For Quick Alerts
  ALLOW NOTIFICATIONS  
  For Daily Alerts

  ಹಿಟ್ ನಿರ್ದೇಶಕ ಕೊಟ್ಟ ಆಫರ್ ತಿರಸ್ಕರಿಸಿದ ನಟಿ ತ್ರಿಶಾ

  |

  ಒಂದು ಕಾಲದ ಸೂಪರ್ ಹಿಟ್ ನಾಯಕಿ ತ್ರಿಶಾ ಈಗ ಅವಕಾಶಗಳು ಕಡಿಮೆಯಾಗಿ ನಿಧಾನಕ್ಕೆ ತೆರೆ ಮರೆಗೆ ಸರಿಯುತ್ತಿದ್ದಾರೆ.

  ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿರುವ ತ್ರಿಶಾ ಇನ್ನೇನು ನಟನಾ ವೃತ್ತಿಯ ಇಳಿಸಂಜೆಯಲ್ಲಿದ್ದಾರೆ. ಸಾಮಾನ್ಯವಾಗಿ ನಟಿಯರಿಗೆ ಅವಕಾಶ ಕಡಿಮೆ ಆಗುತ್ತಾ ಬರುತ್ತಿದ್ದಂತೆ ಅವರಿಗೆ 'ಮಹಿಳಾ ಪ್ರಧಾನ' ಸಿನಿಮಾದ ಅವಕಾಶಗಳು ಅರಸಿ ಬರುತ್ತವೆ. ಅಂತೆಯೇ ತ್ರಿಶಾಗೂ ಈ ರೀತಿಯ ಅವಕಾಶ ಬಂದಿದೆ.

  ತೆಲುಗಿನ ಹಿಟ್ ನಿರ್ದೇಶಕರೊಬ್ಬರು ತ್ರಿಶಾಗಾಗಿ ಭಿನ್ನವಾಗಿ ಸಸ್ಪೆನ್ಸ್ ಹಾಗೂ ಸಂದೇಶವುಳ್ಳ ಮಹಿಳಾ ಪ್ರಧಾನ ಸಿನಿಮಾದ ಕತೆಯನ್ನು ತಂದಿದ್ದರು. ಆದರೆ ತ್ರಿಶಾ ಆ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

  ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಬಲ್ಲೆನು, ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವುದು ನಾಯಕಿ ಪಾತ್ರದಿಂದ ದೂರಾದಂತೆಯೇ ಹಾಗಾಗಿ ಈಗಲೇ ನಾನು ಅಂಥಹಾ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ ತ್ರಿಶಾ. ಆ ಸಿನಿಮಾದಲ್ಲಿ ತ್ರಿಶಾಗೆ ಹಿರಿಯ ಮಹಿಳೆಯ ಪಾತ್ರ ನೀಡಲಾಗಿತ್ತು ಹಾಗಾಗಿ ಅವರು ಒಪ್ಪಿಕೊಳ್ಳಲಿಲ್ಲ ಎಂಬ ಮಾತುಗಳೂ ಸಹ ಹರಿದಾಡುತ್ತಿವೆ.

  ತ್ರಿಶಾಗೆ ಕತೆ ಹೇಳಿರುವುದು ತೆಲುಗಿನ ಹಿಟ್ ನಿರ್ದೇಶಕ ಅನಿಲ್ ರವಿಪುಡಿ. ತೆಲುಗಿನಲ್ಲಿ ಕೆಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ರವಿ, ಚಿತ್ರಕತೆ ಬರಹಗಾರರಾಗಿಯೂ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು', ವೆಂಕಟೇಶ್, ವರುಣ್ ತೇಜ್ ನಟನೆಯ 'ಎಫ್‌ 2', ರವಿತೇಜ ನಟನೆಯ 'ರಾಜಾ' ಸಿನಿಮಾಗಳನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ.

  ಇನ್ನು ನಟಿ ತ್ರಿಶಾ ಪ್ರಸ್ತುತ ಮಣಿರತ್ನಂ ನಿರ್ದೇಶಿಸುತ್ತಿರುವ 'ಪೊನ್ನಿಯನ್ ಸೆಲ್ವಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತಾಗಿ 'ಚದುರಂಗ ವೇಟೈ', 'ದೃಶ್ಯಂ' ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ 'ರಾಮ್', 'ರಾಂಗಿ', 'ಗರ್ಜನೈ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Trisha rejected Anil Ravipudi's lady oriented movie. She is now busy in Tamil movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X