Kavitha: ರಜನಿಕಾಂತ್ ಜೊತೆಗೆ ನನ್ನ ರಹಸ್ಯ ಮದುವೆ..! ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಸುದ್ದಿ ಬಗ್ಗೆ ನಟಿ ಕವಿತಾ ಹೇಳಿದ್ದೇನು?
ಕೆಲವು ದಿನಗಳಿಂದ ತಮಿಳು ಚಿತ್ರರಂಗವನ್ನು ಬೆಚ್ಚಿಬೀಳಿಸಿರುವ ಸುದ್ದಿ ಎಂದರೆ ಅದು ತಲೈವ ರಜನಿಕಾಂತ್ ಮತ್ತು ಹಿರಿಯ ನಟಿ ಕವಿತಾ ಅವರ ರಹಸ್ಯ ಮದುವೆ ವದಂತಿ. ರಜನಿಕಾಂತ್ ಮತ್ತು ಕವಿತಾ ಅವರ ಅಭಿಮಾನಿಗಳು ಈ ವದಂತಿ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಇದಕ್ಕೆ ನಟಿ ಕವಿತಾ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
11ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ನಟಿ ಕವಿತಾ ತಮಿಳಿನಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತೆಲುಗಿನಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಟಾಲಿವುಡ್‌ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

'ಓ ಮಂಜು' ಚಿತ್ರದ ಮೂಲಕ ನಟಿ ಕವಿತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಜನಿಕಾಂತ್, ಕಮಲ್ ಹಾಸನ್, ಸತ್ಯರಾಜ್ ಮುಂತಾದ ಖ್ಯಾತ ನಾಯಕ ನಟರೊಂದಿಗೆ ನಟಿಸಿದ್ದಾರೆ. ನಟಿ ಕವಿತಾ ಅವರು ವಿಜಯ್ ಅವರ ಮೊದಲ ಚಿತ್ರ ಕಾಮ ಗದರಿ ಮತ್ತು ಅಜಿತ್ ಅವರ ಮೊದಲ ಚಿತ್ರ ಅಮರಾವತಿ ಸೇರಿದಂತೆ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಟಿ ಕವಿತಾ ಮತ್ತು ರಜನಿಕಾಂತ್ ಮದುವೆ ವದಂತಿ
ಈ ಹಿಂದೆ 'ನಟಿ ಕವಿತಾ ಅವರು ನಟ ರಜನಿಕಾಂತ್ ಜೊತೆ ಸಿನಿಮಾದಲ್ಲಿ ನಟಿಸುತ್ತಲೇ ಗುಟ್ಟಾಗಿ ಮದುವೆಯಾಗಿದ್ದಾರೆ' ಎಂಬ ಸುದ್ದಿ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ವೇಳೆ ನಟಿ ಕವಿತಾ ಅವರು ನಟ ಮೋಹನ್ ಬಾಬು ಜೊತೆ ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು.. ತಕ್ಷಣ ಅದನ್ನು ಮೋಹನ್ ಬಾಬು ಜೊತೆ ಹಂಚಿಕೊಂಡಿದ್ದಾರೆ.
"ರಜನಿಕಾಂತ್ ಜತೆ ಹಲವು ಚಿತ್ರಗಳಲ್ಲಿ ನಟಿಸಿದ್ದರಿಂದ ರಜನಿ ಮತ್ತು ನಾನು ರಹಸ್ಯ ವಿವಾಹ ಮಾಡಿಕೊಂಡಿದ್ದೇವೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಆಗ ಮೋಹನ್ ಬಾಬು ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದೆ. ಮೇಕಪ್ ಮ್ಯಾನ್ ನಮಗೆ ಪತ್ರಿಕೆಯ ವರದಿಯನ್ನು ತೋರಿಸಿದರು. ಆಗ ನಾನು ಉದಯೋನ್ಮುಖ ನಟಿಯಾಗಿದ್ದರಿಂದ ಮೋಹನ್ ಬಾಬು ತುಂಬಾ ನೊಂದುಕೊಂಡಿದ್ದರು" ಎಂದು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಪತ್ರಿಕಾ ಕಚೇರಿಗೆ ಹೋಗಿ ಜಗಳವಾಡಿದ್ದ ಚಿತ್ರತಂಡ!
