twitter
    For Quick Alerts
    ALLOW NOTIFICATIONS  
    For Daily Alerts

    'ಟೋಪಿವಾಲ' ಉಪೇಂದ್ರಗೆ ಮಕ್ಮಲ್ ಟೋಪಿ

    By Rajendra
    |

    ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರ ಹೊಸ ವಿವಾದಕ್ಕೆ ಗುರಿಯಾಗಿದೆ. ಮಾರ್ಚ್ 15, 2013ರಲ್ಲಿ ತೆರೆಕಂಡ ಚಿತ್ರ ಹತ್ತು ತಿಂಗಳ ಬಳಿಕ ಮತ್ತೆ ಸುದ್ದಿಯಾಗಿದೆ. ತೆಲುಗು ಭಾಷೆಗೆ ಡಬ್ ಆಗುತ್ತಿರುವುದೇ ವಿವಾದಕ್ಕೆ ಕಾರಣ.

    ತಮ್ಮ ಅನುಮತಿ ಪಡೆಯದೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಚಿತ್ರದ ಡಬ್ಬಿಂಗ್ ಹಕ್ಕುಗಳನ್ನು ತೆಲುಗಿಗೆ ಮಾರಾಟ ಮಾಡಿದ್ದಾರೆ. ಸೌಜನ್ಯಕ್ಕಾದರೂ ತಮಗೆ ಒಂದು ಮಾತು ತಿಳಿಸಬಹುದಿತ್ತಲ್ಲವೇ ಎಂದು ಉಪ್ಪಿ ಗರಂ ಆಗಿದ್ದಾರೆ.

    ಈ ಸಂಬಂಧ ತಾವು ಕೋರ್ಟ್ ಮೆಟ್ಟಿಲೇರುವುದಾಗಿಯೂ ಹೇಳಿದ್ದಾರೆ. ಉಪೇಂದ್ರ ಅವರು 'ಟೋಪಿವಾಲ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಟಿಸಿದ್ದಾರೆ. ತಮಗೆ ತಿಳಿಸದಂತೆ ಚಿತ್ರದ ಡಬ್ಬಿಂಗ್ ರೈಟ್ಸ್ ತೆಲುಗಿಗೆ ಮಾರಾಟ ಮಾಡಿರುವುದು ಉಪ್ಪಿ ಅವರ ಪಿತ್ತ ಕೆರಳಿಸಿದೆ.

    ನೋಟೀಸ್ ಕಳುಹಿಸಲು ಮುಂದಾದ ಉಪೇಂದ್ರ

    ನೋಟೀಸ್ ಕಳುಹಿಸಲು ಮುಂದಾದ ಉಪೇಂದ್ರ

    ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರಿಗೆ ತಮ್ಮ ಪರ ವಕೀಲರ ಮೂಲಕ ನೋಟೀಸ್ ಕಳುಹಿಸುವುದಾಗಿ ಗುಡುಗಿದ್ದಾರೆ. ರೈಟ್ಸ್ ಬಗ್ಗೆ ಈಗಾಗಲೆ ನಿರ್ಮಾಪಕ ಹಾಗೂ ಉಪೇಂದ್ರ ನಡುವೆ ಒಪ್ಪಂದವಾಗಿತ್ತು.

    ಶ್ರೀನಿವಾಸ್ ಮತ್ತು ಉಪ್ಪಿ ನಡುವೆ ಒಪ್ಪಂದವಾಗಿತ್ತು

    ಶ್ರೀನಿವಾಸ್ ಮತ್ತು ಉಪ್ಪಿ ನಡುವೆ ಒಪ್ಪಂದವಾಗಿತ್ತು

    ಅದರ ಪ್ರಕಾರ ನಿರ್ಮಾಪಕರಿಗೆ ಶೇ.51 ಹಾಗೂ ಉಪೇಂದ್ರ ಅವರಿಗೆ ಶೇ.49ರಷ್ಟು ರೈಟ್ಸ್ ಇದೆ. ಈ ಬಗ್ಗೆ ಅಗ್ರಿಮೆಂಟ್ ಸಹ ಮಾಡಿಕೊಂಡಿದ್ದಾರೆ. ವಿಷಯ ಹೀಗಿದ್ದರೂ ತಮಗೆ ಒಂದೇ ಒಂದು ಮಾತನ್ನೂ ತಿಳಿಸದೆ ತೆಲುಗಿಗೆ ರೈಟ್ಸ್ ಕೊಟ್ಟಿರುವುದು ತುಂಬಾ ನೋವಿನ ಸಂಗತಿ ಎಂದಿದ್ದಾರೆ ಉಪೇಂದ್ರ.

