ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?

By Harshitha

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿದ್ದಾರೆ. ಈ ಸುದ್ದಿ ಹಳೆಯದ್ದೇ. ''ನಿಖಿಲ್ ಗೌಡ, ಬಣ್ಣ ಹಚ್ಚುವುದು ಪಕ್ಕಾ. ಅದು ನಮ್ಮದೇ ಬ್ಯಾನರ್ ಮೂಲಕ ಅನ್ನೋದು ಅಷ್ಟೇ ಸತ್ಯ. ಆದ್ರೆ ಯಾವಾಗ, ಹೇಗೆ ಅಂತ ಸದ್ಯದಲ್ಲೇ ತಿಳಿಸುತ್ತೇನೆ'' ಅಂತ ಕುಮಾರಸ್ವಾಮಿ ಹಿಂದೊಮ್ಮೆ ಹೇಳಿದ್ದರು.

ಇದೀಗ ಆ ಮಾತು ನಿಜವಾಗಿದೆ. ನಿಖಿಲ್ ಗೌಡ ಆರಂಗೇಟ್ರಂಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಮಣ್ಣಿನ ಮೊಮ್ಮಗನ 'ಸಿಲ್ವರ್ ಸ್ಕ್ರೀನ್ ಗ್ರ್ಯಾಂಡ್ ಎಂಟ್ರಿ'ಗೆ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ಪ್ಲಾನಿಂಗ್ ಮಾಡಲಾಗುತ್ತಿದೆ.

ಫಿಟ್ನೆಸ್ ನಿಂದ ಹಿಡಿದು ಡೈರೆಕ್ಟರ್ ವರೆಗೂ ನಿಖಿಲ್ ಗೌಡ ತುಂಬಾ ಚ್ಯೂಸಿಯಾಗಿದ್ದಾರಂತೆ. ತಮ್ಮ ಚಿತ್ರದ ಮೂಲಕ ಟಾಲಿವುಡ್ ನಿರ್ದೇಶಕರೊಬ್ಬರನ್ನ ಕನ್ನಡಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ನಿಖಿಲ್ ಅನ್ನುವ ಬ್ರೇಕಿಂಗ್ ನ್ಯೂಸ್ ಇದೀಗ ಗಾಂಧಿನಗರದಿಂದ ಲಭ್ಯವಾಗಿದೆ. ಹಾಗಾದ್ರೆ ಆ ನಿರ್ದೇಶಕರು ಯಾರು..? ಮುಂದೆ ಓದಿ.......

ನಿಖಿಲ್ ಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕರು ಯಾರು?

ನಿಖಿಲ್ ಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕರು ಯಾರು?

ನಿಖಿಲ್ ಗೌಡ ಆಪ್ತವಲಯದಿಂದ ಕೇಳಿಬರುತ್ತಿರುವ ಸುದ್ದಿ ಪ್ರಕಾರ, ಗೌಡರ ಮೊಮ್ಮಗನ ರೆಡ್ ಕಾರ್ಪೆಟ್ ಎಂಟ್ರಿಗೆ ರಾಜಮೌಳಿ ಬೆಸ್ಟ್! ಅನ್ನುವ ಅಭಿಪ್ರಾಯ ವ್ಯಕ್ತವಾಗಿದ್ಯಂತೆ. ಟಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ರಾಜಮೌಳಿ, ಕನ್ನಡದಲ್ಲೂ ನಿಖಿಲ್ ಚೊಚ್ಚಲ ಚಿತ್ರದ ಮೂಲಕ ಧೂಳೆಬ್ಬಿಸಲಿ ಅನ್ನುವುದು ನಿಖಿಲ್ ಸಂಗಡಿಗರ ಆಸೆ.

ಗಾಂಧಿನಗರಕ್ಕೆ ಕಾಲಿಡುತ್ತಾರಾ ರಾಜಮೌಳಿ..?

ಗಾಂಧಿನಗರಕ್ಕೆ ಕಾಲಿಡುತ್ತಾರಾ ರಾಜಮೌಳಿ..?

