"ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ": ಸ್ಟಾರ್ ನಟನ ಮಗನಿಂದ ಕೃತಿ ಶೆಟ್ಟಿಗೆ ಕಿರುಕುಳ?

ಕುಡ್ಲ ಚೆಲುವೆ ಕೃತಿ ಶೆಟ್ಟಿ ಟಾಲಿವುಡ್ ಸಿನಿಮಾಗಳಲ್ಲಿ ಮೋಡಿ ಮಾಡುತ್ತಿದ್ದಾರೆ. 'ಉಪ್ಪೆನ' ಚಿತ್ರದಲ್ಲಿ ಬೇಬಮ್ಮ ಆಗಿ ಗಮನ ಸೆಳೆದ ಕೃತಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಒಳ್ಳೆ ಸಕ್ಸಸ್ ಮಾತ್ರ ಸಿಕ್ತಿಲ್ಲ. ತಮ್ಮ ಸ್ನಿಗ್ಧ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದ ಬೆಡಗಿ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕೃತಿ ಕಾಯ್ತಿದ್ದಾರೆ.

ಮೊದಲ ಸಿನಿಮಾ ಸಕ್ಸಸ್ ನಂತರ ಕೃತಿ ಸಾಕಷ್ಟು ಅವಕಾಶಗಳು ಬಾಚಿಕೊಳ್ಳುತ್ತಾರೆ ಅಂತಲೇ ಎಲ್ಲಾ ಅಂದುಕೊಂಡಿದ್ದರು. ಆದರೆ ಶ್ರೀಲೀಲಾ ಎಂಟ್ರಿಯಿಂದ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯ್ತು ಎನ್ನಲಾಗ್ತಿದೆ. ಸದ್ಯ ಶ್ರೀಲೀಲಾ ಕೈಯಲ್ಲಿ 10 ಸಿನಿಮಾಗಳಿವೆ. ಆಕೆಯ ಕ್ರೇಜ್ ಮುಂದೆ ಕೃತಿ ಕೊಂಚ ಡಲ್ ಆದಂತೆ ಕಾಣುತ್ತಿದೆ. ಶ್ರೀಲೀಲಾ ನಟಿಸಿದ ಸಿನಿಮಾಗಳು ಹಿಟ್ ಆಗುತ್ತಿವೆ. ರಶ್ಮಿಕಾಗೆ 'ಕಿಸ್' ಬೆಡಗಿ ಭಾರೀ ಪೈಪೋಟಿ ಕೊಡುತ್ತಿದ್ದಾರೆ. ಹಾಗಾಗಿ ಬೇಬಮ್ಮಗೆ ಅವಕಾಶಗಳು ಕಮ್ಮಿ ಆಯಿತು ಎನ್ನುವ ಟಾಕ್ ಇದೆ.

Uppena Actress Kriti Shetty faces harassment from star actors son

ಕೃತಿ ಶೆಟ್ಟಿ ಸ್ಟಾರ್ ನಟನ ಮಗನೊಬ್ಬ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಸುದ್ದಿ ವೈರಲ್ ಆಗ್ತಿದೆ. ಇದೇ ವಿಚಾರ ಇತ್ತ ಟಾಲಿವುಡ್ ಹಾಗೂ ಅತ್ತ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಶೇಟ್ಟಿ ಈ ವಿಚಾರ ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ.

ಸ್ಟಾರ್ ನಟನ ಮಗನಿಂದ ಕಿರುಕುಳ?

ಕೃತಿ ಶೆಟ್ಟಿ ಜೊತೆ ಸ್ನೇಹ ಸಂಪಾದಿಸಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದಾನಂತೆ. ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಚರ್ಚೆ ಶುರುವಾಗಿದೆ. ಪ್ರತಿ ಈವೆಂಟ್‌ನಲ್ಲೂ ಆಕೆಯ ಸುತ್ತಾಮುತ್ತಾ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿದೆ.

ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ!

ಇತ್ತೀಚೆಗೆ ಕೃತಿ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರಂತೆ. ಶೂಟಿಂಗ್ ಬಿಟ್ಟು ನನ್ನ ಬರ್ತ್‌ಡೇ ಪಾರ್ಟಿಗೆ ಬಾ, ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದು ಆತ ಫೋನ್ ಮಾಡಿ ಕಿರುಕುಳ ನೀಡಿದ್ದಾಗಿ ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅನ್ನುವ ಮಾತುಗಳು ಕೇಳಿಬರ್ತಿದೆ. ಆತ ಯಾರು ಅನ್ನೋದು ಮಾತ್ರ ಆಕೆ ರಿವೀಲ್ ಮಾಡಿಲ್ಲವಂತೆ.

Uppena Actress Kriti Shetty faces harassment from star actors son

ಯಾರು ಆ ಸ್ಟಾರ್ ನಟನ ಮಗ?

ಕೃತಿ ಶೆಟ್ಟಿ ನಾನು ಯಾವುದೇ ಪಾರ್ಟಿಗೆ ಬರಲ್ಲ, ನನಗೆ ಪಾರ್ಟಿಗೆ ಬರೋದು ಇಷ್ಟ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರಂತೆ. ಸದ್ಯ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟಾಕ್ಕಿದೆ. ಆತ ಯಾರು? ಯಾವ ಸ್ಟಾರ್ ನಟನ ಮಗ? ಅನ್ನೋದು ಗೊತ್ತಾಗಿಲ್ಲ. ಆತ ತಮಿಳು ಸ್ಟಾರ್ ನಟನ ಮಗನಾ? ಇಲ್ಲ ತೆಲುಗು ನಟನ ಮಗನಾ? ಅಂತೆಲ್ಲಾ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ.

ಸೋಲಿನ ಸುಳಿಗೆ ಸಿಲುಕಿದ ಕೃತಿ

ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರದಲ್ಲಿ ವಿದ್ಯಾರ್ಥಿಯಾಗಿ ಕೃತಿ ಶೆಟ್ಟಿ ಸಣ್ಣ ಪಾತ್ರ ಮಾಡಿದ್ದರು. ನಂತರ 'ಉಪ್ಪೆನ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಗೆದ್ದರು. 'ಶ್ಯಾಮ್‌ ಸಿಂಗ್ ರಾಯ್' ಚಿತ್ರದಲ್ಲಿ ಪುಟ್ಟ ಪಾತ್ರ ಸಿಕ್ಕಿತ್ತು. ಅಲ್ಲಿಂದ ಮುಂದೆ ಬಂದ 'ಬಂಗಾರ್ರಾಜು', 'ದಿ ವಾರಿಯರ್', 'ಮೀಚೆರ್ಲ ನಿಯೋಜಕವರ್ಗಂ', 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ', 'ಕಸ್ಟಡಿ' ಹೀಗೆ ಎಲ್ಲಾ ಸಿನಿಮಾಗಳು ಸೋಲುಂಡಿವೆ.

More from Filmibeat

English summary
Uppena Actress Kriti Shetty faces harassment from star actor's son. kriti last movie Custody also failed in boxoffice. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X