ನು ಅಳವಡಿಸುತ್ತದೆ. ಯಾವ ಸಮಯದಲ್ಲಿ ಎಷ್ಟು ಹೊತ್ತು,ಯಾವ ಕಾರ್ಯಕ್ರಮವನ್ನು ಅಥವಾ ಧಾರಾವಾಹಿಗಳನ್ನು ಆ ಮನೆಯವರು ನೋಡುತ್ತಾರೆ ಎಂಬ ಡಾಟಾವನ್ನು ಈ ಮೀಟರ್ ಸಂಗ್ರಹಿಸುತ್ತದೆ. ಕಳ್ಳಾಟ ಮಾಡುವ ನಿರ್ಮಾಪಕರು ಈ ಮೀಟರ್ ಇರುವ ಮನೆಯನ್ನು ಪತ್ತೆ ಮಾಡಿ,ಅವರಿಗೆ ಆಮಿಷಗಳನ್ನು ಒಡ್ಡಿ ನಿರ್ದಿಷ್ಟ ಸಮಯಕ್ಕೆ ತಮ್ಮ ಧಾರಾವಾಹಿಗಳನ್ನು ನೋಡುವಂತೆ ಡೀಲ್ ಮಾಡಿಕೊಳ್ಳುತ್ತಾರೆ. ಇದು ಆರ್ಗ್ಯಾನಿಕ್ ಆಗಿ ಸಿಗುವ ಡಾಟಾವನ್ನು ದಾರಿ ತಪ್ಪಿಸುತ್ತದೆ. ಆಗ ಜನ ಮನ್ನಣೆ ಪಡೆಯದ ಕೆಟ್ಟ ಕೊಳಕು ಧಾರಾವಾಹಿಗಳು ರೇಟಿಂಗ್ ಓಟದಲ್ಲಿ ಗೆಲ್ಲುತ್ತವೆ. ಪ್ರಾಮಾಣಿಕ ನಿರ್ಮಾಪಕರು ತಮ್ಮದೊಂದು ತಂಡ ಕಟ್ಟಕೊಂಡು, ಹಣ ಹಾಕಿ,ಒಳ್ಳೆಯ ಮೇಕಿಂಗ್ ಮಾಡಿ, ತಮ್ಮ ಧಾರಾವಾಹಿ ಜನ ಮೆಚ್ಚುಗೆ ಪಡೆಯಲಿ ಎಂದು ಕನಸು ಕಟ್ಟಿಕೊಳ್ಳುತ್ತಾರೆ ಆದರೆ ಅಂತಹ ಧಾರಾವಾಹಿಗಳು ರೇಟಿಂಗ್ ಲೆಕ್ಕದಲ್ಲಿ ಹಿಂದೆ ಉಳಿದುಬಿಡುತ್ತವೆ. ಟ್ಯಾಂಪರಿಗ್ ರಾಜರುಗಳು ಹಿನ್ನೆಲೆಯಲ್ಲಿ ಕಳ್ಳ ನಗು ನಗುತ್ತಾ ನಿಲ್ಲುತ್ತಾರೆ.

ಬಾರ್ಕ್ ಕಳ್ಳಾಟ ಹೇಗೆ ಪತ್ತೆ ಮಾಡುತ್ತಿದೆ?

ಕಳ್ಳಾಟ ಪತ್ತೆ ಹಚ್ಚುವಲ್ಲಿ ಈ ಬಾರಿ ಬಾರ್ಕ್ ಸಂಸ್ಥೆ ದೊಡ್ಡ ಮಟ್ಟದ ಕೆಲಸ ಮಾಡಿದೆ ಎನಾಗುತ್ತಿದೆ. ಮನೆಗಳಲ್ಲಿ ತಾನು ಅಳವಡಿಸುವ ಮೀಟರ್ ಮೇಲೆ ಕಣ್ಣಿಟ್ಟಿದ್ದಷ್ಟೆ ಅಲ್ಲ ಇತರೆ ಸೋರ್ಸ್ ಗಳಿಂದ ಸಿಗುವ ಡಾಟಾಗಳನ್ನು ಅಂದರೆ ಡಿಜಿಟಲ್ ವೀವ್ಸ್‌ ಅನ್ನು ಕೂಡಾ ಅದು ಕಳೆದ 06 ತಿಂಗಳಿಂದ ಮಾನಿಟರ್ ಮಾಡಿ ನೋಡದೆ. ಡಿಜಿಟಲ್ ವೀವ್ಸ್ ಅಂದರೆ Ott ನಲ್ಲಿ ಒಂದು ನಿರ್ದಿಷ್ಟ ಧಾರಾವಾಹಿಯನ್ನು ಎಷ್ಟು ಜನ ನೋಡಿದ್ದಾರೆ ಎಂಬ ಲೆಕ್ಕ . ಈ ಲೆಕ್ಕವನ್ನು ಇಟ್ಟುಕೊಂಡು ರೇಟಿಂಗ್ ಮೀಟರುಗಳಿಂದ ಪ್ರತಿ ಗುರುವಾರ ಸಿಗುವ ಡಾಟಾಗಳನ್ನು ಹೋಲಿಕೆ ಮಾಡಿ ನೋಡಿದೆ. OTT ಗೂ ಟಿ ವಿ ರೇಟಿಂಗಗೂ ಕಳೆದ ಆರು ತಿಂಗಳಿನಿಂದ ಹೋಲಿಕೆ ಆಗದೇ ಇರುವುದು ಕಳ್ಳರ ನಿಜ ಬಣ್ಣ ಬಯಲು ಮಾಡಿದೆ.