    ನಮ್ಮಂಥವರಿಗೇ ಈ ರೀತಿಯಾದರೆ ಇನ್ನು..

    ನಮ್ಮಂಥವರಿಗೇ ಈ ರೀತಿಯಾದರೆ ಇನ್ನು..

    ನಮ್ಮಂಥವರಿಗೇ ಈ ರೀತಿಯಾದರೆ ಇನ್ನು ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡುವವರ ಪಾಡೇನು ಎಂದು ಉಪ್ಪಿ ಪ್ರಶ್ನಿಸಿದ್ದಾರೆ. ನನಗೇನು ಬಿಡಿಗಾಸು ಬೇಕಾಗಿರಲಿಲ್ಲ. ಆದರೆ ಅಗ್ರಿಮೆಂಟ್ ಆಗಿದ್ದ ಕಾರಣ ಒಂದು ಮಾತು ನನ್ನ ಗಮನಕ್ಕೆ ತರಬೇಕಾಗಿತ್ತು. ನಾನು ಮೂರನೇ ಪಾರ್ಟಿಯಿಂದ ಈ ವಿಷಯ ತಿಳಿಯಬೇಕಾಗಿಯಿತು.

    ಕನಕಪುರ ಶ್ರೀನಿವಾಸ್ ಏನು ಹೇಳುತ್ತಾರೆ?

    ಕನಕಪುರ ಶ್ರೀನಿವಾಸ್ ಏನು ಹೇಳುತ್ತಾರೆ?

    ಟೋಪಿವಾಲ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಚಿತ್ರ ರೈಟ್ಸ್ ಮಾರಾಟ ಮಾಡಿದಾಗ ಉಪೇಂದ್ರ ಅವರು ಚಿತ್ರೀಕರಣ ನಿಮಿತ್ತ ವಿದೇಶದಲ್ಲಿದ್ದರು. ಹಾಗಾಗಿ ಅವರಿಗೆ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ಹುಳುಕು ಮುಚ್ಚಿಕೊಳ್ಳಲು ಇಲ್ಲಸಲ್ಲದ ಕಥೆ

    ಹುಳುಕು ಮುಚ್ಚಿಕೊಳ್ಳಲು ಇಲ್ಲಸಲ್ಲದ ಕಥೆ

    ಶ್ರೀನಿವಾಸ್ ಅವರ ಮಾತಿಗೆ ತಿರುಗೇಟು ನೀಡಿರುವ ಉಪೇಂದ್ರ, ಕಳೆದ ಮೂರು ತಿಂಗಳಿಂದ ತಾವು ಯಾವುದೇ ವಿದೇಶಿ ಚಿತ್ರೀಕರಣಕ್ಕೆ ಹೋಗಿಲ್ಲ. ಆದರೂ ಶ್ರೀನಿವಾಸ್ ತಮಗೆ ಈ ರೀತಿ ಸುಳ್ಳು ಹೇಳುತ್ತಿರುವುದು ಸರಿಯಲ್ಲ. ಅವರ ಹುಳುಕನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಿದ್ದಾರೆ ಎಂದಿದ್ದಾರೆ.

    ತೆಲುಗು ಚಿತ್ರ 'ಸ್ವಿಸ್ ಬ್ಯಾಂಕುಕಿ ದಾರೇದಿ'

    ತೆಲುಗು ಚಿತ್ರ 'ಸ್ವಿಸ್ ಬ್ಯಾಂಕುಕಿ ದಾರೇದಿ'

    ರಾಜಕೀಯ ವಿಡಂಬನಾತ್ಮಕ ಈ ಚಿತ್ರಕ್ಕೆ ತೆಲುಗಿನಲ್ಲಿ 'ಸ್ವಿಸ್ ಬ್ಯಾಂಕುಕಿ ದಾರೇದಿ' (ಸ್ವಿಸ್ ಬ್ಯಾಂಕಿಗೆ ದಾರಿ ಯಾವುದು) ಎಂದು ಹೆಸರಿಡಲಾಗಿದೆ. ಗುಂಟೂರಿನ ರಿಯಲ್ ಎಸ್ಟೇಟ್ ಉದ್ಯಮಿ ಅವುಲೂರಿ ರಮೇಶ್ ಬಾಬು ಇದೇ ಮೊದಲ ಬಾರಿ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದು ತೆಲುಗಿಗೆ ತರುತ್ತಿದ್ದಾರೆ.

