For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಜೂ.ಎನ್‌ಟಿಆರ್ ಹಾಲಿವುಡ್‌ಗೆ ಎಂಟ್ರಿ? ಸುದ್ದಿ ಸೋರಿಕೆ ಮಾಡಿದ್ದೇಗೆ?

  |

  ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ವಿಶ್ವದೆಲ್ಲೆಡೆ ಭಾರಿ ಮೆಚ್ಚುಗೆ ಗಳಿಸಿದೆ. ಅದಲ್ಲೂ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದ ಬಳಿಕವಂತೂ ದೇಶ-ವಿದೇಶದಲ್ಲಿ ಮತ್ತಷ್ಟು ಫೇಮಸ್ ಆಗುತ್ತಿದೆ. ಯಂಗ್ ಟೈಗರ್ ಜೂ.ಎನ್‌ಟಿಆರ್ ಹಾಗೂ ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್ ಇಬ್ಬರ ಕ್ರೇಜ್ ದುಪ್ಪಟ್ಟಾಗಿದೆ.

  ಥಿಯೇಟರ್‌ನಲ್ಲಷ್ಟೇ ಅಲ್ಲ RRR ಸಿನಿಮಾ ಓಟಿಟಿಯಲ್ಲೂ ಹೆಚ್ಚು ಮಾಡಿದೆ. ವಿಶ್ವದಾದ್ಯಂತ ಲಭ್ಯವಿರೋದ್ರಿಂದ ಈ ಸಿನಿಮಾವನ್ನು ಹಾಲಿವುಡ್‌ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ 1100 ಕೋಟಿ ರೂ. ಗಡಿಯನ್ನು ದಾಟಿದ ಸಿನಿಮಾ, ನೆಟ್‌ಫ್ಲಿಕ್ಸ್‌ನಲ್ಲಿ ಮತ್ತಷ್ಟು ಸದ್ದು ಮಾಡಿತ್ತು.

  ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರ

  RRR ಮೂಲಕ ರಾಜಮೌಳಿ, ಜೂ. ಎನ್‌ಟಿಆರ್ ಹಾಗೂ ರಾಮ್‌ ಚರಣ್ ತೇಜಾ ಈ ಮೂವರ ರೇಂಜ್ ಬದಲಾಗಿದೆ. ಈ ಸಿನಿಮಾವನ್ನು ಆಸ್ಕರ್‌ಗೆ ಕಳಿಸಬೇಕು ಅಂತ ಚರ್ಚೆಯಾಗುತ್ತಿದೆ. ಇನ್ನೊಂದ್ಕಡೆ ಹಾಲಿವುಡ್‌ನ ಪಾಪುಲರ್ ಮ್ಯಾಗಜೀನ್ ಬಗ್ಗೆನೂ ಆಸ್ಕರ್ ಎಂಟ್ರಿ ಬಗ್ಗೆ ಸಿಕ್ಕಾ ಸದ್ದಾಗುತ್ತಿದೆ. ಸದ್ಯ ಟಾಲಿವುಡ್‌ನಲ್ಲಿ ಜೂ. ಎನ್‌ಟಿಆರ್ ಹಾಲಿವುಡ್ ಎಂಟ್ರಿ ಬಗ್ಗೆನೇ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಮ್ಯಾಟರ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಪ್ಯಾನ್ ಇಂಡಿಯಾ ಸ್ಟಾರ್.. ಜೂ.ಎನ್‌ಟಿಆರ್!

  ಪ್ಯಾನ್ ಇಂಡಿಯಾ ಸ್ಟಾರ್.. ಜೂ.ಎನ್‌ಟಿಆರ್!

  RRR ಸಿನಿಮಾ ರಿಲೀಸ್ ಆದಾಗ ಜೂ. ಎನ್‌ಟಿಆರ್ ಅಭಿಮಾನಿಗಳು ರಾಜಮೌಳಿ ವಿರುದ್ಧ ಕಿಡಿಕಾರಿದ್ದರು. ತಮ್ಮ ನೆಚ್ಚಿನ ನಟನನ್ನು ಸರಿಯಾಗಿ ತೋರಿಸಿಲ್ಲವೆಂದು ಆಕ್ರೋಶ ಹೊರ ಹಾಕಿದ್ದರು. ಆದರೆ, ನೆಟ್‌ಫ್ಲಿಕ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಜೂ.ಎನ್‌ಟಿಆರ್ ರೋಲ್ ಜನಪ್ರಿಯಾಗುತ್ತಿದೆ. ಫೇಮಸ್ ಫಿಲ್ಮ್ ಮೇಕರ್‌ಗಳೆಲ್ಲಾ ಜೂ. ಎನ್‌ಟಿಆರ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅದರ ಪರಿಣಾಮವೇ ಜೂ.ಎನ್‌ಟಿಆರ್ ಹಾಲಿವುಡ್‌ ಎಂಟ್ರಿಗೆ ವೇದಿಕೆ ಸಜ್ಜಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಹಾಲಿವುಡ್‌ ಸಿನಿಮಾ ಆಫರ್

