Urfi Javed: ಹಿಂದೂ ಯುವಕನೊಂದಿಗೆ ಉರ್ಫಿ ಜಾವೇದ್ ನಿಶ್ಚಿತಾರ್ಥ?, ವೈರಲ್ ಫೋಟೋ ಹೇಳೋದೇನು?

ಯಾವಾಗಲೂ ತಮ್ಮ ವಿಚಿತ್ರ ಮತ್ತು ಕಲಾತ್ಮಕ ಬಟ್ಟೆಗಳ ಮೂಲಕ ಸುದ್ದಿಯಾಗುವ ನಟಿ ಉರ್ಫಿ ಜಾವೇದ್ ಈಗ ಮತ್ತೊಂದು ಹೊಸ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಇದನ್ನು ಕೇಳಿದ ಜನರು ಅಬ್ಬಬ್ಬಾ ಇವರೇನಾ ಉರ್ಫಿ ಎಂದು ಹುಬ್ಬು ಹಾರಿಸುತ್ತಿದ್ದಾರೆ. ಜೊತೆಗೆ ವೈರಲ್ ಫೋಟೋ ಬಗ್ಗೆ ಜನ ತಮಗೆ ಅನ್ನಿಸಿದ್ದನ್ನು ಹೇಳಿಕೊಳ್ಳುತ್ತಿದ್ದಾರೆ.

ಎಸ್... ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ...! ಅಯ್ಯೋ ಇದು ನಾವು ಹೇಳಿದಲ್ಲ...ಬಾಲಿವುಡ್‌ ಅಂಗಳದಲ್ಲಿ ಈ ರೀತಿಯ ಸುದ್ದಿಯೊಂದು ಸದ್ದಿಲ್ಲದೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಉರ್ಫಿ ಸಹೋದರಿ ಉರುಸಾ ಹಂಚಿಕೊಂಡ ಫೋಟೋ ವೈರಲ್ ಆಗಿರುವುದು!.

Urfi Javed Engaged to a Hindu man? Actress seen performing puja sparked engagement rumours

ಉರ್ಫಿ ಜಾವೇದ್ ನಿಶ್ಚಿತಾರ್ಥ..?

ಉರ್ಫಿ ಜಾವೇದ್ ಮತ್ತು ಒಬ್ಬ ನಿಗೂಢ ವ್ಯಕ್ತಿಯ ಫೋಟೋಗಳು ಆನ್‌ಲೈನ್‌ನಲ್ಲಿ ವೈರಕ್ ಆಗಿವೆ. ಈ ಫೋಟೋ ನಿಶ್ಚಿತಾರ್ಥದ ವದಂತಿಗಳನ್ನು ಹುಟ್ಟುಹಾಕಿದೆ. ತನ್ನ ಬಟ್ಟೆಗಳ ಆಯ್ಕೆಯಿಂದ ಸುದ್ದಿಯಾಗುವ ಉರ್ಫಿ, ನಿಗೂಢ ವ್ಯಕ್ತಿಯೊಂದಿಗೆ ಹೋಮಕುಂಡದ ಬಳಿ ಕುಳಿತು ಪೂಜೆ ಸಮಾರಂಭದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಆಕೆಯ ಸಹೋದರಿ ಉರುಸಾ ಹಂಚಿಕೊಂಡ ಫೋಟೋದಲ್ಲಿ, ಉರ್ಫಿ ನೀಲಿ ಸಲ್ವಾರ್ ಕಮೀಜ್ ಧರಿಸಿ ತಲೆಯ ಮೇಲೆ ದುಪಟ್ಟಾವನ್ನು ಹೊದ್ದುಕೊಂಡಿದ್ದಾರೆ. ಫೋಟೋದಲ್ಲಿರುವ ವ್ಯಕ್ತಿ ಪ್ಯಾಟು, ಶರ್ಟ್ ಧರಿಸಿದ್ದಾರೆ. ಆದರೆ, ಅವರ ಮುಖವನ್ನು ಹಾರ್ಟ್ ಸಿಂಬಲ್‌ನಿಂದ ಮುಚ್ಚಿಡಲಾಗಿದೆ.

ಹಿಂದೂ ಯುವಕನೊಂದಿಗೆ ಉರ್ಫಿ ನಿಶ್ಚಿತಾರ್ಥ..?

ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದಾರೆ. ಹೀಗಾಗಿ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ನಂಬಿದ್ದಾರೆ. ಇನ್ನು, ತನಗೆ ಗಂಡು ಸಿಗುತ್ತಿಲ್ಲ, ಯಾರು ಮದುವೆಯಾಗಲ್ಲ ಎಂದು ಹೇಳಿತ್ತಿದ್ದದ್ದನ್ನು ನಿಲ್ಲಿಸಬಹುದು ಎಂದು ಅನೇಕರು ಮಾತನಾಡುತ್ತಿದ್ದಾರೆ. ಆದರೂ, ಬಿಗ್ ಬಾಸ್ ಖ್ಯಾತಿಯ ಉರ್ಫಿ ಸೋರಿಕೆಯಾದ ಫೋಟೋಗಳ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

Urfi Javed Engaged to a Hindu man? Actress seen performing puja sparked engagement rumours

ಉರ್ಫಿ ಜಾವೇದ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಉರ್ಫಿ ತನ್ನ ಜೀವನದ ಹಲವಾರು ಅಂಶಗಳ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ಈ ವೈರಲ್ ಆಗಿರುವ ಫೋಟೋಗಳ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ. ಹೀಗಾಗಿ ಆದಷ್ಟು ಬೇಗ ಈ ಬಗ್ಗೆ ಅವರು ವಿವರಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆ.

ಒಬ್ಬ ನಟಿಯಾಗಿ ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಖ್ಯಾತ ಧಾರಾವಾಹಿಗಳಾದ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌಟಿ ಜಿಂದಗಿ ಕೇ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಒಟಿಟಿ ವೇದಿಕೆ.

ಇದಾದ ನಂತರ ಅವರು ತಮ್ಮ ವಿಚಿತ್ರ ಫ್ಯಾಷನ್‌ನಿಂದ ಜನರ ಗಮನ ಸೆಳೆದರು. ಆಗ್ಗಾಗೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಉರ್ಫಿ ಜಾವೇದ್ ಸ್ಪ್ಲಿಟ್ಸ್ವಿಲ್ಲಾದ 14 ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಬಟ್ಟೆಗಳ ಆಯ್ಕೆಯಿಂದಾಗಿ ಎಷ್ಟು ಅಭಿಮಾನಿಗಳನ್ನು ಪಡೆದಿದ್ದಾರೋ ಅಷ್ಟೇ ಕೆಟ್ಟದಾಗಿ ಉರ್ಫಿ ಟ್ರೋಲ್‌ಗೂ ಒಳಗಾಗುತ್ತಾರೆ.

ಈ ಹಿಂದೆ, ಟ್ರೋಲ್‌ಗಳಿಗೆ ಉತ್ತರಿಸಿದ್ದ ಅವರು, "ಬಹುಶಃ ಅವರು ಹೇಳುವುದು ಸರಿ. ನಾನು ಮಹಿಳೆಯಾಗುವಷ್ಟು ಒಳ್ಳೆಯವಳಲ್ಲ, ಬಹುಶಃ ನಾನು ಸಮಾಜಕ್ಕೆ ಕಳಂಕವಾಗಿರಬಹುದು, ಬಹುಶಃ ನಾನು ಯುವ ಪೀಳಿಗೆಗೆ ಕೆಟ್ಟ ಉದಾಹರಣೆಯಾಗಿರಬಹುದು. ನಾನು ಏನು ಮಾಡಿದರೂ ಸಹ ಅದು ಇಂಟರ್ನೆಟ್‌ನಲ್ಲಿ ಇರುತ್ತದೆ. ನಾನು ತುಂಬಾ ಕೆಟ್ಟವಳಾ..? ಬಹುಶಃ ಯಾರೂ ನನ್ನನ್ನು ಸ್ವೀಕರಿಸುವುದಿಲ್ಲ, ಯಾವುದೇ ಕುಟುಂಬ ಕೂಡ ನನ್ನನ್ನು ಸ್ವೀಕರಿಸುವುದಿಲ್ಲ" ಎಂದು ಬೇಸರದಲ್ಲಿ ಮಾತನಾಡಿದ್ದರು.

More from Filmibeat

English summary
Urfi Javed Engaged to a Hindu man? Actress seen performing puja sparked engagement rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X