ಸಿ ಸಿ ಬಿ ಮತ್ತೆ ಫಿಲ್ಡಿಗೆ ಇಳಿಯುತ್ತಾ ?

ಟಿ ಆರ್ ಪಿ ಕಳ್ಳಾಟ ಹಿಡಿದು ಹಾಕುವುದು ಅಷ್ಟು ಸುಲಭವಲ್ಲ. ಇದನ್ನ ಮಾಡುವ ಖದೀಮರು ಸಿಕ್ಕಿಬಿದ್ದರೂ ಅವರಿಗೆ ಕಾನೂನಿನಲ್ಲಿ ಅಂತ ದೊಡ್ಡ ಶಿಕ್ಷೆ ಆಗುವುದಿಲ್ಲ. ಆದರೂ ಕೂಡಾ ಸಿ ಸಿ ಬಿ ಪೋಲಿಸರು ಕೆಲ ವರ್ಷದ ಹಿಂದೆ ಕನ್ನಡದಲ್ಲಿನ ಇಂತಹದ್ದೇ ಕೆಲಸ ಮಾಡಿದ್ದ ನಿರ್ಮಾಪಕರನ್ನು ಒಮ್ಮೆ ಹಿಡಿದು ಹಾಕಿದ್ದರು. ಆತ ಹೊರಗೆ ಬಂದು ಮತ್ತೆ ಪರೋಕ್ಷವಾಗಿ ಅಂದರೆ ಬೇರೆಯವರ ಹೆಸರಲ್ಲಿ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ. ಈಗ ಅವನದ್ದೇ ಮೂರು ಧಾರಾವಾಹಿಗೆ ಕುತ್ತು ಬಂದಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಸಿ ಸಿ ಬಿ ಪೊಲೀಸರಿಗೆ ಬಾರ್ಕ್ ಸಂಸ್ಥೆಯವರೇ ಕೆಲವು ಮಹತ್ವದ ಮಾಹಿತಿ ಕೊಟ್ಟಿದ್ದು ಸಿ ಸಿ ಬಿಯವರು ಕೂಡಾ ಫೀಲ್ಡಿಗೆ ಇಳಿದು ಕಳ್ಳರ ಹೆಡೆಮುರಿ ಕಟ್ಟಬಹುದು ಎಂಬ ಕುತೂಹಲ ಕನ್ನಡ ಕಿರುತೆರೆಯಲ್ಲಿ ಚರ್ಚೆಯಾಗುತ್ತಿದೆ.

ವಾಹಿನಿಯ ಶಿಲ್ಪಿ

ಈ ಬಾರಿಯ ಟ್ಯಾಂಪರಿಂಗ್ ಹಗರಣದಲ್ಲಿ ಕಳ್ಳ ನಿರ್ಮಾಕರ ಜತೆ ವಾಹಿನಿಯೊಂದರ ಧಾರಾವಾಹಿ ವಿಭಾಗದ ಮಖ್ಯಸ್ಥೆಯ ಹೆಸರು ಕೂಡಾ ಪ್ರಬಲವಾಗಿ ಕೇಳಿಬಂದಿದೆ. ತನ್ನ ವಾಹಿನಿಯಲ್ಲಿ ನಿರ್ಮಾಣ ಮಾಡುತ್ತಿರುವ ಕೆಲ ಪ್ರಾಮಾಣಿಕ ನಿರ್ಮಾಪಕರುಗಳನ್ನೂ ಕೂಡಾ ಈಕೆಯೇ ರೇಟಿಂಗ್ ಕಳ್ಳಾಟಕ್ಕೆ ಎಳೆಯುತ್ತಿದ್ದಾಳೆ ಎನ್ನಲಾಗುತ್ತಿದೆ. ಟ್ಯಾಂಪರಿಂಗ್ ಗೆ ಯಾರನ್ನು ಹಿಡಿಯಬೇಕು ? ಎಷ್ಟು ಹಣ ಕೊಡಬೇಕು ? ಎಂಬ ಡೀಲ್ ಈಕೆಯ ಸಾರಥ್ಯದಲ್ಲೇ ನಡೆಯುತ್ತಿದೆ ಎನ್ನಲಾಗುತ್ತಿದ್ದು ಈ ವಿಚಾರ ಸಿ ಸಿ ಬಿ ಪೋಲಿಸರ ತನಕ ತಲುಪಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಈಕೆಯ ಸಂಪರ್ಕದಲ್ಲಿ ಇರುವ ಕೆಲ ನಿರ್ಮಾಪಕರ ಮೇಲೆ ಕೂಡಾ ಬಾರ್ಕ್ ಸಂಸ್ಥೆ ಕಣ್ಣಿಟ್ಟಿದ್ದು ಅವರೇನಾದರೂ ಸರಿಯಾಗಿ ತಡವಿಕೊಂಡರೆ ಕೆಲ ನಿರ್ಮಾಪಕರು ಚಾನಲ್ ಗಳಿಂದ ಬ್ಯಾನ್ ಆಗಿ, ಈ ಟ್ಯಾಂಪರಿಂಗ್ ಶಿಲ್ಪಿ ಸಿ ಸಿ ಬಿ ಪೊಲೀಸರ ವಿಚಾರಣೆಗೆ ಬಂದರೂ ಬರಬಹುದು. ಒಟ್ಟಾರೆಯಾಗಿ ಈ ಸಲದ ರೇಟಿಂಗ್ ಕಳ್ಳರನ್ನು ಕಾಪಾಡಲು ಸಾಧ್ಯವಿಲ್ಲ ಅನಿಸುತ್ತಿದೆ.

More from Filmibeat

English summary
Three major Kannada mythology serials ordered to be stopped due to TRP cheating;
Read more about: serial tv show cheating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X