ಚೆನ್ನೈ ಸೂಪರ್ ಕಿಂಗ್ಸ್ ಒಡತಿಯಾಗುತ್ತಿದ್ದಾರೆ ತ್ರಿಷಾ
ಇತ್ತೀಚೆಗಷ್ಟೇ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬಾಳಿನ ಹೊಸಲಲಿ ನಿಂತಿರುವ ತ್ರಿಷಾ ಕೃಷ್ಣನ್ ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ತ್ರಿಷಾ ಅವರ ಭಾವಿ ಪತಿ ವರುಣ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಖರೀದಿಸಲು ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.
ಒಂದು ವೇಳೆ ಇದೇ ನಿಜವಾದರೆ ವರುಣ್ ಅವರನ್ನು ಮದುವೆಯಾಗುತ್ತಿರುವ ತ್ರಿಷಾ ಅವರು ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಡತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತ್ರಿಷಾ ಕೃಷ್ಣನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ರಾಯಭಾರಿಯಾಗಿ ಕ್ರಿಕೆಟ್ ಫೀಲ್ಡಿಗಿಳಿದಿರುವುದು ಗೊತ್ತೇ ಇದೆ. [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]
ಈಗಾಗಲೆ ಕ್ರಿಕೆಟ್ ತಂಡಗಳ ಒಡತಿಯರಾಗಿ ಶಿಲ್ಪಾ ಶೆಟ್ಟಿ (ರಾಜಸ್ತಾನ್ ರಾಯಲ್ಸ್ ಸಹ ಒಡತಿ), ಪ್ರೀತಿ ಜಿಂಟಾ (ಕಿಂಗ್ಸ್ ಇಲೆವೆನ್ ಪಂಜಾಬ್) ಮಿಂಚುತ್ತಿದ್ದಾರೆ. ಈ ಪಟ್ಟಿಗೆ ತ್ರಿಷಾ ಕೃಷ್ಣನ್ ಅವರು ಸೇರುವ ದಿನಗಳು ದೂರದಲ್ಲಿಲ್ಲ ಎನ್ನುತ್ತವೆ ಮೂಲಗಳು. ಈ ಮೂಲಕ ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾಗುತ್ತಿದೆ ಈ ಜೋಡಿ.

ಜನವರಿ 23ರಂದು ನಿಶ್ಚಿತಾರ್ಥ ಮುಗಿಸಿಕೊಂಡಿರುವ ತ್ರಿಷಾ ಹಾಗೂ ವರುಣ್ ಅವರ ಮದುವೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ. ಬಹುಶಃ ಈ ವರ್ಷಾಂತ್ಯಕ್ಕೆ ತ್ರಿಷಾ ಸಪ್ತಪದಿ ತುಳಿಯುವ ಸಾಧ್ಯತೆಗಳಿವೆ. ತಮ್ಮ ಭಾವಿ ಪತ್ನಿಗೆ ವರುಣ್ ಅವರು ಪ್ರೇಮದ ಕಾಣಿಕೆ ಕೊಟ್ಟಿದ್ದನ್ನು ಓದಿಯೇ ಇರುತ್ತೀರಾ.
ತ್ರಿಷಾ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಮೋಹ ಇದೆ. ಮೊದಲೇ ಮೋಹಕ ತಾರೆ, ಇನ್ನು ಕ್ರಿಕೆಟ್ ತಂಡದ ಒಡತಿಯಾದರೆ ಆ ತಂಡಕ್ಕೆ ಇನ್ನಷ್ಟು ಬಲಬರುವುದಂತೂ ಗ್ಯಾರಂಟಿ. ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ನ ಒಡೆತನದಲ್ಲಿದೆ. [ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ಚಿತ್ರಸಂಪುಟ]
ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ತಂಡಗಳ ಬಳಿಕ ಐಪಿಎಲ್ ನ ಬಲು ದುಬಾರಿ ತಂಡ ಚೆನ್ನೈ ಸೂಪರ್ ಕಿಂಗ್ಸ್. 2012ರ ಪ್ರಕಾರ ಈ ಬ್ರ್ಯಾಂಡ್ ನ ಒಟ್ಟಾರೆ ಮೌಲ್ಯ 75.13 ದಶಲಕ್ಷ ಡಾಲರ್.


Click it and Unblock the Notifications











