»   » ಇದು ಉಪೇಂದ್ರ ಅವರಿಗೆ ಮಾಡಿದ ಅವಮಾನಾನಾ?

ಇದು ಉಪೇಂದ್ರ ಅವರಿಗೆ ಮಾಡಿದ ಅವಮಾನಾನಾ?

By: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ತೆಲುಗಿನ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೋ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ. ಈ ಹಿಂದೆ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರ ಅಂದ್ರೆ ಟಾಲಿವುಡ್ ಸಿನಿಪ್ರೇಮಿಗಳಿಗೂ ಗೊತ್ತಿರೋ ಮುಖ ಈ ಉಪ್ಪಿ.

ಆದ್ರೆ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದಾರಾ ಇಲ್ಲವಾ ಅನ್ನೋ ಅನುಮಾನ ಸಿನಿಪ್ರೇಮಿಗಳನ್ನ ಕಾಡ್ತಿದೆ. 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದ 2 ನಿಮಿಷದ ಅಫೀಷಿಯಲ್ ಟ್ರೇಲರ್ ನ ಒಂದು ಫ್ರೇಂನಲ್ಲೂ ಉಪೇಂದ್ರ ಇಲ್ಲ. ಇದ್ದೂ ಇಲ್ಲದಂತೆ ಮಸುಕು ಮಸುಕಾಗಿ ತೋರಿಸಲಾಗಿದೆ. [ಸ್ಟೈಲಿಶ್ ಅಲ್ಲು ಅರ್ಜುನ್ ಜೊತೆ ಉಪ್ಪಿ ಖಡಕ್ ಪೋಸ್]


ಇಷ್ಟಕ್ಕೂ ಉಪೇಂದ್ರ ಅಂತಹಾ ಮರೆಯಲಾಗದ ಮುಚ್ಚಿಡುವ ಕ್ಯೂರಿಯಾಸಿಟಿ ಹುಟ್ಟಿಸುವ ಪಾತ್ರವನ್ನೇನಾದರೂ ಮಾಡಿದ್ದಾರಾ ಅಂದ್ರೆ ಖಂಡಿತಾ ಇಲ್ಲ. ಯಾಕಂದ್ರೆ ಈಗಾಗ್ಲೇ ಉಪೇಂದ್ರರ ಸ್ಟಿಲ್ ಗಳು ಹೊರಬಂದಿವೆ. ಆದ್ರೆ ಟ್ರೇಲರ್ ನಲ್ಲಿ ಉಪ್ಪಿನೇ ನಾಪತ್ತೆ.


Upendra dishonour in Telugu Son of Satyamurthy?

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಇದೇ ಸಿನಿಮಾದಲ್ಲಿ ಉಪೇಂದ್ರ ತಾನೇ ಅಭಿನಯಿಸಿರೋದು ಅಂತ ಚಿತ್ರಪ್ರೇಮಿಗಳು ಕೇಳ್ತಿದ್ದಾರೆ. ಯಾಕಂದ್ರೆ ಆಂಧ್ರದ ನಂತರ ಬಹಳಷ್ಟು ಚಿತ್ರಪ್ರೇಮಿಗಳು ತೆಲುಗು ಸಿನಿಮಾಗಳಿಗೆ ಇರೋದು ಕರ್ನಾಟಕದಲ್ಲಿ ಎಂಬುದು ವಿಶೇಷ.


ಟಾಲಿವುಡ್ ನಲ್ಲಿ ಹೊಸ ಅಲೆ ಹುಟ್ಟಿಸಿದಂತಹ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಸಾಕಷ್ಟು ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ಕೊಟ್ಟಂತಹ ಟಾಲಿವುಡ್ ಡೈರೆಕ್ಟರ್ ಇವರು. ಇದೀಗ ಹೊಸ ಕಥಾವಸ್ತುವಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ.


ತ್ರಿವಿಕ್ರಮ್ ಚಿತ್ರಗಳ ವಿಶೇಷತೆ ಎಂದರೆ, ಹೀರೋಗಳನ್ನು ಪ್ರೆಸೆಂಟ್ ಮಾಡೋ ರೀತಿ, ಕತ್ತಿಯ ಅಂಚಿನಂತಹ ಡೈಲಾಗ್ಸ್, ಭಿನ್ನ ಕಥೆ. ಅವರ ಸಿನಿಮಾಗಳನ್ನು ಕಾತುರದಿಂದ ಎದುರುನೋಡುವ ಪ್ರೇಕ್ಷಕ ವರ್ಗವೂ ಇದೆ. ಈ ರೀತಿಯ ಚಿತ್ರದಲ್ಲಿ ಉಪ್ಪಿಗೆ ಯಾವ ರೀತಿಯ ಪಾತ್ರ ನೀಡಲಾಗಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.


English summary
Is Real Star Upendra dishonours in Telugu movie 'S/o Satyamurthy'?, directed by Trivikram Srinivas. Recently the trailer of the movie released, in which Upendra is not seen in a single frame. This becomes hot topic in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada