»   » ಉಪ್ಪಿ ಬೇಕಾ, ಯಶ್ ಸಾಕಾ.? ರಾಧಿಕಾ ಪಂಡಿತ್ ತಲೆಯಲ್ಲಿ ಹುಳ

ಉಪ್ಪಿ ಬೇಕಾ, ಯಶ್ ಸಾಕಾ.? ರಾಧಿಕಾ ಪಂಡಿತ್ ತಲೆಯಲ್ಲಿ ಹುಳ

Posted By:
Subscribe to Filmibeat Kannada

'ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಅನ್ನುವ ಗಾದೆ ಮಾತಿನಂತಾಗಿದೆ ನಟಿ ರಾಧಿಕಾ ಪಂಡಿತ್ ಪರಿಸ್ಥಿತಿ. ಇತ್ತ ಅಕ್ಕಿ ಖರ್ಚು ಮಾಡುವ ಹಾಗಿಲ್ಲ, ಅತ್ತ ನೆಂಟರನ್ನು ಬೇಸರಗೊಳಿಸುವ ಹಾಗಿಲ್ಲ. ಎರಡನ್ನು ಹೇಗೆ ಮ್ಯಾನೇಜ್ ಮಾಡೋದು ಅನ್ನೋದು ರಾಧಿಕಾ ರವರ ಪ್ರಾಬ್ಲಂ.

ಅಷ್ಟಕ್ಕೂ ಇಲ್ಲಿ ಅಕ್ಕಿ ಮತ್ತು ನೆಂಟರು ಯಾರಪ್ಪಾ ಅಂದ್ರೆ, ಒಬ್ಬರು ರಿಯಲ್ ಸ್ಟಾರ್ ಉಪೇಂದ್ರ ಮತ್ತೊಬ್ಬರು ರಾಕಿಂಗ್ ಸ್ಟಾರ್ ಯಶ್. ನಟಿ ರಾಧಿಕಾ ಪಂಡಿತ್ ಗೆ ಇಬ್ಬರ ಜೊತೆ ನಟಿಸುವ ಅವಕಾಶ ಹುಡುಕ್ಕೊಂಡು ಬಂದಿದೆ.

yash-radhika-pandit-upendra

ಉಪೇಂದ್ರ ಅಭಿನಯಿಸಲಿರುವ 'ಕಲ್ಪನಾ-2' ಚಿತ್ರದ ನಾಯಕಿಯಾಗುವಂತೆ ನಿರ್ದೇಶಕರು ಕೇಳಿಕೊಂಡಿದ್ದಾರೆ. ಇನ್ನೂ ಯಶ್ ರವರ ಮುಂದಿನ ಚಿತ್ರಕ್ಕೆ ನಟಿ ರಾಧಿಕಾ ಬೇಕೇ ಬೇಕು ಅಂತ ನಿರ್ದೇಶಕ ಮಹೇಶ್ ಹಠ ಹಿಡಿದು ಕೂತಿದ್ದಾರೆ. ['ಕಲ್ಪನಾ-2' ಚಿತ್ರದಲ್ಲಿ ಉಪೇಂದ್ರ ಜೊತೆ ರಾಧಿಕಾ ಪಂಡಿತ್?]

ಎರಡೂ ಪ್ರಾಜೆಕ್ಟ್ ರಾಧಿಕಾ ಪಂಡಿತ್ ಗೆ ಸಖತ್ ಇಷ್ಟವಾಗ್ಬಿಟ್ಟಿದೆ. ಈವರೆಗೂ ರಾಧಿಕಾ ಪಂಡಿತ್ ಹಾರರ್-ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿಲ್ಲ. 'ಕಲ್ಪನಾ-2' ಚಿತ್ರದ ಪಾತ್ರ ಅವರ ವೃತ್ತಿ ಬದುಕಿನಲ್ಲಿನ ಡಿಫರೆಂಟ್ ರೋಲ್. ಜೊತೆಗೆ ಉಪೇಂದ್ರ ಜೊತೆ ನಟಿಸುವ ಸದಾವಕಾಶ.

ಇನ್ನೂ ಆತ್ಮೀಯ ಗೆಳೆಯ ಯಶ್ ನಟಿಸಲಿರುವ ಮುಂದಿನ ಚಿತ್ರದ ಪಾತ್ರ ಕೂಡ ಚೆನ್ನಾಗಿದೆ. ತಾಪತ್ರಯ ಏನು ಅಂದ್ರೆ, ಎರಡು ಚಿತ್ರಗಳು ಒಮ್ಮೆಲೆ ಶುರುವಾಗಲಿದೆ. ಹೀಗಾಗಿ ರಾಧಿಕಾ ಪಂಡಿತ್ ಗೆ ಡೇಟ್ಸ್ ಪ್ರಾಬ್ಲಂ ಎದುರಾಗಿದೆ. ['ಕೆ.ಜಿ.ಎಫ್'ನಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್]

ಅತ್ತ ಉಪ್ಪಿ ಸಿನಿಮಾ ಬಿಡೋಕೆ ಇಷ್ಟವಿಲ್ಲ. ಇತ್ತ ಯಶ್ ಚಿತ್ರಕ್ಕೆ 'ನೋ' ಅಂತ ಹೇಳಲು ಮನಸ್ಸು ಒಪ್ಪುತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಆದರೆ ಎರಡು ಚಿತ್ರಗಳಿಗೆ ಸೈ ಅನ್ನುವುದಕ್ಕೆ ರಾಧಿಕಾ ಪಂಡಿತ್ ರೆಡಿ. ಒಂದ್ವೇಳೆ ಅದು ಆಗ್ಲಿಲ್ಲ ಅಂದ್ರೆ, ಉಪೇಂದ್ರ ಮತ್ತು ಯಶ್ ನಡುವೆ ಯಾರನ್ನ ರಾಧಿಕಾ ಸೆಲೆಕ್ಟ್ ಮಾಡ್ತಾರೋ...ಕಾದು ನೋಡೋಣ.

English summary
Kannada Actress Radhika Pandit is in dilemma to make a choice between Upendra's 'Kalpana-2' and Yash's upcoming project as both the projects will go on floors during the same time and the Actress is facing date issues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada