For Quick Alerts
  ALLOW NOTIFICATIONS  
  For Daily Alerts

  ಹೀಗೂ ಉಂಟೆ! ಯಶ್ ಬಾಯಲ್ಲಿ 'ಬ್ಯಾಟು-ಬಾಲ್' ಬಂದಿದ್ದಕ್ಕೆ ಉಪ್ಪಿ-ಸುದೀಪ್ ಚರ್ಚೆ?

  By Bharath Kumar
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಹಾಗೂ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದೇ ವಾರ (ಅಕ್ಟೋಬರ್-28) ಈ ಎರಡು ದೊಡ್ಡ ನಟರ ಚಿತ್ರಗಳು ಥಿಯೇಟರ್ ಗೆ ಅಪ್ಪಳಿಸಲಿದ್ದು, ಯಾವ ಚಿತ್ರವನ್ನ ಮೊದಲು ನೋಡುವುದು ಎಂಬ ಕನ್ ಫ್ಯೂಷನ್ ಅಭಿಮಾನಿಗಳಿಗೆ ಕಾಡುತ್ತಿದೆ.

  ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ತೆರೆಕಾಣುತ್ತಿರುವುದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದು ಗಾಂಧಿನಗರ ಮಂದಿಯ ಲೆಕ್ಕಾಚಾರ. ಆದ್ರೆ, ಈ ಎಲ್ಲ ಲೆಕ್ಕಚಾರಗಳನ್ನ ಬಿಟ್ಟು, ಮತ್ತೊಂದು ಹೊಸ ಲೆಕ್ಕಾಚಾರ ನಡೆಯುತ್ತಿದೆ ಎಂಬುದು ಹಲವರ ವಾದ.['ಸಂತು' ಟ್ರೈಲರ್: ರೋಮ್ಯಾನ್ಸ್, ಡ್ಯುಯೆಟ್, ಫೈಟ್ ಎಲ್ಲವೂ ಭರ್ಜರಿಯಾಗಿದೆ]

  ಹೌದು, 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಒಂದು ಡೈಲಾಗ್, 'ಮುಕುಂದ ಮುರಾರಿ' ಟ್ವಿಟ್ಟರ್ ನಲ್ಲಿ ನಡೆಸುತ್ತಿರುವ ವಿಡಿಯೋ ಚರ್ಚೆಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಓದಿ..

  'ಸಂತು' ಮತ್ತು 'ಮುಕುಂದ ಮುರಾರಿ'

  'ಸಂತು' ಮತ್ತು 'ಮುಕುಂದ ಮುರಾರಿ'

  'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈ ಟೀಸರ್ ನಲ್ಲಿ ಯಶ್ ಹೊಡೆದಿರುವ 'ಬ್ಯಾಟ್-ವಿಕೆಟ್' ಡೈಲಾಗ್ ಸ್ಯಾಂಡಲ್ ವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಡೈಲಾಗ್ ಪರಿಣಾಮ, ಉಪೇಂದ್ರ ಹಾಗೂ ಸುದೀಪ್ ಟ್ವಿಟ್ಟರ್ ನಲ್ಲಿ 'ಬ್ಯಾಟ್-ವಿಕೆಟ್' ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.[ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?]

  ಯಶ್ ಡೈಲಾಗ್ ಹೀಗಿದೆ....

  ಯಶ್ ಡೈಲಾಗ್ ಹೀಗಿದೆ....

  ''ತಲ್ವಾರ್ ಹಿಡ್ಕೊಂಡು ತಲೆ ತೆಗಿತೀನಿ ಅಂದೋರ್ ಬಗ್ಗೇನೆ ತಲೆ ಕೆಡಿಸ್ಕೊಂಡಿಲ್ಲ, ಇನ್ ನೀವ್ ಏನ್ರೋ ಚಿಕ್ ಮಕ್ಕಳ್ ತರ ವಿಕೆಟ್ ಬ್ಯಾಟ್ ಹಿಡ್ಕೊಂಡು ಬಂದಿದ್ದೀರಾ?'' ಯಶ್ ಹೇಳುವ ಡೈಲಾಗ್ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಟೀಸರ್ ನಲ್ಲಿದೆ.

  ಉಪ್ಪಿ ಕೇಳಿದ ಪ್ರಶ್ನೆ ಏನು?

  ಉಪ್ಪಿ ಕೇಳಿದ ಪ್ರಶ್ನೆ ಏನು?