  ಹಾಲಿವುಡ್‌ ಸಿನಿಮಾ ಆಫರ್

  ಸೋಶಿಯಲ್ ಮೀಡಿಯಾದಲ್ಲಿ ಜೂ.ಎನ್‌ಟಿಆರ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರದಲ್ಲಿಯೇ ಜೂ.ಎನ್‌ಟಿಆರ್ ಹಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಅಂತನೂ ಹೇಳಲಾಗಿದೆ. RRR ಸಿನಿಮಾ ನೋಡಿದ ಫಿಲ್ಮ್ ಮೇಕರ್‌ಗಳಿಗೆ ಜೂ. ಎನ್‌ಟಿಆರ್ ಪಾತ್ರ ಇಷ್ಟ ಆಗಿದ್ದರಿಂದ ಹಾಲಿವುಡ್ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

  ಜೂ.ಎನ್‌ಟಿಆರ್ ಹಾಲಿವುಡ್ ಎಂಟ್ರಿ ನಿಜವೇ?

  ಜೂ.ಎನ್‌ಟಿಆರ್ ಹಾಲಿವುಡ್ ಎಂಟ್ರಿ ನಿಜವೇ?

  ಅಷ್ಟಕ್ಕೂ ಜೂ.ಎನ್‌ಟಿಆರ್ ಹಾಲಿವುಡ್ ಸಿನಿಮಾ ಬಗ್ಗೆ ಯುಕೆ ಹಾಗೂ ಯುಎಇಯ ಸಿನಿಮಾ ಟ್ರಿಟಿಕ್ ಉಮೈರ್ ಸಂಧು ರಿವೀಲ್ ಮಾಡಿದ್ದಾರೆ. " ಅಧಿಕೃತವಾಗಿ ಕನ್ಫರ್ಮ್ ಆಗಿದೆ. ಹಾಲಿವುಡ್ ನೆಟ್‌ಫ್ಲಿಕ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಜೂ.ಎನ್‌ಟಿಆರ್‌ಗೆ ಆಫರ್ ಮಾಡಲಾಗಿದೆ. ಎನ್‌ಟಿಆರ್‌ಗೂ ಸಿನಿಮಾದ ಸ್ಕ್ರಿಪ್ಟ್ ಇಷ್ಟ ಆಗಿದೆ. ಹಾಲಿವುಡ್‌ಗೆ ಸ್ವಾಗತ ಎನ್‌ಟಿಆರ್. ಈ ಆಫರ್ ಗಿಟ್ಟಿಸಿಕೊಂಡ ಟಾಲಿವುಡ್‌ನ ಏಕೈಕ ನಟ" ಎಂದು ಟ್ವೀಟ್ ಮಾಡಿದ್ದಾರೆ.

  ರಾಮ್ ಚರಣ್ ಬಗ್ಗೆ ಉಮೈರ್ ಸಂಧು ಹೇಳಿದ್ದೇನು?

  ರಾಮ್ ಚರಣ್ ಬಗ್ಗೆ ಉಮೈರ್ ಸಂಧು ಹೇಳಿದ್ದೇನು?

  ಎನ್‌ಟಿಆರ್ ಹಾಲಿವುಡ್ ಎಂಟ್ರಿ ಬಗ್ಗೆ ಟ್ವೀಟ್ ಮಾಡಿದ್ದ ಸೆಲ್ಫ್ ಮೇಡ್ ಕ್ರಿಟಿಕ್ ರಾಮ್‌ ಚರಣ್‌ ಬಗ್ಗೆನೂ ಬರೆದಿದ್ದಾರೆ. " ರಾಮ್‌ ಚರಣ್ ತುಂಬಾನೇ ಒತ್ತಡದಲ್ಲಿದ್ದಾರೆ. ಯಾಕೆಂದರೆ, RRR ಸಿನಿಮಾದಿಂದ ಜೂ.ಎನ್‌ಟಿಆರ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಬಂದಿದೆ. ಅಲ್ಲದೆ ಆಸ್ಕರ್ ಪ್ರಶಸ್ತಿಗೂ ನಾಮಿನೇಷನ್ ಆಗುವ ಸಾಧ್ಯತೆ ಇದೆ. ರಾಮ್‌ ಚರಣ್ ಅನ್ನು ಅಂತರಾಷ್ಟ್ರೀಯ ಸಿನಿಮಾ ವಿಮರ್ಶಕರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಎಲ್ಲರಿಗೂ ಜೂ.ಎನ್‌ಟಿಆರ್‌ ಇಷ್ಟ ಆಗಿದೆ." ಎಂದು ಬರೆದುಕೊಂಡಿದ್ದಾರೆ.

  English summary
  Tollywood Gossip: Jr NTR Hollywood Debut For Netflix Action Thriller. Know More,
  Tuesday, August 16, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X