»   » ಥ್ರಿಲ್ಲರ್‌ ಮಂಜುಗೆ ಥ್ರಿಲ್‌ ನೀಡಿದ ಕಬ್ಬನ್‌ಪಾರ್ಕ್‌ ಪೊಲೀಸರು

ಥ್ರಿಲ್ಲರ್‌ ಮಂಜುಗೆ ಥ್ರಿಲ್‌ ನೀಡಿದ ಕಬ್ಬನ್‌ಪಾರ್ಕ್‌ ಪೊಲೀಸರು

Subscribe to Filmibeat Kannada

ಮೈ ನವಿರೇಳಿಸುವ ಸ್ಟಂಟ್‌ಗಳ ಮಾಸ್ಟರ್‌ ಥ್ರಿಲ್ಲರ್‌ ಮಂಜು ಮಂಕಾಗಿದ್ದರು. ಕಬ್ಬನ್‌ಪಾರ್ಕ್‌ ಪೊಲೀಸರ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಗಳಿಗೆ ಥ್ರಿಲ್ಲರ್‌ ಮಂಜು ಅವರಲ್ಲಿ ಉತ್ತರ ಇರಲಿಲ್ಲ . ಆ ಕಾರಣಕ್ಕಾಗಿಯೇ ಪೊಲೀಸರು ಬಂಧಿಸಿದಾಗ ಮಂಜು ಸಿನಿಮಾ ನಾಯಕನಂತೆ ಆ್ಯಕ್ಷನ್‌ಗಿಳಿಯಲಿಲ್ಲ !

ವಿಷಯ ಇಷ್ಟು-
ಮಹಾತ್ಮಗಾಂಧಿ ರಸ್ತೆಯಲ್ಲಿ ಥ್ರಿಲ್ಲರ್‌ ಗುರುವಾರ(ಮಾ.07) ಶೂಟಿಂಗ್‌ ನಡೆಸುತ್ತಿದ್ದರು. ಸಾಧು ಚಿತ್ರದ ಚಿತ್ರೀಕರಣವದು. ಮಂಜು ಮಾಡಿದ್ದು ಒಂದೇ ತಪ್ಪು ; ಗಾಂಧಿ ರಸ್ತೆಯಲ್ಲಿ ಶೂಟಿಂಗ್‌ ನಡೆಸಲು ಅನುಮತಿ ಪಡೆಯದಿದ್ದುದು. ಶೂಟಿಂಗ್‌ಗೆ ಪೊಲೀಸರಿಂದ ಅನುಮತಿ ಪಡೆದಿಲ್ಲ . ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ- ಎಂದು ಆರೋಪ ಹೊರಿಸಿದ ಕಬ್ಬನ್‌ ಪಾರ್ಕ್‌ ಪೊಲೀಸರು ಮಂಜು ಅವರನ್ನು ಬಂಧಿಸಿದರು.

ಪೊಲೀಸರೊಂದಿಗೆ ಠಾಣೆಗೆ ತೆರಳಿದ ಥ್ರಿಲ್ಲರ್‌ ಮಂಜು, ಮುಚ್ಚಳಿಕೆ ಬರೆದುಕೊಟ್ಟು ಬಿಡುಗಡೆಯಾಗಿದ್ದಾರೆ. ಇನ್ನೆಂದೂ ಇಂಥ ಪ್ರಕರಣಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಮುಚ್ಚಳಿಕೆಯಲ್ಲಿ ಅವರು ತಿಳಿಸಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada