Yash19: ಕೈಮೇಲೆ ವಿಚಿತ್ರ ಟ್ಯಾಟೂ.. ಯಶ್19 ಘೋಷಣೆಗೂ ಮೊದ್ಲೆ ವಿಲನ್, ಹಿರೋಯಿನ್ ಸಿಕ್ಬಿಟ್ರು?

ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋದು ಇನ್ನು ಘೋಷಣೆ ಆಗಿಲ್ಲ. "ನಾನು ಹೇಳುವವರೆಗೂ ನನ್ನ ಮುಂದಿನ ಸಿನಿಮಾ ಕುರಿತು ಯಾವುದೇ ಸುದ್ದಿಯನ್ನು ನಂಬಬೇಡಿ" ಎಂದು ಯಶ್ ಈಗಾಗಲೇ ಹೇಳಿದ್ದಾರೆ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಯಶ್19 ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡ್ತಿದೆ.

60ರ ದಶಕದ ಗೋವಾ ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಕತೆಯಲ್ಲಿ ಯಶ್ ನಟಿಸ್ತಾರಂತೆ ಎನ್ನುವ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದೀಗ ಸಿನಿಮಾ ನಾಯಕಿ, ವಿಲನ್ ಯಾರು ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಯಶ್ ತೆರೆ ಮರೆಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಯಶ್ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ. ಆ ಫೋಟೊಗಳನ್ನು ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ. ಯಶ್‌19 ಅಪ್‌ಡೇಟ್ ಕೊಡದೇ ರಾಕಿಂಗ್‌ ಸ್ಟಾರ್ ಕಡಲ ತೀರದಲ್ಲಿ ಏನು ಮಾಡುತ್ತಿದ್ದಾರೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ.

Tovino Thomas in talks to do villain role in Yash19? Yashs Tattoo viral

ಯಶ್‌19 ಸಿನಿಮಾ ನಿರ್ಮಾಪಕರು ಯಾರು? ನಿರ್ದೇಶಕರು ಯಾರು? ಕತೆ ಏನು? ಎನ್ನುವ ಚರ್ಚೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೀತಿದೆ. KGF-2 ಬಿಡುಗಡೆಗೂ ಮೊದ್ಲೆ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಯಿತು. ಅದಾಗಲೇ ಶುರುವಾಗಿದ್ದ 'ಮೈ ನೇಮ್‌ ಕಿರಾತಕ' ನಿಂತಮೇಲೆ ಯಶ್ ಮುಂದೇನು ಮಾಡುತ್ತಾರೆ ಎನ್ನುವ ಪ್ರಶ್ನೆ ಉದ್ಭವಾಯಿತು. KGF-2 ಬಳಿಕ ಉತ್ತರ ಸಿಗುತ್ತದೆ ಎಂದುಕೊಂಡವರು ಇನ್ನು ನಿರಾಸೆಯಿಂದ ಇದ್ದಾರೆ.

ಹೌದು KGF-2 ರಿಲೀಸ್ ಆಗಿ ಒಂದೂವರೆ ವರ್ಷ ಕಳೀತು. ಆದರೆ ಇನ್ನು ಯಶ್‌19 ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೊದಲಿಗೆ ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಎನ್ನಲಾಯಿತು. ಆ ಸುದ್ದಿ ತಣ್ಣಗಾಗುತ್ತಿದ್ದಂತೆ ಕೆವಿಎನ್ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣ ಎನ್ನುವ ಗುಸುಗುಸು ಶುರುವಾಯಿತು. ಬಳಿಕ ಯಶ್‌19 ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಊಹಾಪೋಹ ಆರಂಭವಾಯಿತು. ಇದೆಲ್ಲದರ ನಡುವೆ ಬಾಲಿವುಡ್ ಸಿನಿಮಾಗಳ ಹೆಸರುಗಳು ಕೇಳಿಬಂತು. ಆದರೆ ಯಾವುದು ಅಧಿಕೃತವಾಗಲಿಲ್ಲ.

ಕಳೆದೊಂದು ವಾರದಿಂದ ಯಶ್‌19 ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಲತಾ ಮೆನನ್ ಸಾರಥ್ಯ ವಹಿಸುತ್ತಾರೆ ಎನ್ನುವ ಗುಸು ಗುಸು ಶುರುವಾಗಿದೆ. 60ರ ದಶಕದಲ್ಲಿ ನಡೆದ ಗೋವಾ ಡ್ರಗ್ಸ್ ಮಾಫಿಯಾ ಸುತ್ತ ಸಿನಿಮಾ ಕಥೆ ಸುತ್ತುತ್ತದೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಯಾವುದೇ ಸಿನಿಮಾ ಬಂದಿಲ್ಲ. KGF ಸರಣಿಯಲ್ಲೂ 60,70ರ ದಶಕದ ಕತೆ ಇತ್ತು. ಅಂತದ್ದೇ ಕತೆ ಇರುತ್ತದೆ ಎನ್ನಲಾಗ್ತಿದೆ.

ಇನ್ನು ಯಶ್‌19 ಚಿತ್ರಕ್ಕೆ ಗೀತು ಮೋಹನ್‌ ದಾಸ್ ಆಕ್ಷನ್ ಕಟ್ ಹೇಳೋದು ಪಕ್ಕಾ ಎನ್ನುವ ವದಂತಿ ಹಬ್ಬಿದೆ. ಈ ಚಿತ್ರದಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Tovino Thomas in talks to do villain role in Yash19? Yashs Tattoo viral

ಯಶ್ ಸದ್ಯ ಯಶ್ ಗೋವಾದಲ್ಲಿ ಬೀಡುಬಿಟ್ಟಿದ್ದು ರಾಧಿಕಾ ಪಂಡಿತ್ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೊದಲ್ಲಿ ಯಶ್ ಕೈಯಲ್ಲಿರುವ ಟ್ಯಾಟೂ ಗಮನ ಸೆಳೆಯುತ್ತಿದೆ. ಏನಿದು ಟ್ಯಾಟೂ? ಇದು ಪರ್ಫನೆಂಟ್ ಟ್ಯಾಟೂನಾ? ಟೆಂಪ್ರವರಿ ಟ್ಯಾಟೂನಾ? ಈ ಟ್ಯೂಟೂಗೂ ಯಶ್‌19 ಚಿತ್ರಕ್ಕೂ ಏನಾದರೂ ಲಿಂಕ್ ಇದ್ಯಾ? ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಡ್ರಗ್ ಮಾಫಿಯಾ ಕತೆಯ ಸಿನಿಮಾ ಆಗಿರುವುದರಿಂದ ಯಶ್ ಈ ರೀತಿ ಟ್ಯಾಟೂ ಹಾಕಿಕೊಂಡಿದ್ದಾರಾ? ಫೋಟೊಶೂಟ್ ಏನಾದರೂ ನಡೀತಾ? ಹೀಗೆ ಅಭಿಮಾನಿಗಳು ಯೋಚಿಸಿ ತಲೆ ಕಡೆಸಿಕೊಳ್ಳುತ್ತಿದ್ದಾರೆ.

More from Filmibeat

English summary
Tovino Thomas will Play Antagonist Role In Geethu Mohandas directional Yash19
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X