'ಬಾಹುಬಲಿ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರುವ ರಾಜಮೌಳಿ, ಚಿತ್ರ ಮುಗಿಯುವವರೆಗೂ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಕಿಚ್ಚ ಸುದೀಪ್ ಮೂಲಕ ಗಾಂಧಿನಗರದ ಪರಿಚಯವಿರುವ ರಾಜಮೌಳಿ, ನಿಖಿಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರೂ ಅಚ್ಚರಿಯಿಲ್ಲ. ಹೇಗಿದ್ದರೂ ನಿಖಿಲ್ ಎಂಟ್ರಿ ಕೊಂಚ ತಡವಾಗುತ್ತದೆ. ಅಷ್ಟರೊಳಗೆ, ರಾಜಮೌಳಿ 'ಬಾಹುಬಲಿ'ಗೆ ಅಂತ್ಯ ಹಾಡಿದ್ದರೆ ಕನ್ನಡಕ್ಕೆ ಬರುವ ಮನಸ್ಸು ಮಾಡಬಹುದು.

ರಾಜಮೌಳಿ ಬಿಟ್ರೆ ಬೇರೆ ಯಾರಿದ್ದಾರೆ..?

ರಾಜಮೌಳಿ ಬಿಟ್ರೆ ಬೇರೆ ಯಾರಿದ್ದಾರೆ..?

ಒಂದ್ವೇಳೆ ರಾಜಮೌಳಿ ಇಲ್ಲಾಂದ್ರೆ, ಸೂಪರ್ ಹಿಟ್ ಚಿತ್ರಗಳ ಸರದಾರ ನಿರ್ದೇಶಕ ಸುಕುಮಾರ್ ರನ್ನ ಕರೆಸುವ ಯೋಜನೆ ಕೂಡ ಗೌಡರ ಕುಟುಂಬಕ್ಕಿದ್ಯಂತೆ. 'ಆರ್ಯ', 'ಆರ್ಯ-2', 'ನೇನೊಕ್ಕಿಡೇ' ಸೇರಿದಂತೆ ಸಾಲು ಸಾಲು ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡಿರುವ ಸುಕುಮಾರ್, ನಿಖಿಲ್ ಗೂ ಪ್ರಪ್ರಥಮ ಹಿಟ್ ಕೊಡಲಿ ಅನ್ನುವುದು ಎಲ್ಲರ ಆಶಯ.

ಚೊಚ್ಚಲ ಚಿತ್ರ ತೆಲುಗಿನ ರೀಮೇಕ್..?

ಚೊಚ್ಚಲ ಚಿತ್ರ ತೆಲುಗಿನ ರೀಮೇಕ್..?

ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಗುಲ್ಲೆದ್ದಿರುವ ಖಾಸ್ ಖಬರ್ ಅಂದ್ರೆ ಇದೆ. ನಿಖಿಲ್ ಗೌಡ ಮೊದಲ ಚಿತ್ರ, ತೆಲುಗಿನ ಸೂಪರ್ ಹಿಟ್ ಚಿತ್ರವೊಂದರ ರೀಮೇಕ್ ಆಗಲಿದ್ಯಂತೆ. ಅದಕ್ಕಾಗಿ ತೆಲುಗು ನಿರ್ದೇಶಕರನ್ನ ಕರೆಸುವ ಪ್ರಯತ್ನ ನಡೆಯುತ್ತಿದೆ ಅಂತ ಮಾತನಾಡುವವರೂ ಇದ್ದಾರೆ. ಇದಕ್ಕೆ ಸಾಕ್ಷಿ, ತೆಲುಗಿನ ಕೆಲ ಹಿಟ್ ಚಲನಚಿತ್ರಗಳ ರೀಮೇಕ್ ರೈಟ್ಸ್ ನ ನಿಖಿಲ್ ಗೌಡ ಖರೀದಿಸಿರುವುದು.

ಸ್ವಮೇಕ್ ಚಿತ್ರಕ್ಕೆ ಆದ್ಯತೆ..?!

ಸ್ವಮೇಕ್ ಚಿತ್ರಕ್ಕೆ ಆದ್ಯತೆ..?!

ಗೌಡರ ಮನೆಯ ಆಪ್ತ ಮೂಲಗಳ ಪ್ರಕಾರ, ನಿಖಿಲ್ ಒಲವು ಸ್ವಮೇಕ್ ಚಿತ್ರಗಳ ಮೇಲಿದ್ಯಂತೆ. ಆದ್ದರಿಂದ ಮೊದಲ ಚಿತ್ರ ಸ್ವಮೇಕ್ ಮಾಡುವುದು ಪಕ್ಕಾ. ಟಾಲಿವುಡ್ ನಿರ್ದೇಶಕರನ್ನ ಪಕ್ಕಕ್ಕಿಟ್ಟು, ಕನ್ನಡದಲ್ಲಿರುವ ಯುವ ಪ್ರತಿಭೆಗಳಿಗೆ ಮಣೆ ಹಾಕುವ ಸದುದ್ದೇಶ ಕುಮಾರಸ್ವಾಮಿ ತಲೆಯಲ್ಲಿದೆಯಂತೆ.

