ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..?

Recommended Video

ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿ ಬಂದ ಈ ಎರಡು ಸುದ್ದಿಗಳು ನಿಜಾನಾ? | FILMIBEAT KANNADA

ರಶ್ಮಿಕಾ ಮಂದಣ್ಣ ಕನ್ನಡ ಹಾಗೂ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಮಾಡಿದ ಕೆಲವೇ ಚಿತ್ರಗಳ ಮೂಲಕ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ಮನಸ್ಸು ಕದ್ದಿದ್ದಾರೆ.

ತಮ್ಮ ನಿಶ್ಚಿತಾರ್ಥ ಬ್ರೇಕ್ ಅಪ್ ಬಳಿಕ ರಶ್ಮಿಕಾ ಸ್ವಲ್ಪ ಡಲ್ ಆಗಿದ್ದಾರೆ ಎಂಬ ಮಾತಿದೆ. ಹಾಗಾಗಿ, ಕನ್ನಡದಲ್ಲಿ ಸಿನಿಮಾಗಳನ್ನ ಕೂಡ ಮಾಡ್ತಿಲ್ಲ ಎಂದು ಹೇಳಲಾಗ್ತಿತ್ತು. ಆದ್ರೀಗ, ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಮೂಲಕ ವಾಪಸ್ ಆಗಿದ್ದಾರೆ.

ಈ ಕಡೆ ತೆಲುಗಿನಲ್ಲಿ ಚಲೋ, ಗೀತಾ-ಗೋವಿಂದಂ, ದೇವದಾಸ್ ಅಂತಹ ಹಿಟ್ ಸಿನಿಮಾಗಳನ್ನ ನೀಡಿ, ಸ್ಟಾರ್ ನಟರ ಚಿತ್ರಗಳಿಂದ ಆಫರ್ ತರಿಸಿಕೊಂಡಿದ್ದಾರೆ. ಹೀಗಿರುವಾಗ, ರಶ್ಮಿಕಾ ಅವರ ಬಗ್ಗೆ ಟಾಲಿವುಡ್ ನಿಂದ ಎರಡು ಸುದ್ದಿ ಚರ್ಚೆಯಾಗ್ತಿದೆ. ಇದು ನಿಜಾನ ಅಥವಾ ಬರಿ ಗಾಸಿಪ್ ಅಂತ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಹಾಗಿದ್ರೆ, ಏನು ಆ ಸುದ್ದಿ.? ಮುಂದೆ ಓದಿ....

ರಶ್ಮಿಕಾ ಮೇಲೆ ತೆಲುಗು ಮಂದಿಗೆ ಲವ್

ರಶ್ಮಿಕಾ ಮೇಲೆ ತೆಲುಗು ಮಂದಿಗೆ ಲವ್

ತೆಲುಗು ಮತ್ತು ತಮಿಳು ಇಂಡಸ್ಟ್ರಿ ಬಹುತೇಕ ಒಂದೇ ಮನೆಯ ಎರಡು ಕೋಣೆ ಇದ್ದಂತೆ. ಅಲ್ಲಿನ ನಟಿಯರು ಇಲ್ಲಿ ಅಭಿನಯಿಸ್ತಾರೆ, ಇಲ್ಲಿನ ನಟಿಯರು ಅಲ್ಲಿ ಆಕ್ಟ್ ಮಾಡ್ತಾರೆ. ತಮನ್ನಾ, ಅನುಷ್ಕಾ, ಸಮಂತಾ, ಕಾಜಲ್ ಅಂತಹ ಸ್ಟಾರ್ ನಟಿಯರಿದ್ದಾರೆ. ಹೀಗಿದ್ದರೂ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಂಡ್ರೆ ಟಾಲಿವುಡ್ ಮಂದಿಗೆ ಹೆಚ್ಚು ಲವ್ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.

ಮಹೇಶ್ ಬಾಬು ಜೊತೆ ರಶ್ಮಿಕಾ.!

