1 ಗಂಟೆ ಕುಣಿಯಲು ಇಷ್ಟೊಂದು ದುಡ್ಡು ತೆಗೆದುಕೊಂಡು ಬಿಟ್ರಾ ದರ್ಶನ್ ನಾಯಕಿ.?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದಾಕೆ ಊರ್ವಶಿ ರೌಟೇಲಾ. 2015 ರಲ್ಲಿ ಮಿಸ್ ಡೀವಾ ಕಿರೀಟ ತೊಟ್ಟ ಊರ್ವಶಿ ರೌಟೇಲಾ ಮಿಸ್ ಯೂನಿವರ್ಸ್-2015 ರಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಸದ್ಯ ಬಾಲಿವುಡ್ ನಲ್ಲಿ ನಾಯಕಿ ಆಗಿ ಗುರುತಿಸಿಕೊಂಡಿರುವ ಊರ್ವಶಿ ರೌಟೇಲಾ ಕೇವಲ ಒಂದು ಗಂಟೆ ಡ್ಯಾನ್ಸ್ ಮಾಡಲು ದುಬಾರಿ ಮೊತ್ತ ಪಡೆದಿದ್ದಾರಂತೆ.!
ಹೊಸ ವರ್ಷದ ಸಂಭ್ರಮದಲ್ಲಿ ತಾರೆಯರ ಡ್ಯಾನ್ಸ್ ಪರ್ಫಾಮೆನ್ಸ್ ಇದ್ದೇ ಇರುತ್ತೆ. ಹಾಗೇ, ಡಿಸೆಂಬರ್ 31 ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು 'ಬಾಲಿವುಡ್ ಕಾರ್ನಿವಲ್ 2020' ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ನಟಿ ಊರ್ವಶಿ ರೌಟೇಲಾ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ 3 ಕೋಟಿ ರೂಪಾಯಿ ಎನ್ನಲಾಗಿದೆ.
ವರದಿಗಳ ಪ್ರಕಾರ, ಒಂದು ಗಂಟೆ ಡ್ಯಾನ್ಸ್ ಪರ್ಫಾಮೆನ್ಸ್ ಗೆ ಇಷ್ಟೊಂದು ದುಡ್ಡು ಇಲ್ಲಿಯವರೆಗೂ ಯಾರೂ ಪಡೆದಿಲ್ಲ. ಅತಿರಥ ಮಹಾರಥರನ್ನೇ ಹಿಂದಕ್ಕೆ ತಳ್ಳಿ ಒಂದು ಗಂಟೆಗೆ 3 ಕೋಟಿ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ ಮಿಸ್ ಊರ್ವಶಿ ರೌಟೇಲಾ.

2013 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಊರ್ವಶಿ ರೌಟೇಲಾ 'ಸಿಂಗ್ ಸಾಬ್ ದಿ ಗ್ರೇಟ್', 'ಮಿಸ್ಟರ್ ಐರಾವತ', 'ಭಾಗ್ ಜಾನಿ', 'ಸನಂ ರೇ', 'ಪಾಗಲ್ಪಂತಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅನೇಕ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿದ್ದಾರೆ.


Click it and Unblock the Notifications