ದರ್ಶನ್ ಜೊತೆ ನಾಯಕಿಯಾಗಿ ನಟಿಸಿದ್ದ ಚೆಲುವೆ 'ಪುಷ್ಪ- 2' ಚಿತ್ರದ ಐಟಂ ಸಾಂಗ್‌ಗೆ ಸ್ಟೆಪ್ಸ್?

ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ಶೂಟಿಂಗ್ ಭರದಿಂದ ಸಾಗ್ತಿದೆ. ಸದ್ಯ ಚಿತ್ರದ ಐಟಂ ಸಾಂಗ್‌ ಬಗ್ಗೆ ಟಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ. ಮೊದಲ ಭಾಗದಲ್ಲಿ ಸಮಂತಾ ರುತ್‌ಪ್ರಭ್ 'ಊ ಅಂಟಾವಾ ಮಾವ' ಎಂದು ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಸಿನಿಮಾ ಸಕ್ಸಸ್‌ನಲ್ಲಿ ಈ ಸಾಂಗ್ ಪಾಲು ಇದೆ.

ದೇವಿಶ್ರೀ ಪ್ರಸಾದ್ ಸಂಗೀತದಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ಮಂಗ್ಲಿ ಸಹೋದರಿ ಇಂದ್ರವತಿ ಹಾಡಿದ್ದರು. ಗಣೇಶ್ ಆಚಾರ್ಯ ಮಾಸ್ಟರ್ ಜಬರ್ದಸ್ತ್‌ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು. ಆಗಷ್ಟೇ ನಾಗಚೈತನ್ಯಗೆ ಡಿವೋರ್ಸ್ ಕೊಟ್ಟು ದೂರಾಗಿದ್ದ ನಟಿ ಸಮಂತಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದರು. ಕೇಳೊದಕ್ಕೆ ಸಿಕ್ಕಾಪಟ್ಟೆ ಮಜವಾಗಿದ್ದ ಸಾಂಗ್ ನೋಡುವುದಕ್ಕೂ ಅಷ್ಟೇ ಕಿಕ್ ಕೊಟ್ಟಿತ್ತು. 'ಊ ಅಂಟಾವಾ ಮಾವ' ಆ ವರ್ಷದ ನಂಬರ್‌ ಸಾಂಗ್‌ ಅನ್ನಿಸಿಕೊಂಡಿದ್ದು ಸುಳ್ಳಲ್ಲ.

Urvashi Rautela To Perform Item Song In Allu Arjuns Pushpa 2

ಸದ್ಯ 'ಪುಷ್ಪ'-2 ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈಗಾಗಲೇ ಸೆಟ್‌ ಹಾಕಿ ಸಾಂಗ್‌ ಶೂಟಿಂಗ್ ಪ್ಲ್ಯಾನ್ ಮಾಡಲಾಗ್ತಿದೆಯಂತೆ. ಈ ಬಾರಿ ಸಿನಿಮಾದಲ್ಲಿ ಸಮಂತಾ ಬದಲಿಗೆ ಮತ್ತೊಬ್ಬ ಬಿಂದಾಸ್ ಬೆಡಗಿ ಹೆಜ್ಜೆ ಹಾಕುವ ಬಗ್ಗೆ ಟಾಲಿವುಡ್‌ನಲ್ಲಿ ಊಹಾಪೋಹ ಶುರುವಾಗಿದೆ.

Urvashi Rautela To Perform Item Song In Allu Arjuns Pushpa 2

ಊರ್ವಶಿ ರೌಟೇಲಾ ಬಿಂದಾಸ್ ಡ್ಯಾನ್ಸ್?

