ಬಿಕಿನಿ ತೊಡಲು ಭಾರೀ ಸಂಭಾವನೆ ಕೇಳಿದ ಕರಾವಳಿ ಬೆಡಗಿ: ತಮಿಳು ಸಿನಿಮಾಗೆ ಕೃತಿ ಶೆಟ್ಟಿ ಕೇಳಿದ್ದೆಷ್ಟು?

By ಫಿಲ್ಮಿಬೀಟ್ ಡೆಸ್ಕ್

ಕರಾವಳಿ ಬೆಡಗಿ ಕೃತಿ ಶೆಟ್ಟಿ ಟಾಲಿವುಡ್‌ನ ಸ್ಟಾರ್ ನಟಿಯಾಗಿ ಪ್ರಮೋಟ್ ಆಗಿದ್ದಾರೆ. 'ಉಪ್ಪೆನ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯ ಮೊದಲ ಸಿನಿಮಾವೇ 100 ಕೋಟಿ ಕ್ಲಬ್ ಸೇರಿತ್ತು. ಅತೀ ಚಿಕ್ಕ ವಯಸ್ಸಿನಲ್ಲೇ ತನ್ನ ವೃತ್ತಿ ಬದುಕಿನಲ್ಲಿ ಗೆಲುವು ಕಂಡಿದ್ದಾರೆ. ಟಾಲಿವುಡ್‌ನಲ್ಲೇ ನಟಿಸುತ್ತಿದ್ದ ನಟಿಯೀಗ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದು, ಈಗ ಬಿಕಿನಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಆರಂಭದಲ್ಲಿ ಯಶಸ್ಸು ಕಂಡ ಕೃತಿ ಶೆಟ್ಟಿ ಇತ್ತೀಚೆಗೆ ಹಿನ್ನೆಡೆ ಅನುಭವಿಸಿದ್ದರು. ಹೀಗಾಗಿ ಸಿನಿಮಾ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಈ ನಟಿ ಸಿದ್ಧರಿಲ್ಲ. ಈ ಕಾರಣಕ್ಕೆ ಸಿಕ್ಕಿರೋ ದೊಡ್ಡ ಆಫರ್ ಅನ್ನು ಮಿಸ್ ಮಾಡಿಕೊಳ್ಳಲ್ಲೂ ಧೈರ್ಯವಿಲ್ಲ. ಹೀಗಾಗಿ ಸಿನಿಮಾದಲ್ಲಿ ಬಿಕಿನಿ ತೊಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಸುದ್ದಿ.

Uppena Actress Krithi Shetty Asking Big Remuneration to wear Bikini: Trending News

ಟಾಲಿವುಡ್‌ನಲ್ಲಿ ಕೃತಿ ಶೆಟ್ಟಿ ಇದೇ ಮೊದಲ ಬಾರಿಗೆ ಸ್ಟಾರ್ ನಟ ಸಿನಿಮಾಗೆ ಬಿಕಿನಿ ತೊಡುತ್ತಿದ್ದಾರೆ. ಅದಕ್ಕೆ ನಿರ್ಮಾಪಕರು ದುಬಾರಿ ಸಂಭಾವನೆಯನ್ನೂ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಟಾಲಿವುಡ್‌ನಲ್ಲಿ ಕೃತಿಯ ಬಿಕಿನಿ ಮ್ಯಾಟರ್ ಏನು? ತಿಳಿಯಲು ಮುಂದೆ ಓದಿ..

ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಸಕ್ಸಸ್

ಕೃತಿ ಶೆಟ್ಟಿಯ ಮೂಲ ಮಂಗಳೂರು. ಆದರೆ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಚಿಕ್ಕವಯಸ್ಸಿನಲ್ಲೇ ಕ್ಯಾಮರಾ ಫೇಸ್ ಮಾಡಿದ್ದ ನಟಿ ಈಗ ಟಾಲಿವುಡ್ ಬೇಡಿಕೆಯ ನಟಿ. ಈಕೆಗೆ 10 ವರ್ಷವಿರುವಾಗಲೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.17ನೇ ವಯಸ್ಸಿನಲ್ಲೇ ಹೃತಿಕ್ ರೋಷನ್ ನಟಿಸಿದ 'ಸೂಪರ್ 30' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಮೊದಲ ಸಿನಿಮಾ 'ಉಪ್ಪೆನ' ಗೆಲ್ಲುತ್ತಿದ್ದಂತೆ ಎರಡನೇ ಸಿನಿಮಾ 'ಬಂಗಾರ್‌ರಾಜು' ಹೆಚ್ಚು ಸಂಭಾವನೆ ಪಡೆದಿದ್ದರಂತೆ. ಎರಡನೇ ಸಿನಿಮಾ ಕೋಟಿ ಹಣವನ್ನು ಬೇಡಿಕೆ ಇಟ್ಟಿದ್ದಾರಂತೆ. ಇನ್ನೊಂದು ನಿರ್ಮಾಪಕರು ಕೂಡ ಕೃತಿ ಶೆಟ್ಟಿ ಕೇಳಿದಷ್ಟು ಹಣ ಕೊಡುತ್ತಿದ್ದಾರಂತೆ. ಇನ್ನೊಂದು ಕಡೆ ಕೃತಿ ಶೆಟ್ಟಿ ಕೂಡ ಫುಲ್ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