ಸಿಕ್ಸ್ ಪ್ಯಾಕ್ ನಲ್ಲಿ 'ನಿಖಿಲ್' ಫುಲ್ ಫಿಟ್

ಸಿಕ್ಸ್ ಪ್ಯಾಕ್ ನಲ್ಲಿ 'ನಿಖಿಲ್' ಫುಲ್ ಫಿಟ್

ಓದು ಮುಗಿಸಿ, ಅಪ್ಪ-ತಾತನ ಹಾದಿಯಲ್ಲಿ ರಾಜಕೀಯಕ್ಕೆ ಧುಮುಕಿರುವ ನಿಖಿಲ್ ಗೌಡಗೆ ಚಿತ್ರರಂಗದ ಬಗ್ಗೆಯೂ ಅಪಾರ ಆಸಕ್ತಿ. ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಮಿಂಚುವುದಕ್ಕೆ ನಿಖಿಲ್ ಗೌಡ ಅದಾಗಲೇ ಫಿಟ್ನೆಸ್ ಮಂತ್ರವನ್ನೂ ಜಪಿಸುತ್ತಿದ್ದಾರೆ. ದಿನಬೆಳಗಾದರೆ ಅಪ್ಪನ ಜೊತೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ನಿಖಿಲ್ ಸಿಕ್ಸ್ ಪ್ಯಾಕ್ ಆಬ್ಸ್ ಬಿಲ್ಡ್ ಮಾಡಿ, ಹಾಟ್ ಅಂಡ್ ಹ್ಯಾಂಡ್ಸಮ್ ಆಗಿದ್ದಾರೆ.

'ಚೆನ್ನಾಂಬಿಕ ಫಿಲ್ಮ್ಸ್' ನಡಿ ಭರವಸೆಯ ಅಡಿ

'ಚೆನ್ನಾಂಬಿಕ ಫಿಲ್ಮ್ಸ್' ನಡಿ ಭರವಸೆಯ ಅಡಿ

ಈಗಾಗಲೇ ಜಗಜ್ಜಾಹೀರಾಗಿರುವಂತೆ ತಮ್ಮ ಹೋಮ್ ಬ್ಯಾನರ್ 'ಚೆನ್ನಾಂಬಿಕ ಫಿಲ್ಮ್ಸ್ ಮೂಲಕ ನಿಖಿಲ್ ಗೌಡ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ಆ ಮೂಲಕ ಬಹುದಿನಗಳ ನಂತ್ರ 'ಚೆನ್ನಾಂಬಿಕ ಫಿಲ್ಮ್ಸ್' ಖಾತೆಗೆ ಗಾಂಧಿನಗರದಲ್ಲಿ ಮರು ಚಾಲನೆ ಸಿಗಲಿದೆ. [ಕನ್ನಡ ಚಿತ್ರರಂಗಕ್ಕೆ ಕುಮಾರಸ್ವಾಮಿ ಪುನರಾಗಮನ]

ಚಿತ್ರ ಅನೌನ್ಸ್ ಯಾವಾಗ?

ಚಿತ್ರ ಅನೌನ್ಸ್ ಯಾವಾಗ?

ಸದ್ಯಕ್ಕೆ ಎಲ್ಲಾ ಪ್ಲಾನಿಂಗ್ ಹಂತದಲ್ಲಿರುವುದರಿಂದ ಚಿತ್ರ ಸೆಟ್ಟೇರುವುದು ಏಪ್ರಿಲ್ ಅಥವಾ ಮೇ ವೇಳೆಗೆ. ಅಷ್ಟರಲ್ಲಿ ನಿಖಿಲ್ ಚೊಚ್ಚಲ ಚಿತ್ರದ ಬಗ್ಗೆ ಒಂದು ಕ್ಲಾರಿಟಿ ಸಿಗಲಿದೆ. ಪಾತ್ರವರ್ಗ ಬಹಿರಂಗವಾಗುತ್ತದೆ. ಎಲ್ಲವೂ ಫೈನಲ್ ಆಗುವವರೆಗೂ ಅಭಿಮಾನಿಗಳು ಕಾಯಲೇಬೇಕಾಗಿರುವುದು ಅನಿವಾರ್ಯ.

More from Filmibeat

English summary
H.D.Kumaraswamy's son Nikhil Gowda is all set to make debut in Sandalwood. As per the Gandhinagar sources, Tollywood Directors namely Rajamouli and Sukumar are contacted to direct Nikhil's First film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X