'ಪುಷ್ಪ'-2 ಚಿತ್ರದ ಐಟಂ ಸಾಂಗ್‌ನಲ್ಲಿ ಬಾಲಿವುಡ್ ಬೆಡಗಿ ಊವರ್ಶಿ ರೌಟೇಲಾ ಹೆಜ್ಜೆ ಹಾಕ್ತಾರೆ ಎನ್ನಲಾಗ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದೇ ಸುದ್ದಿ ಭಾರೀ ಸದ್ದು ಮಾಡ್ತಿದೆ. ಊರ್ವಶಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸೋ ಪ್ರಯತ್ನ ಮಾಡಿದ್ರು ಸಕ್ಸಸ್ ಸಿಗಲಿಲ್ಲ. ಆದರೆ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿದು ಅಭಿಮಾನಿಗಳ ಮನಗೆದ್ದಿದ್ದಾರೆ. ಸುಕುಮಾರ್ 'ಪುಷ್ಪ'-2 ಚಿತ್ರಕ್ಕೆ ಡಿಸೈನ್ ಮಾಡಿರುವ ಡ್ಯಾನ್ಸಿಂಗ್‌ ನಂಬರ್‌ನಲ್ಲೂ ಈಕೆ ಕುಣಿತ್ತಾರೆ ಅನ್ನೋ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

ಕನ್ನಡ ಚಿತ್ರದಲ್ಲೂ ನಟಿಸಿದ್ದ ಊರ್ವಶಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಮಿ. ಐರಾವತ' ಚಿತ್ರದಲ್ಲಿ ಊವರ್ಶಿ ರೌಟೇಲಾ ನಾಯಕಿಯಾಗಿ ನಟಿಸಿದ್ದರು. ಎ. ಪಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇತ್ತೀಚೆಗೆ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ', ಅಖಿಲ್ ನಟನೆಯ 'ಏಜೆಂಟ್' ಚಿತ್ರದ ಸ್ಪೆಷಲ್ ಸಾಂಗ್‌ಗಳಲ್ಲಿ ಊರ್ವಶಿ ಕುಣಿದು ಮೋಡಿ ಮಾಡಿದ್ದರು. ಚಿರು ಜೊತೆ 'ಬಾಸ್ ಪಾರ್ಟಿ' ಎಂದು ಬಿಂದಾಸ್ ಸ್ಟೆಪ್ಸ್ ಹಾಕಿದ್ದರು.

'ಪುಷ್ಪ'-2 ಸಾಂಗ್‌ಗೆ ಭಾರೀ ಸಂಭಾವನೆ?

ನಟಿ ಊರ್ವಶಿ ರೌಟೇಲಾ ಕ್ರೇಜ್‌ಗೆ ತಕ್ಕಂತೆ ಸ್ಪೆಷಲ್‌ ಸಾಂಗ್‌ಗೆ ಸಂಭಾವನೆ ಡಿಮ್ಯಾಂಡ್ ಮಾಡ್ತಾರೆ ಎನ್ನಲಾಗ್ತಿದೆ. 'ಪುಷ್ಪ'-2 ಐಟಂ ಸಾಂಗ್‌ಗಾಗಿ ಬರೋಬ್ಬರಿ 5 ಕೋಟಿ ರೂ. ಕೇಳುತ್ತಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಶುರುವಾಗಿದೆ. 3 ನಿಮಿಷದ ಸಾಂಗ್, 2 ದಿನದ ಚಿತ್ರೀಕರಣಕ್ಕೆ ಇಷ್ಟು ದೊಡ್ಡ ಮೊತ್ತ ಕೊಡ್ತಾರಾ ಎಂದು ಕೆಲವರು ಹುಬ್ಬೇರಿಸಿದ್ದಾರೆ.

1000 ಕೋಟಿ ರೂ. ಗಳಿಕೆ ಟಾರ್ಗೆಟ್

ಅಷ್ಟೇನು ನಿರೀಕ್ಷೆ ಇಲ್ಲದೇ ಬಂದ 'ಪುಷ್ಪ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಎರಡನೇ ಭಾಗವನ್ನು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ಹಣ ಹೂಡಿ ಚಿತ್ರವನ್ನು ತಿದ್ದಿ ತೀಡುವ ಕೆಲಸ ನಡೀತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗುತ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.

More from Filmibeat

English summary
Urvashi Rautela To Perform Item Song In Allu Arjun's Pushpa 2. she demanding a whopping fee for a special song. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X