For Quick Alerts
ALLOW NOTIFICATIONS  
For Daily Alerts

ದಕ್ಷಿಣ ಭಾರತ ಬೆಳ್ಳಿಪರದೆಯ 16 ಚಂದ್ರಚಕೋರಿಯರು!

By Srinath
|

ದಕ್ಷಿಣ ಭಾರತದ ಚಿತ್ರರಂಗ ಯಾವುದಕ್ಕೂ ಕಡಿಮೆಯಿಲ್ಲ. ಇಲ್ಲಿ ಬಾಲಿವುಡ್, ಹಾಲಿವುಡ್ ಗಿಂತಲೂ ಹೆಚ್ಚು ಪ್ರಯೋಗಗಳು ನಡೆಯುತ್ತವೆ. ಇಲ್ಲಿನ ತಂತ್ರಜ್ಞಾನವೂ ನಟ/ನಟಿಯರಂತೆ ಜೀವಂತ. ಇನ್ನು, ಇಲ್ಲಿನ ತಂತ್ರಜ್ಞಾನ ಮತ್ತು ನಟ/ನಟಿಯರು ಬಾಲಿವುಡ್ ಗೂ ರಫ್ತಾಗುವುದುಂಟು.

ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಬೆಳ್ಳಿಪರದೆಗೆ ಕಿಚ್ಚುಹಚ್ಚುವ ಸೌಂದರ್ಯದ ಖನಿಗಳನ್ನು ಪಟ್ಟಿ ಮಾಡುವುದಾದರೆ ಅನೇಕಾನೇಕ ನಟಿಯರು ಕಣ್ಣಿಗೆ ಬೀಳುತ್ತಾರೆ. ಅವರನ್ನೆಲ್ಲಾ ಇಲ್ಲಿ ಪಟ್ಟಿ ಮಾಡುವುದು ದುಸ್ತರವಾಗಬಹುದು. ಹಾಗಾಗಿ ಅವರವರ ಗ್ಲಾಮರ್ ಅನ್ನು ಮಾನದಂಡವಾಗಿಟ್ಟುಕೊಂಡು ಆಯ್ದ 16 ತಾರಾಮಣಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಸ್ಯಾಂಡಲ್ ವುಡ್ ತಾರೆಯರನ್ನು ನಿರ್ದಿಷ್ಟವಾಗಿ ಪಟ್ಟಿಗೆ ಸೇರಿಸಿಕೊಂಡಿಲ್ಲ. ಆದರೆ ಇತರೆ ಭಾಷೆಗಳಲ್ಲೂ ಕಾಣಿಸಿಕೊಂಡಿರುವುದರಿಂದ ಕೆಲ ಕನ್ನಡದ ತಾರಾಮಣಿಗಳು ಇಲ್ಲಿ ಸ್ಥಾನ ಪಡೆದಿದ್ದಾರೆ. ಒಬ್ಬೊಬ್ಬರನ್ನಾಗಿ ಪರಿಚಯಿಸುವುದಾದರೆ ...

ಆಯಸ್ಕಾಂತೀಯ ಸೌಂದರ್ಯದ ಶ್ರಿಯಾ ಶರಣ್

ಆಯಸ್ಕಾಂತೀಯ ಸೌಂದರ್ಯದ ಶ್ರಿಯಾ ಶರಣ್

ಶ್ರಿಯಾ ಶರಣ್ ನಿಜಕ್ಕೂ ಆಯಸ್ಕಾಂತೀಯ ಸೌಂದರ್ಯದ ಬೆಡಗಿ. 2001ರಲ್ಲಿ ತೆಲುಗು ಚಿತ್ರ 'ಇಷ್ಟಂ' ಮೂಲಕ ಬೆಳ್ಳಿಪರದೆಗೆ ಅಪ್ಪಳಿಸಿದ ಸೌಂದರ್ಯ ದೇವತೆ. 2007ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಶಿವಾಜಿಯಲ್ಲಿ ಸೂಪರ್ ಆಗಿ ಮಿಂಚಿದ್ದರು. ದಶಕಕ್ಕು ಹೆಚ್ಚು ಕಾಲದಿಂದ ಚಿತ್ರರಸಿಕರ ಮನಸೂರೆಗೊಂಡಿದ್ದಾರೆ.

ಬ್ರಹ್ಮಾಂಡ ಸುಂದರಿ ನಮಿತಾ

ಬ್ರಹ್ಮಾಂಡ ಸುಂದರಿ ನಮಿತಾ

ನಮಿತಾ - ಬ್ರಹ್ಮಾಂಡ ಸುಂದರಿ. ಭಾರತ ಚಿತ್ರೋದ್ಯಮದ ಪಮೇಲಾ ಅಂಡರ್ ಸನ್. ಮೋಹಕ ಪಾತ್ರಗಳಲ್ಲಿ ಅಹಜ ಸುಂದರಿಯಾಗಿ ಅಭಿನಯಿಸುವ ನಮಿತಾ ಪಡ್ಡೆ ಹೈಕಳುಗಳಿಂದ ಹಿಡಿದು ಎಲ್ಲರಿಗೂ ಇಷ್ಟ ಇಷ್ಟ. 'ಸೋಂತಂ' ಚಿತ್ರದ ಮೂಲಕ ತೆಲುಗು ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ ನಮಿತಾ ನಂತರ ಹಿಂದಿರುಗಿ ನೋಡಿಲ್ಲ. ಅಷ್ಟು ಎತ್ತರಕ್ಕೆ ಅಗಾಧವಾಗಿ ಬೆಳೆದುಬಿಟ್ಟಿದ್ದಾರೆ- ಎಲ್ಲಾ ತನ್ನ ಅಭಿಮಾನಿಗಳಿಗಾಗಿ. ಮುಂದೆ 2006ರಲ್ಲಿ 'ಲವ್ ಕೆ ಚಕ್ಕರ್ ಮೆ' ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟರು.

ಚಿತ್ರ ರಸಿಕರ ನಯನ ತಾರೆ

ಚಿತ್ರ ರಸಿಕರ ನಯನ ತಾರೆ

ನಯನತಾರಾ: ಹೆಸರಿಗೆ ತಕ್ಕಂತೆ ಚಿತ್ರ ರಸಿಕರ ನಯನ ತಾರೆ. 2003ರಲ್ಲಿ 'ಮನಸ್ಸಿನಕ್ಕರೆ' ಮಲಯಳಾಂ ಚಿತ್ರದ ಮೂಲಕ ನಟನೆಗೆ ಇಳಿದರು. ಆನಂತರ ತಮಿಳು, ತೆಲುಗು ಚಿತ್ರಪ್ರೇಮಿಗಳ ಹೃದಯಕ್ಕೂ ಲಗ್ಗೆಯಿಟ್ಟರು. ಇಂದಿಗೂ ತಮ್ಮ ತಾರಾ ವರ್ಚಸ್ಸನ್ನು ಕಾಯ್ದುಕೊಂಡುಬಂದಿದ್ದಾರೆ.

ಕಾಜಲ್ ಅಗರವಾಲ್

ಕಾಜಲ್ ಅಗರವಾಲ್

ಕಾಜಲ್ ಅಗರವಾಲ್ ಬಾಲಿವುಡ್ ಮೂಲಕ ಎಂಟ್ರಿ ಕೊಟ್ಟವಳು. 2004ರಲ್ಲಿ 'ಕ್ಯೋ! ಹೋ ಗಯಾ ನಾ' ಕಾಜಲ್ ಅಗರವಾಲ್ ಚೊಚ್ಚಲ ಚಿತ್ರ. ಅದಾಗುತ್ತಿದ್ದಂತೆ ಲಕ್ಷ್ಮಿ ಕಲ್ಯಾಣಂ ಮೂಲಕ ತೆಲುಗು ಚಿತ್ರರಂಗಕ್ಕೆ ಜಂಪ್. ಮಗಧೀರ ಚಿತ್ರ ಸೂಪರ್ ಹಿಟ್ ಅಗುತ್ತಿದ್ದಂತೆ ಕಾಜಲ್ ಅಗರವಾಲ್ ಗ್ರಾಫ್ ಸಹ ಮೇಲೇರಿತು. ಮಧ್ಯೆ 'ಸಿಂಘಂ' ಮೂಲಕ ಮತ್ತೆ ಬಾಲಿವುಡ್ ನಲ್ಲಿ ಮಿಂಚಿದ ತಾರೆ.

ರಚ್ಚಾ ಬ್ಯೂಟಿ ತಮನ್ನಾ

ರಚ್ಚಾ ಬ್ಯೂಟಿ ತಮನ್ನಾ

ತಮನ್ನಾ ಭಾಟಿಯಾ ಬಾಲಿವುಡ್ ಮೂಲಕ ಬೆಳ್ಳಪರದೆಗೆ ಬಂದ ಬೆಡಗಿ. 'ಚಾಂದ್ ಸ ರೋಶನ್ ಚೆಹರಾ' ಚಿತ್ರದಲ್ಲಿದ್ದಂತೆ ನಿಜಕ್ಕೂ ಮಿಲ್ಕ್ ಬ್ಯೂಟಿ. ಅದಾಗುತ್ತಿದ್ದಂತೆ ಟಾಲಿವುಡ್ ಗೆ ಅರ್ಪಿಸಿಕೊಂಡ ಮಾದಕ ಚೆಲುವೆ. ರಚ್ಚಾ ಮೂಲಕ ಅಭಿಮಾನಿ ದೇವರುಗಳ ಹೃದಯ ಸಿಂಹಾಸನದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡ ನಟಿ.

ಸೆಕ್ಸಿ ತಾರೆ ಸಮಂತಾ

ಸೆಕ್ಸಿ ತಾರೆ ಸಮಂತಾ

ತಮಿಳು ಚಿತ್ರರಂಗದ ಸೆಕ್ಸಿ ತಾರೆ ಸಮಂತಾ. 2010ರಲ್ಲಿ ತೆಲುಗು ಚಿತ್ರ 'ಯೇಮಯ್ಯಾ ಚೇಸಾವ್?' ಭಾರಿ ಸಕ್ಸಸ್ ಕಂಡ ಸಮಂತಾ ಚಿತ್ರ. ಆನಂತರ ಬೃಂದಾವನಂ, ದೂಕುಡು, ಈಗ, ಯೆಟೋ ವೆಳ್ಳಿಪೋಯಿಂದಿ ಮನಸು, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮೂಲಕ ತೆಲುಗು ರಂಗದಲ್ಲಿ ಭದ್ರವಾಗಿ ತಳವೂರಿದ ಬೆಡಗಿ.

ಶಕ ಲಕ ಬೂಮ್ ಬೂಮ್ ಹಂಸಿಕಾ ಮೋಟ್ವಾನಿ

ಶಕ ಲಕ ಬೂಮ್ ಬೂಮ್ ಹಂಸಿಕಾ ಮೋಟ್ವಾನಿ

ಹಂಸಿಕಾ ಮೋಟ್ವಾನಿ- ಕೋಯಿ ಮಿಲ್ ಗಯಾ ಮೂಲಕ ದಕ್ಷಿಣಕ್ಕೆ ಹಾರಿ ಬಂದ ಸೆಕ್ಸ್ ಸಿಂಬಲ್. ಅಂದಹಾಗೆ 'ಶಕ ಲಕ ಬೂಮ್ ಬೂಮ್' ಟಿವಿ ಧಾರವಾಹಿ ಮೂಲಕ ಬಾಲ ಕಲಾವಿದೆಯಾಗಿ ತೆರೆಗೆ ಬಂದವಳು.

ಪ್ರವರ್ಧಮಾನಕ್ಕೆ ಬರುತ್ತಿರುವ ಭಾವನಾ

ಪ್ರವರ್ಧಮಾನಕ್ಕೆ ಬರುತ್ತಿರುವ ಭಾವನಾ

ಭಾವನಾ ಮೆನನ್ ಹದಿನಾರನೆ ವಯಸ್ಸಿಗೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಾರೆ. ಚೊಚ್ಚಲ ಚಿತ್ರ ನಮ್ಮಳ್ ಅಪಾರ ಮೆಚ್ಚುಗೆ ಗಳಿಸಿದ ಚಿತ್ರ. ಇದುವರೆಗೂ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಬುದ್ಧ ನಟಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾವನಾ ಕನ್ನಡ ಚಿತ್ರಗಳಲ್ಲೂ ಮಿಂಚುತ್ತಿದ್ದಾರೆ.

ಓ ತಮಿಳು ಅಮ್ಮಾಯಿ ಆಸಿನ್ ತುಕ್ರಾಲ್

ಓ ತಮಿಳು ಅಮ್ಮಾಯಿ ಆಸಿನ್ ತುಕ್ರಾಲ್

ಆಸಿನ್ ತುಕ್ರಾಲ್ ದಕ್ಷಿಣದ ಬೆಡಗಿ. ದಕ್ಷಿಣ ಚಿತ್ರರಂಗದ ಬೆಳ್ಳಿಪರದೆಯನ್ನಾಳಿದ ಮೇಲೆ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾಳೆ. 2003ರಲ್ಲಿ ಅಮ್ಮ ನಾನ್ನ ಓ ತಮಿಳು ಅಮ್ಮಾಯಿ ಮೊದಲ ಯಶಸ್ವಿ ಚಿತ್ರ.

ಮಾದಕ ನಟಿ ಅನುಷ್ಕಾ ಶೆಟ್ಟಿ

ಮಾದಕ ನಟಿ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗವನ್ನಾಳುತ್ತಿರುವ ಮಾದಕ ನಟಿ. ತಮಿಳು ಚಿತ್ರರಂಗದಲ್ಲು ಮಿಂಚುತ್ತಿರುವ ಮಂಗಳೂರು ಮೂಲದ ನಟಿ. ಪ್ರಸ್ತುತ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿ.

ಪ್ರಿಯಾಮಣಿ ಚಿತ್ರರಸಿಕರ ಕಣ್ಮಣಿ.

ಪ್ರಿಯಾಮಣಿ ಚಿತ್ರರಸಿಕರ ಕಣ್ಮಣಿ.

ಪ್ರಿಯಾಮಣಿ ಚಿತ್ರರಸಿಕರ ಕಣ್ಮಣಿ. ಕನ್ನಡ ಚಿತ್ರಗಳಲ್ಲೂ ನಟಿಸಿದಾಕೆ. ಪಡ್ಡೆ ಹುಡುಗರಿಗಂತೂ ಅತ್ಯಾಪ್ತೆ.

ಝುಮ್ಮಂದಿ ತಾಪಸಿ ಪನ್ನು

ಝುಮ್ಮಂದಿ ತಾಪಸಿ ಪನ್ನು

ತಾಪಸಿ ಪನ್ನು- ಸುಪ್ರಸಿದ್ಧ ನಿರ್ದೇಶಕ ರಾಘವೇಂದ್ರ ರಾವ್ ಅವರ 'ಝುಮ್ಮಂದಿ ನಾದಂ' ಚಿತ್ರದಲ್ಲಿ 201ರಲ್ಲಿ ಜುಮ್ಮಂತ ಮಿಂಚಿದವಳು. ಛಷ್ಮೆ ಬದ್ದೂರ್ ಮೂಲಕ ಇತ್ತೀಚೆಗೆ ಬಾಲಿವುಡ್ ಗೂ ಹಾರಿದ್ದಾಳೆ.

ಊಸರವಳ್ಳಿ ಬಣ್ಣದ ಚಿಟ್ಟೆ ಪಾಯಲ್ ಘೋಷ್

ಊಸರವಳ್ಳಿ ಬಣ್ಣದ ಚಿಟ್ಟೆ ಪಾಯಲ್ ಘೋಷ್

ಪಾಯಲ್ ಘೋಷ್ ತೆಲುಗು ಚಿತ್ರರಂಗದ ಮೂಲಕ ತೆರೆಗೆ ಅರ್ಪಣೆ. ಜೂನಿಯರ್ ಎನ್ ಟಿಆರ್ ಜತೆ 'ಊಸರವಳ್ಳಿ'ದಲ್ಲಿ ತನ್ನ ಬೆಡಗುಬಿನ್ನಾಣವನ್ನು ಢಾಳಾಗಿ ಪ್ರದರ್ಶಿಸಿದ ಚೆಲುವೆ. ಕನ್ನಡದಲ್ಲೂ 'ವರ್ಷಧಾರೆ' ತನ್ನ ಸೊಬಗನ್ನು ಧಾರೆಯೆರೆದಿದ್ದಾಳೆ.

ಹಾಟ್ ತಾರೆ ಚಾರು ಅರೋರಾ

ಹಾಟ್ ತಾರೆ ಚಾರು ಅರೋರಾ

ಚಾರು ಅರೋರಾ ದಕ್ಷಿಣ ಭಾರತ ಸಿನಿರಂಗದ ಹಾಟ್ ತಾರೆ.

ಚಂದ್ರಚಕೋರಿ ರಚನಾ ಮೌರ್ಯ

ಚಂದ್ರಚಕೋರಿ ರಚನಾ ಮೌರ್ಯ

ರಚನಾ ಮೌರ್ಯ ಐಟಂ ಸಾಂಗ್ ಮೂಲಕ ಮಿಂಚುತ್ತಿದ್ದು ಅನೇಕ ಭಾಷೆಗಳ ಚಿತ್ರಗಳಲ್ಲಿ ಈಗಾಗಲೇ ಮಿಂಚಿದ್ದಾಳೆ. ಮ್ಯೂಸಿಕ್ ಆಲ್ಬಂಗಳಲ್ಲೂ ರಾರಾಜಿಸುತ್ತಿರುವ ಚಂದ್ರಚಕೋರಿ.

English summary
Top 16 South Indian wild actresses whom men love. South-Indian film industry is believed to be much more advanced than Bollywood, be it in terms of production or screenplay. We bring you few of the hottest south-indian actresses who have left benchmarks and have added glamour to the screen!

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more