2016ರ ಘಟನೆ ರಿಪೀಟ್: ಯಶ್-ಉಪ್ಪಿ ನಡುವೆ ಸ್ಪರ್ಧೆನಾ ಅಥವಾ ಸಂಧಾನ.?

Recommended Video

KGF Kannada Movie : ಯಶ್ ಕೆಜಿಎಫ್ ರಿಲೀಸ್ ದಿನವೇ ಉಪೇಂದ್ರ ಸಿನಿಮಾ ರಿಲೀಸ್ | FILMIBEAT KANNADA

ಬಹುಕೋಟಿ ವೆಚ್ಚದ 'ಕೆಜಿಎಫ್' ಸಿನಿಮಾದ ಟ್ರೈಲರ್ ಬಿಡುಗಡೆ ನಾಳೆ ಆಗುತ್ತಿದ್ದು, ಸಿನಿಮಾದ ಪ್ರಚಾರ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಇಡೀ ಭಾರತವೇ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಕೆಜಿಎಫ್ ಮಾಡಲಿದೆ ಎಂದು ಯಶ್ ಭರವಸೆ ಇಟ್ಟುಕೊಂಡಿದ್ದಾರೆ.

ಕೆಜಿಎಫ್ ಚಿತ್ರವನ್ನ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಬಾಲಿವುಡ್ ಮಂದಿಯಂತೂ ಕೆಜಿಎಫ್ ಸಿನಿಮಾವನ್ನ ಹಿಂದಿ ಚಿತ್ರದಂತೆ ಅದ್ಧೂರಿಯಾಗಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ.

ಹೀಗೆ, ಕನ್ನಡ ಚಿತ್ರರಂಗದ ಹಿರಿಮೆಯನ್ನ ಭಾರತಕ್ಕೆ ಪರಿಚಯ ಮಾಡಲಿದ್ದೇವೆ ಎಂದು ಹೋಗುತ್ತಿರುವ ಕೆಜಿಎಫ್ ಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಪೈಪೋಟಿ ಶುರುವಾಗಿದೆ. 2016ರಲ್ಲಿ ನಡೆದಿದ್ದ ಘಟನೆ ಈಗ ಮತ್ತೆ ಮರುಕಳಿಸಲಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಏನಿದು ಹೊಸ ಕಥೆ ಅಂತ ತಿಳಿಯಲು ಮುಂದೆ ಓದಿ....

ಕೆಜಿಎಫ್ ಗೆ ಉಪ್ಪಿ ಸವಾಲ್.!

ಕೆಜಿಎಫ್ ಗೆ ಉಪ್ಪಿ ಸವಾಲ್.!

'ಕೆಜಿಎಫ್' ಸಿನಿಮಾಗೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಎದುರಾಳಿಯಿಲ್ಲ ಎಂದು ತಿಳಿದುಕೊಂಡವರಿಗೆ ಈಗ ಅಚ್ಚರಿ ಎದುರಾಗಿದೆ. ಯಾಕಂದ್ರೆ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ 'ಕೆಜಿಎಪ್' ಎದುರು ಬರಲಿದೆ ಎಂಬ ಮಾತು ಈಗ ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ.

ತವರಿನಲ್ಲೇ ಪೈಪೋಟಿ.!

ತವರಿನಲ್ಲೇ ಪೈಪೋಟಿ.!