    ರವಿಶಂಕರ್ ಸರ್ಕಾರ್ ಪಾತ್ರ

    ರವಿಶಂಕರ್ ಸರ್ಕಾರ್ ಪಾತ್ರ

    ಚಿತ್ರದಲ್ಲಿ ರವಿಶಂಕರ್ ಪ್ರಮುಖ ಪಾತ್ರ ಪೋಷಿಸಿರುವುದು ಜೊತೆಗೆ ಮಲ್ಲು ಬೆಡಗಿ ಭಾವನಾ ಇರುವುದು ತೆಲುಗು ಪ್ರೇಕ್ಷಕರಿಗೆ ಇದೇನು ಹೊಸಬರ ಚಿತ್ರ ಅನ್ನಿಸುವುದಿಲ್ಲ. ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರದಲ್ಲಿ ಅಲ್ಲಲ್ಲಿ ಕೆಲವೊಂದು ಸನ್ನಿವೇಶಗಳನ್ನು ಮರುಚಿತ್ರಿಸಿಕೊಳ್ಳಲಾಗಿದೆ. 'ಟೋಪಿವಾಲ' ಚಿತ್ರಕ್ಕೆ ಶ್ರೀನಿ ಆಕ್ಷನ್ ಕಟ್ ಹೇಳಿದ್ದರು. ತೆಲುಗಿನಲ್ಲಿ ಎಂಜಿ ಶ್ರೀನಿವಾಸ್ ಎಂಬುವವರು ನಿರ್ದೇಶಿಸಿದ್ದು ಸ್ವತಃ ಉಪೇಂದ್ರ ಅವರೇ ಕಥೆ, ಚಿತ್ರಕಥೆಯನ್ನು ರಚಿಸಿದ್ದಾರೆ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ.

    ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದ್ದು ಶೀಘ್ರದಲ್ಲೇ ಆಡಿಯೋ

    ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದ್ದು ಶೀಘ್ರದಲ್ಲೇ ಆಡಿಯೋ

    ರಾಜಕಾರಣಿಗಳು ಕೊಳ್ಳೆ ಹೊಡೆದ ದುಡ್ಡು ಸ್ವಿಸ್ ಬ್ಯಾಂಕ್ ಸೇರಿದ ಕಥೆ ಇದು. ಅದನ್ನು ಸ್ವದೇಶಕ್ಕೆ 'ಬಸಕ್' (ಉಪೇಂದ್ರ) ಹೇಗೆ ತರುತ್ತಾನೆ ಎಂಬುದೇ ಉಳಿದ ಕಥೆ. ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದ್ದು ಶೀಘ್ರದಲ್ಲೇ ಆಡಿಯೋ ಬಿಡುಗಡೆ ನಡೆಯಲಿದೆ.

    ಬಾಕ್ಸ್ ಆಫೀಸಲ್ಲಿ ಹತ್ತಿರಹತ್ತಿರ ರು.10 ಕೋಟಿ ಕಲೆಕ್ಷನ್

    ಬಾಕ್ಸ್ ಆಫೀಸಲ್ಲಿ ಹತ್ತಿರಹತ್ತಿರ ರು.10 ಕೋಟಿ ಕಲೆಕ್ಷನ್

    ಹೇಮಚಂದ್ರ, ವೇಣು, ಗೀತಾ ಮಾಧುರಿ, ಶ್ರೀಕರ್, ಸಾಹಿತಿ ಹಾಗೂ ಶ್ರೀಸೌಮ್ಯಾ ಅವರು ಚಿತ್ರಕ್ಕೆ ಡಬ್ಬಿಂಗ್ ಹೇಳಿರುವ ಕಲಾವಿದರು. ಸರಿಸುಮಾರು ರು.6.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ 'ಟೋಪಿವಾಲ' ಚಿತ್ರ ಬಾಕ್ಸ್ ಆಫೀಸಲ್ಲಿ ಹತ್ತಿರಹತ್ತಿರ ರು.10 ಕೋಟಿ ಕಲೆಕ್ಷನ್ ಮಾಡಿದೆ.

    English summary
    Real Star Upendra's 'Topiwala' (Released on 15th March, 2013) Telugu dubbing rights lands in trouble. Upendra, who holds both remake and dubbing rights of the movie, is not even aware of the development. It is reported that the actor has decided to take legal action against Kanakapura Srinivas and KP Srikanth, who had produced Topiwala in Kannada.
    Thursday, December 5, 2013, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X