Uppena Actress Krithi Shetty Asking Big Remuneration to wear Bikini: Trending News

ಕೃತಿ ಶೆಟ್ಟಿಗೆ ಸತತ ಸೋಲು

'ಉಪ್ಪೆನ','ಶ್ಯಾಮ್ ಸಿಂಘರಾಯ್', 'ಬಂಗಾರ್‌ರಾಜು' ಬ್ಯಾಕ್‌ ಟು ಬ್ಯಾಕ್ ಹಿಟ್ ಆಗಿತ್ತು. ಆ ಬಳಿಕ ಹೆಚ್ಚು ಆಫರ್‌ಗಳು ಬಂದವು. ಆ ನಂತರ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದವು. ರಾಮ್‌ ಪೋತಿನೇನಿ ಹಾಗೂ ನಿತಿನ್ ಜೊತೆ ನಟಿಸಿದ ಸಿನಿಮಾ ಹೀನಾಯವಾಗಿ ಸೋಲುಂಡಿದ್ದವು. ಹೀಗಾಗಿ ಕೃತಿ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿತ್ತು.

ಕೃತಿ ಶೆಟ್ಟಿ ಈಗ ಮತ್ತೆ ಸಿನಿಮಾದಲ್ಲಿ ಸದ್ದು ಮಾಡುವುದಕ್ಕೆ ರೆಡಿಯಾಗಿ ನಿಂತಿದ್ದಾರೆ. ಸದ್ಯ ತಮಿಳಿನಿಂದ ಈ ಚೆಲವೆಗೆ ಆಫರ್ ಬಂದಿದೆ. ತಮಿಳಿನ ಸೂಪರ್‌ಸ್ಟಾರ್ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆಯೆಂದು ಸುದ್ದಿಯಾಗಿದೆ. ಇದೊಂದು ಕಮರ್ಷಿಯಲ್ ಸಿನಿಮಾ ಎನ್ನಲಾಗಿದ್ದು, ಗ್ಲಾಮರಸ್‌ ಪಾತ್ರಕ್ಕೆ ಕೃತಿ ಶೆಟ್ಟಿಯನ್ನು ಆಯ್ಕೆ ಮಾಡಿದ್ದಾರಂತೆ. ಇದೇ ಸಿನಿಮಾದಲ್ಲಿ ಬಿಕಿನಿ ತೊಡಲು ಆಫರ್ ಕೊಟ್ಟಿದ್ದಾರಂತೆ.

ಬಿಕಿನಿ ತೊಡಲು ದುಬಾರಿ ಸಂಭಾವನೆ

ಸ್ಟಾರ್ ನಟ ಕೃತಿ ಶೆಟ್ಟಿಗೆ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾರಂತೆ. ಪ್ರೇಕ್ಷಕರಿಗೆ ಗ್ಲಾಮರ್ ಡೋಸ್ ನೀಡಲು ಬಿಕಿನಿ ತೊಟ್ಟರೆ ಒಳ್ಳೆಯದೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಇದೂವರೆಗೂ ಕೃತಿ ಶೆಟ್ಟಿ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು ಚಿತ್ರತಂಡ ನಂಬಿದೆ.

ಕೃತಿ ಶೆಟ್ಟಿ ಕೂಡ ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಂದ್ಮೇಲೆ ಕೃತಿ ಶೆಟ್ಟಿ ಬಿಕಿನಿ ಆಫರ್ ಒಪ್ಪಿಕೊಂಡರೆ, 4 ಕೋಟಿ ರೂ.ವರೆಗೂ ಸಂಭಾವನೆ ನೀಡಲು ನಿರ್ಮಾಪಕರು ರೆಡಿಯಿದ್ದಾರೆ ಎನ್ನಲಾಗಿದೆ. ಸದ್ಯ ಕೃತಿ ಶೆಟ್ಟಿ 2 ಕೋಟಿ ರೂ ವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

More from Filmibeat

English summary
Uppena Actress Krithi Shetty Asking Big Remuneration to wear Bikini: Trending News, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X