ಸದ್ಯ ಕೆಜಿಎಫ್ ಸಿನಿಮಾ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಪ್ರತಿಸ್ಪರ್ಧಿಯಾಗಿ ನಿಂತಿದೆ. ಜೀರೋ ಚಿತ್ರಕ್ಕಿಂತ ಕೆಜಿಎಫ್ ಚಿತ್ರದ ಅಬ್ಬರವೇ ಹೆಚ್ಚಾಗಿ ಬಿಂಬಿಸಲಾಗ್ತಿದೆ. ಹೀಗಿರಬೇಕಾದರೇ ಕೆಜಿಎಫ್ ಸಿನಿಮಾಗೆ ತವರಿನಲ್ಲಿಯೇ ಪೈಪೋಟಿ ಎದುರಾಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಮೊದಲು ಅಂದುಕೊಂಡಂತೆ ಆಗಿದ್ದರೇ, ಕೆಜಿಎಫ್ ಸಿನಿಮಾ ನವೆಂಬರ್ ನಲ್ಲಿ ಬರಬೇಕಿತ್ತು. ಆದ್ರೆ, ದೊಡ್ಡ ರಿಲೀಸ್ ಮಾಡುವ ಯೋಚನೆ ಮಾಡಿದ್ದ ಚಿತ್ರತಂಡ ಮುಂದಕ್ಕೆ ಹೋಗಿತ್ತು. ಆದ್ರೀಗ, ಅದೇ ದಿನಕ್ಕೆ ಉಪ್ಪಿ ಸಿನಿಮಾನೂ ಬರುವ ಸೂಚನೆ ನೀಡಿದೆ.

2016ರಲ್ಲಿ ಕಷ್ಟವಾಗಿತ್ತು

2016ರಲ್ಲಿ ಕಷ್ಟವಾಗಿತ್ತು

ಅಂದ್ಹಾಗೆ, ಯಶ್ ಮತ್ತು ಉಪೇಂದ್ರ ಅವರ ಮಧ್ಯೆ ಈ ಹಿಂದೆಯೇ 2016ರಲ್ಲಿ ಸಿನಿವಾರ್ ಆಗಿತ್ತು. ಸುದೀಪ್ ಮತ್ತು ಉಪ್ಪಿ ಅಭಿನಯದ 'ಮುಕುಂದ ಮುರಾರಿ' ಮತ್ತು ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾ ಒಂದೇ ದಿನ ರಿಲೀಸ್ ಆಗಿತ್ತು. ಆಗಲೂ ಅಭಿಮಾನಿಗಳಲ್ಲಿ ತೀರಾ ಗೊಂದಲ್ಲ ಉಂಟಾಗಿತ್ತು. ಯಾವ ಸಿನಿಮಾ ಮೊದಲ ನೋಡಬೇಕು ಎಂಬ ಯೋಚನೆಗೆ ಬಿದ್ದಿದ್ರು. ಇದೀಗ, ಮತ್ತೆ ಅದೇ ಘಟನೆ ಎದುರಾಗುತ್ತಿರುವುದು ಬೇಸರ ತರಿಸಿದೆ.

ಬಾಕ್ಸ್ ಆಫೀಸ್ ಮೇಲೆ ಪರಿಣಾಮ.!

ಬಾಕ್ಸ್ ಆಫೀಸ್ ಮೇಲೆ ಪರಿಣಾಮ.!

ಇನ್ನು ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಂದ್ರೆ, ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಮಾತಿದೆ. ಯಾಕಂದ್ರೆ, ಇಬ್ಬರು ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರು. ಅವರವರ ನೆಚ್ಚಿನ ನಟರ ಸಿನಿಮಾ ಎಂದು ಕಾಂಪಿಟೇಶನ್ ಗೆ ಬೀಳುವ ಸಾಧ್ಯತೆ ಇದೆ. ಇನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಕ್ರಿಸ್ ಮಸ್ ಇರುವುದರಿಂದ ಇದು ರಜೆಯ ಸಮಯ ಕೂಡ ಆಗಿರುತ್ತೆ. ಹಾಗಾಗಿ, ಉಪ್ಪಿ ಸಿನಿಮಾನೂ ಅದೇ ದಿನವನ್ನ ಟಾರ್ಗೆಟ್ ಮಾಡ್ತಿದೆ ಎಂದು ಹೇಳಲಾಗ್ತಿದೆ. ಆದ್ರೆ, ಇದು ಅಧಿಕೃತವಾಗಿ ಘೋಷಣೆಯಾಗಿಲ್ಲ.

More from Filmibeat

English summary
Yash starrer KGF has already announced its release date as December 21 after being postponed from the earlier date of November 16. Upendra’s I Love You, is now slated to release on the same date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X