For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ಉಪೇಂದ್ರ.!

  |
  ಮಹೇಶ್ ಬಾಬು ಸಿನಿಮಾ ಆಫರ್ ಗೆ ಆಗಲ್ಲ ಅಂದ್ರಂತೆ ಉಪೇಂದ್ರ | FILMIBEAT KANNADA

  ರಿಯಲ್ ಸ್ಟಾರ್ ಉಪೇಂದ್ರ ಕನ್ನಡದ ಜೊತೆ ಜೊತೆಗೆ ತೆಲುಗು ಇಂಡಸ್ಟ್ರಿಯಲ್ಲಿ ಬೆಳದವರು. ಉಪ್ಪಿ ಎ, ಉಪೇಂದ್ರ, ಓಂ ಅಂತಹ ಚಿತ್ರಗಳು ತೆಲುಗಿನಲ್ಲಿ ಡಬ್ ಆಗಿವೆ, ರೀಮೇಕ್ ಆಗಿವೆ. ಆಗಿನಿಂದಲೂ ಉಪ್ಪಿಗೆ ಟಾಲಿವುಡ್ ಜೊತೆ ನಂಟಿದೆ.

  ಹಾಗಾಗಿ, ಉಪೇಂದ್ರ ಅವರನ್ನ ಹುಡುಕುತ್ತಾ ತೆಲುಗು ಮಂದಿ ಬರ್ತಾರೆ. ಅದ್ಯಾಕೋ ಇತ್ತೀಚೀನ ದಿನಗಳಲ್ಲಿ ಉಪೇಂದ್ರ ಅವರು ಯಾವ ಚಿತ್ರವನ್ನ ಒಪ್ಪಿಕೊಳ್ಳುತ್ತಿಲ್ಲ. ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕಿತ್ತು. ಆ ಚಿತ್ರವನ್ನ ರಿಜೆಕ್ಟ್ ಮಾಡಿದ್ರು.

  ರಾಜಕೀಯ ಕೆಲಸದ ನಡುವೆಯೂ ಹೊಸ ಸಿನಿಮಾಗೆ ಉಪ್ಪಿ ಗ್ರೀನ್ ಸಿಗ್ನಲ್

  ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರಿಗಾಗಿ ಒಂದು ಪಾತ್ರ ಮೀಸಲಿಟ್ಟು ಕೇಳಿದ್ರು. ಈಗಲೂ ಉಪ್ಪಿ ಒಪ್ಪಿಕೊಳ್ಳಲಿಲ್ಲ ಎನ್ನಲಾಗುತ್ತಿದೆ.

  ಸಿನಿಮಾದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ಉಪೇಂದ್ರ ಅವರು ಅಷ್ಟಾಗಿ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಹಾಗಾಗಿಯೇ ಪರಭಾಷೆಯಲ್ಲಿ ಬಂದ ಆಫರ್ ನ್ನ ರಿಜೆಕ್ಟ್ ಮಾಡುತ್ತಿದ್ದಾರೆ.

  ಟಾಲಿವುಡ್ ಗೆ ಎಂಟ್ರಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

  ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಅವರು ಸ್ಪರ್ಧೆ ಮಾಡುವುದು ಬಹುತೇಕ ಅನುಮಾನವಾಗಿದ್ದು, ಉಳಿದಂತೆ ಇತರೆ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಪ್ರಯತ್ನ ಮಾಡುತ್ತಾರಂತೆ. ಸದ್ಯ ಆರ್ ಚಂದ್ರು ನಿರ್ದೇಶನ ಮತ್ತು ನಿರ್ಮಾಣದಲ್ಲಿ ಸಿದ್ಧವಾಗಿರುವ ಐ ಲವ್ ಯೂ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ.

  English summary
  Mahesh Babu’s upcoming film with director Anil Ravipudi. According to reports, the director was offered to upendra for negative role. but he rejects the offer because of his political commitments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X