ಅಂದು ನಾಯಕ-ನಾಯಕಿ, ಈಗ ದುಷ್ಮನ್; ಪ್ರಭಾಸ್ ಎದುರು ಆ ನಟಿಯೇ ವಿಲನ್?

ತೆಲುಗು ನಟ ಪ್ರಭಾಸ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರ ಕೂಡ ಹೊಸದೊಂದು ಸಿನಿಮಾ ಆರಂಭಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ 'ಸಲಾರ್' ಆಗಿ ಅಬ್ಬರಿಸಿದ ಯಂಗ್ ರೆಬಲ್ ಸ್ಟಾರ್ ಈ ವರ್ಷ 'ಕಲ್ಕಿ'ಯಾಗಿ ಬಾಕ್ಸಾಫೀಸ್ ಶೇಕ್ ಮಾಡಿದ್ದರು.

ಪ್ರಭಾಸ್ ಮುಂದಿನ ಸಿನಿಮಾ ಲೈನಪ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಸದ್ಯ 'ದಿ ರಾಜಾಸಾಬ್' ಎನ್ನುವ ರೊಮ್ಯಾಂಟಿಕ್ ಹಾರರ್ ಚಿತ್ರದಲ್ಲಿ ನಟಿಸ್ತಿದ್ದಾರೆ. ಇನ್ನು ಹನು ರಾಘವಪುಡಿ ಜೊತೆ ಹೊಸದೊಂದು ಸಿನಿಮಾ ಶುರುವಾಗಿದೆ. ಸೂಪರ್ ಹಿಟ್ 'ಸಲಾರ್' ಹಾಗೂ 'ಕಲ್ಕಿ 2898AD' ಸೀಕ್ವೆಲ್‌ಗಳು ಫಿಕ್ಸ್ ಆಗಿದೆ. ಈ ಎರಡು ಸಿನಿಮಾಗಳಿಗೆ ಮುನ್ನ ಪ್ರಭಾಸ್ ಮತ್ತೆರಡು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

Trisha Joins Spirit Co-starring Prabhas Directed by Sandeep Reddy Vanga

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. 3 ಸಿನಿಮಾಗಳು ಸೋಲಿನ ಬಳಿಕ 'ಸಲಾರ್' ಆಗಿ ಗೆದ್ದಿದ್ದರು. ಬಳಿಕ ಬಂದ 'ಕಲ್ಕಿ 2898AD' ಕೂಡ ಗೆದ್ದು 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಇದೇ ಸಕ್ಸಸ್ ಅಲೆಯಲ್ಲಿ ಬಿಡುವಿಲ್ಲದೇ ಹೊಸ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಟೀಸರ್ ಬಂದಿತ್ತು. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನು ಹನು ರಾಘವಪುಡಿ ನಿರ್ದೇಶನದ ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ಕಾರಣ ನಿರ್ದೇಶಕರು ಹಿಂದೆ 'ಸೀತಾರಾಮಂ' ರೀತಿಯ ಸೆನ್ಸೇಷನಲ್ ಸಿನಿಮಾ ಕೊಟ್ಟಿದ್ದರು. ಇನ್ನು ಬಹಳ ದಿನಗಳಿಂದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಾರೆ ಎನ್ನಲಾಗ್ತಿದೆ.

ಸ್ವತಃ 'ಅನಿಮಲ್' ಸಿನಿಮಾ ನಿರ್ದೇಶಕ ಸಂದೀಪ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನ ಮುಂದಿನ ಸಿನಿಮಾ 'ಸ್ಪಿರಿಟ್'. ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಚಿತ್ರದ ಹೀರೊ. ಅವರೊಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ಸಿನಿಮಾ ಆರಂಭ ಎಂದಿದ್ದರು. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅವರನ್ನು ತೋರಿಸುತ್ತೇನೆ ಎಂದು ತಿಳಿಸಿದ್ದಾರೆ.

Trisha Joins Spirit Co-starring Prabhas Directed by Sandeep Reddy Vanga

'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಎದುರು ತಮಿಳು ನಟಿ ತ್ರಿಶಾ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ದಶಕಗಳ ಹಿಂದೆಯೇ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಜೋಡಿಯ 'ವರ್ಷಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇಬ್ಬರೂ ಮತ್ತೆ ನಟಿಸುವುದರಲ್ಲಿ ವಿಶೇಷ ಏನು ಇಲ್ಲ. ಆದರೆ ಚಿತ್ರದಲ್ಲಿ ತ್ರಿಶಾ ವಿಲನ್ ಆಗಿ ನಟಿಸುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ತಂದಿದೆ.

'ಅರ್ಜುನ್ ರೆಡ್ಡಿ', 'ಅನಿಮಲ್' ರೀತಿಯ ವಿಭಿನ್ನ ಸಿನಿಮಾ ಸಂದೀಪ್ ರೆಡ್ಡಿ ವಂಗಾ ಕೊಟ್ಟಿದ್ದಾರೆ. ಅವರ ಸಿನಿಮಾಗಳನ್ನು ಪಾತ್ರಗಳ ಪೋಷಣೆ ಹೇಗಿರುತ್ತದೆ ಎಂದು ಗೊತ್ತೇಯಿದೆ. ಹಾಗಾಗಿ ಪ್ರಭಾಸ್ ಎದುರು ತ್ರಿಶಾ ವಿಲನ್ ಆಗಿ ನಿಂತರೆ ಹೇಗಿರುತ್ತದೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಆದರೆ ತ್ರಿಶಾ ಈ ಚಿತ್ರದಲ್ಲಿ ನಟಿಸೋ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಕೆಲ ವರದಿಗಳ ಪ್ರಕಾರ ಆಕೆ ನಾಯಕಿಯಾಗಿಯೇ ನಟಿಸ್ತಾರೆ ಎನ್ನಲಾಗ್ತಿದೆ.

ಹನು ರಾಘವಪುಡಿ ಸಿನಿಮಾ ಬಳಿಕ ಪ್ರಭಾಸ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಕಾದು ನೋಡಬೇಕಿದೆ. ಅಭಿಮಾನಿಗಳು ಆದಷ್ಟು ಬೇಗ 'ಸಲಾರ್-2' ಹಾಗೂ 'ಕಲ್ಕಿ-2' ಸಿನಿಮಾಗಳನ್ನು ಮಾಡಿ ಎಂದು ಪಟ್ಟುಹಿಡಿದಿದ್ದಾರೆ. ಅದೆರಡು ಬಿಟ್ಟು ಸಂದೀಪ್ ರೆಡ್ಡಿ ನಿರ್ದೇಶನದ 'ಸ್ಪಿರಿಟ್' ಸಿನಿಮಾ ಒಪ್ಪಿಕೊಳ್ತಾರಾ? ಕಾದು ನೋಡಬೇಕಿದೆ.

More from Filmibeat

English summary
This actress to play antagonist in Prabhas Starrer Spirit
Read more about: gossip prabhas trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X