  ''ನಾವಿಬ್ಬರು ಸೇರಿ ಒಂದು ಸಿನಿಮಾ ಮಾಡಿದ್ದೀವಿ. ಅದರಲ್ಲಿ ಒಬ್ಬರು ಬ್ಯಾಟ್, ಒಬ್ಬರು ವಿಕೆಟ್ ಅಂತ ಎಲ್ಲೋ ಒಂದು ಕಡೆಯಿಂದ ಕೇಳದೆ, ನಮ್ಮಿಬ್ಬರ ಮಧ್ಯೆ ಬ್ಯಾಟ್ ಯಾರು? ವಿಕೆಟ್ ಯಾರು? ಉತ್ತರ ಕೊಡಿ'' - ಎಂದು ಉಪೇಂದ್ರ, ಸುದೀಪ್ ಗೆ ಪ್ರಶ್ನೆ ಕೇಳಿದ್ದರು.(ಆ ವಿಡಿಯೋ ಇಲ್ಲಿದೆ ನೋಡಿ)

  ಈ ಡೈಲಾಗ್ ನಿಂದ, 'ಮುಕುಂದ ಮುರಾರಿ' ಕೋಪವಾದ್ರಾ?

  ಈ ಡೈಲಾಗ್ ನಿಂದ, 'ಮುಕುಂದ ಮುರಾರಿ' ಕೋಪವಾದ್ರಾ?

  'ಸಂತು ಸ್ಟ್ರೈಟ್ ಫಾರ್ವರ್ಡ್' ರಾಕಿಂಗ್ ಸ್ಟಾರ್ ಯಶ್ ಹೊಡೆದಿರುವ ಈ ಡೈಲಾಗ್, 'ಮುಕುಂದ ಮುರಾರಿ'ಯ ಕೋಪಕ್ಕೆ ಕಾರಣವಾಗಿದ್ಯಾ ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.[ಟ್ವಿಟ್ಟರ್ ಕಾಂಪಿಟೇಷನ್: 'ಉಪೇಂದ್ರ' ಕೇಳಿದ ಪ್ರಶ್ನೆಗೆ 'ಕಿಚ್ಚನ' ಉತ್ತರ ಇಲ್ಲಿದೆ ]

  ಉಪ್ಪಿ ಕೇಳಿದ ಎರಡನೇ ಪ್ರಶ್ನೆ

  ಉಪ್ಪಿ ಕೇಳಿದ ಎರಡನೇ ಪ್ರಶ್ನೆ

  'ಮುಕುಂದ ಮುರಾರಿ' ಹಾಗೂ 'ಸಂತು ಸ್ಟ್ರೈಟ್ ಫಾರ್ವರ್ಡ್' ಒಂದೇ ದಿನ ಬಿಡುಗಡೆ ಆಗುತ್ತಿದೆ ಅಂತ ಎಲ್ಲರಿಗೂ ಗೊತ್ತು. ಇದಕ್ಕೆ 'ಸ್ಟಾರ್ ವಾರ್' ಅಂತ ಕೆಲವರು ವ್ಯಾಖ್ಯಾನ ಮಾಡುತ್ತಿದ್ದರೆ, 'ನಾವೆಲ್ಲ ಒಂದೇ' ಅಂತ ಸುದೀಪ್ 'ಒಗ್ಗಟ್ಟಿನ' ಮಂತ್ರ ಜಪಿಸಿದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಿಯಲ್ ಸ್ಟಾರ್ ಉಪೇಂದ್ರ ಎರಡನೇ ಬೌನ್ಸರ್ ಎಸೆದಿದ್ದಾರೆ.

  ಕಾಂಪಿಟೇಷನ್ ಬಗ್ಗೆ ಉಪ್ಪಿ ಪ್ರಶ್ನೆ

  ಕಾಂಪಿಟೇಷನ್ ಬಗ್ಗೆ ಉಪ್ಪಿ ಪ್ರಶ್ನೆ

  ''ಕಾಂಪಿಟೇಷನ್ ಅಂದ್ರೆ ಏನು? ನಿಮ್ಮ ಜೊತೆ ನೀವೇ ಕಾಂಪೀಟ್ ಮಾಡ್ಕೊಂಡು ಗೆಲ್ಲೋಕೆ ಇಷ್ಟ ಪಡುತ್ತೀರಾ? ಬೇರೆಯವರ ಜೊತೆ ಕಾಂಪೀಟ್ ಮಾಡಿ ಗೆಲ್ಲೋಕೆ ಇಷ್ಟ ಪಡುತ್ತೀರಾ? ನನಗೆ ತುಂಬಾ ಫ್ರಾಂಕ್ ಒಪೀನಿಯನ್ ಬೇಕು'' ಅಂತ ವಿಡಿಯೋ ಮೂಲಕ ಸುದೀಪ್ ರವರಿಗೆ ಉಪೇಂದ್ರ ಪ್ರಶ್ನೆ ಕೇಳಿದ್ದಾರೆ.(ವಿಡಿಯೋ ಲಿಂಕ್ ಇಲ್ಲಿದೆ ನೋಡಿ...)