ಮಹೇಶ್ ಬಾಬು ಜೊತೆ ರಶ್ಮಿಕಾ.!

'ಗೀತಾ ಗೋವಿಂದಂ' ಸಿನಿಮಾ ನೋಡಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಫಿದಾ ಆಗಿದ್ದರು. ಅದರಲ್ಲೂ ರಶ್ಮಿಕಾ ಅವರ ಅಭಿನಯಕ್ಕೆ ಮಹೇಶ್ ಬೋಲ್ಡ್ ಆಗಿದ್ದರು. ಇದೀಗ, ಅವರ ಚಿತ್ರದಲ್ಲೇ ಬಣ್ಣ ಹಚ್ಚುವ ಅವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸುಕುಮಾರ್ ಸಿನಿಮಾದಲ್ಲಿ ಮಂದಣ್ಣ.!

ಸುಕುಮಾರ್ ಸಿನಿಮಾದಲ್ಲಿ ಮಂದಣ್ಣ.!

ಮಹೇಶ್ ಬಾಬು ಮತ್ತು ಸುಕುಮಾರ್ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಹೊಸ ಚಿತ್ರಕ್ಕೆ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ, 'ಮಹರ್ಷಿ' ಚಿತ್ರ ಮುಗಿಸಿರುವ ಮಹೇಶ್ ಮುಂದಿನ ಸಿನಿಮಾವನ್ನ ಸುಕುಮಾರ್ ಜೊತೆ ಮಾಡ್ತಿದ್ದಾರೆ.

'ಚಲೋ' ನಾಯಕನ ಜೊತೆಯೂ ಚಿತ್ರ.!

'ಚಲೋ' ನಾಯಕನ ಜೊತೆಯೂ ಚಿತ್ರ.!

ತೆಲುಗಿನಲ್ಲಿ ರಶ್ಮಿಕಾ ಅಭಿನಯಿಸಿದ್ದ ಮೊದಲ ಸಿನಿಮಾ 'ಚಲೋ'. ಈ ಚಿತ್ರದ ನಾಯಕ ನಾಗಶೌರ್ಯ ಈಗ ಇನ್ನೊಂದು ಸಿನಿಮಾ ಮಾಡ್ತಿದ್ದು, ಈ ಸಿನಿಮಾ ಕನ್ನಡದ ನಟಿ ರಶ್ಮಿಕಾ ಅವರನ್ನ ನಾಯಕಿಯನ್ನಾಗಿಸುವ ಪ್ರಯತ್ನ ಮಾಡಿದ್ದಾರಂತೆ. ಈ ಚಿತ್ರಕ್ಕೆ ಸುಕುಮಾರ್ ಸಹಾಯಕ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

ಈ ಎರಡು ಸುದ್ದಿಗಳು ನಿಜಾನ, ಸುಳ್ಳಾ.?

ಈ ಎರಡು ಸುದ್ದಿಗಳು ನಿಜಾನ, ಸುಳ್ಳಾ.?

ಒಂದು ಮಹೇಶ್ ಬಾಬು ಮತ್ತು ಸುಕುಮಾರ್ ಜೋಡಿಯ ಸಿನಿಮಾ ಮತ್ತೊಂದು ಸುಕುಮಾರ್ ಮತ್ತು ನಾಗಶೌರ್ಯ ಜೋಡಿಯ ಸಿನಿಮಾ. ಈ ಎರಡು ಚಿತ್ರಗಳಲ್ಲಿಯೂ ರಶ್ಮಿಕಾ ಅಭಿನಯಿಸುತ್ತಾರಾ ಎಂಬುದು ಈಗ ಕರ್ನಾಟಕದಲ್ಲಿ ಕಾಡುತ್ತಿರುವ ಕುತೂಹಲ.

More from Filmibeat

English summary
Rashmika Mandanna who has already won millions of hearts with her performance in recently released Geetha Govindam, has to confirm her romance with Superstar Mahesh Babu for Sukumar’s directorial venture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X