ಈ ಸುದ್ದಿ ಕವಿತಾ ಅವರ ವೃತ್ತಿಜೀವನಕ್ಕೆ ಅಡ್ಡಿಯಾಗುತ್ತದೆ ಎಂದು ಭಾವಿಸಿದ ನಟ ಮೋಹನ್ ಬಾಬು ಅವರು ತಕ್ಷಣ ಶೂಟಿಂಗ್ ನಿಲ್ಲಿಸುವಂತೆ ಕೇಳಿಕೊಂಡರು. ನಂತರ, ನಟಿ ಕವಿತಾ ಅವರನ್ನು ಸಂಬಂಧಿಸಿದ ಪತ್ರಿಕಾ ಕಚೇರಿಗೆ ಕರೆದೊಯ್ದು ಈ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ಅಲ್ಲಿ ಜಗಳ ಮಾಡಿದ್ದರು. ಈ ಸುದ್ದಿಗೆ ಕ್ಷಮೆ ಪ್ರಕಟಿಸುವುದಾಗಿ ಪತ್ರಿಕೆ ಹೇಳಿದ ಬಳಿಕವಷ್ಟೇ ಮೋಹನ್‌ಬಾಬು ಒಪ್ಪಿಕೊಂಡರು ಎಂದು ನಟಿ ಮಾಹಿತಿ ನೀಡಿದ್ದಾರೆ.
ಆದರೆ, ನಾವೆಲ್ಲ ನೇರವಾಗಿ ಪತ್ರಿಕಾ ಕಚೇರಿಗೆ ತೆರಳಿ ವಾದಕ್ಕಿಳಿದು ಫೇಕ್ ನ್ಯೂಸ್ ಯಾಕೆ ಹಾಕುತ್ತಿದ್ದೀರಿ ಎಂದು ವಾದಿಸಿದಾಗ ಪತ್ರಿಕೆಗಳು ತಪ್ಪನ್ನು ಒಪ್ಪಿಕೊಂಡವು. ಅಷ್ಟೊತ್ತಿಗಾಗಲೇ ಈ ಸುದ್ದಿ ಕಾಳ್ಗಿಚ್ಚಿನಂತೆ ನಮ್ಮ ಮನೆಗೆ ಹಬ್ಬಿತ್ತು, ಮನೆಯಿಂದ ಫೋನ್ ಮಾಡಿ ವಿಚಾರಿಸಲು ಶುರುಮಾಡಿದ್ದರು ಎಂದು ತಾವು ಅನುಭವಿಸಿದ್ದ ಕಷ್ಟವನ್ನು ವಿವರಿಸಿದ್ದಾರೆ.
ಈಗ ಈ ಸುದ್ದಿ ವೈರಲ್ ಅಗಲು ಕಾರಣವೇನು?
ಹಳೆಯ ಈ ಸುದ್ದಿ ದಿಢೀರನೆ ಹರಡಿದ್ದು ಹೇಗೆ? ಎಂದು ನಟಿ ಮಾತನಾಡಿದ್ದಾರೆ. ನಟಿ ಕವಿತಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾಗ, 'ನಟ ರಜನಿಕಾಂತ್ ಹಾಗೂ ತಮ್ಮ ಬಗ್ಗೆ ಸಾಕಷ್ಟು ಗಾಸಿಪ್ ಹರಿದಾಡಿತ್ತು, ಜೊತೆಗೆ ನಾವು ಗುಟ್ಟಾಗಿ ಮದುವೆಯಾಗಿದ್ದೇವೆ ಎಂಬ ಗಾಸಿಪ್ ಕೂಡ ಹರಿದಾಡಿತ್ತು' ಎಂದು ಮುಕ್ತವಾಗಿ ಮಾತನಾಡಿದ್ದರು. ಇದು ಮರುದಿನ ಮಾಧ್ಯಮಗಳಲ್ಲಿ 'ರಜನಿಕಾಂತ್ ಮತ್ತು ಕವಿತಾ ರಹಸ್ಯವಾಗಿ ಮದುವೆಯಾಗಿದ್ದಾರೆ' ಎಂದು ಪ್ರಕಟವಾಗಿತ್ತು. ಸುಳ್ಳು ಸುದ್ದಿ ಎಂದು ಹೇಳಿದ್ದ ಹೇಳಿಕೆಯನ್ನು ಮತ್ತೆ ಅಧಿಕೃತ ಎಂದು ಹಲವು ಮಾಧ್ಯಮಗಳು ಪ್ರಕಟಿಸಿದ್ದವು.


Click it and Unblock the Notifications