  ಚಾಲೆಂಜ್ ಮಾಡೋದ್ರಲ್ಲಿ ಅರ್ಥವಿಲ್ಲ: ಸುದೀಪ್

  ಚಾಲೆಂಜ್ ಮಾಡೋದ್ರಲ್ಲಿ ಅರ್ಥವಿಲ್ಲ: ಸುದೀಪ್

  ''ಒಬ್ಬರೇ ಬಂದಿರುವುದು ಸತ್ಯ, ಒಬ್ಬರೇ ಹೋಗುವುದು ಸತ್ಯ. ಇನ್ನೋಬ್ಬರ ಮೇಲೆ ಚಾಲೆಂಜ್ ಮಾಡುವ ಅರ್ಥವಿಲ್ಲ. ನಾವೇ ಇನ್ ಫರ್ಫೆಕ್ಟ್, ನಮ್ಮಲ್ಲೇ ಸಾವಿರ ಕೊರತೆಯಿದೆ. ಇನ್ನೋಬ್ಬರಿಗೆ ಹೇಗೆ ಚಾಲೆಂಜ್ ಮಾಡೋಕೆ ಆಗುತ್ತೆ. ನಮ್ಮನ್ನ ನಾವು ಗೆಲ್ಲಬೇಕು ಫಸ್ಟ್, ಕಾಂಪಿಟೇನ್ ಅಂದ್ರೆ ಅದು ನನಗೆ ಮಾತ್ರ. ಚಾಲೆಂಜ್ ಎನ್ನುವುದು ನನಗೆ ನಾನೇ ಹಾಕಿಕೊಳ್ಳುವುದು. ಬೇರೆಯವರ ಜೊತೆಯಲ್ಲ.'' ಸುದೀಪ್ ಉಪ್ಪಿಯ ಎರಡನೇ ಪ್ರಶ್ನೆಗೆ ವಿಡಿಯೋ ಮೂಲಕ ಫ್ರಾಂಕ್ ಉತ್ತರ ಕೊಟ್ಟಿದ್ದಾರೆ.(ವಿಡಿಯೋ ಲಿಂಕ್ ಇಲ್ಲಿದೆ ನೋಡಿ..)

  ಯಶ್ ಬಗ್ಗೆ ಸುತ್ತಿ ಬಳಸಿ ಮಾತನಾಡುತ್ತಿದ್ದಾರಾ?

  ಯಶ್ ಬಗ್ಗೆ ಸುತ್ತಿ ಬಳಸಿ ಮಾತನಾಡುತ್ತಿದ್ದಾರಾ?

  ಹೇಗಿದ್ದರೂ, 'ಮುಕುಂದ ಮುರಾರಿ' ಜೊತೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಬಿಡುಗಡೆ ಆಗುತ್ತಿದೆ. ಹೀಗಾಗಿ, ಅದರ ಜೊತೆಗಿನ ಸ್ಪರ್ಧೆ ಬಗ್ಗೆ ಉಪೇಂದ್ರ ಪ್ರಶ್ನೆ ಮಾಡಿದ್ದಾರಾ? ಕ್ಲಾರಿಟಿ ಅಂತೂ ಇಲ್ಲ. ಯಶ್ ಬಗ್ಗೆ ಇಬ್ಬರೂ ಹೆಸರು ಎತ್ತಿಲ್ಲ. ಆದ್ರೂ, ಒಳ ಅರ್ಥ ಇರಬಹುದಲ್ವಾ? ಎಂಬುದು ಅನೇಕರಿಗೆ ಕಾಡುತ್ತಿದೆ.

  ಯಶ್ ಡೈಲಾಗ್ ಗಳೇ ಹೀಗೆ....

  ಯಶ್ ಡೈಲಾಗ್ ಗಳೇ ಹೀಗೆ....

  ರಾಕಿಂಗ್ ಸ್ಟಾರ್ ಯಶ್ ಚಿತ್ರಗಳಲ್ಲಿರುವ ಡೈಲಾಗ್ ಗಳು ಸ್ವಲ್ಪ ಹೀಗೆಯೇ...ಈ ಹಿಂದೆ ತೆರೆಕಂಡಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಹೊಡೆದಿದ್ದ ''ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ'' ಡೈಲಾಗ್ ಕೂಡ ಸ್ಯಾಂಡಲ್ ವುಡ್ ನ ಹಲವು ನಟರ ಕೆಂಗಣ್ಣಿಗೆ ಗುರಿಯಾಗಿತ್ತು.

  'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಡೆದಿರುವ ಡೈಲಾಗ್ (ಟೀಸರ್ ಇಲ್ಲಿದೆ ನೋಡಿ.....)

  English summary
  Kiccha Sudeep and Real Star Upendra have taken their Twitter Account for 'Funny Computation'. But Is Yash's dialogue from 'Santhu Straight Forward' teaser made Upendra question Sudeep regarding 'Bat-Ball-Wicket'? is a question as of now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X