ಪಾಕ್ ಕ್ರಿಕೆಟಿಗನಿಗೆ ಹ್ಯಾಪಿ ಬರ್ತ್‌ಡೇ ಎಂದ ಊರ್ವಶಿ ರೌಟೆಲಾಗೆ ಸಿಕ್ಕ ರಿಪ್ಲೈ ಏನು?
ನಟಿ ಊರ್ವಶಿ ರೌಟೆಲಾ ಸಿನಿಮಾಗಳಿಗಿಂತ ಗಾಸಿಪ್‌ನಿಂದಲೇ ಸದ್ದು ಮಾಡಿದ್ದು ಹೆಚ್ಚು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಟ್ರಿಕ್ಕಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಊರ್ವಶಿ ರೌಟೆಲಾ ನೆಟ್ಟಿಗರ ತಲೆಗೆ ಹುಳಬಿಟ್ಟಿದ್ದಾರೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ರಿಷಬ್ ಶೆಟ್ಟಿ ಜತೆಗಿನ ಫೋಟೊ ಹಂಚಿಕೊಂಡು 'ಕಾಂತಾರ 2' ಲೋಡಿಂಗ್ ಎಂದು ಬರೆದುಕೊಂಡಿದ್ದ ಊರ್ವಶಿ ರೌಟೆಲಾ ತಾನೂ ಸಹ ಕಾಂತಾರ ಮುಂದುವರಿದ ಭಾಗದಲ್ಲಿ ಅಭಿನಯಿಸುತ್ತಿರುವ ರೀತಿ ಬರೆದುಕೊಂಡಿದ್ದರು.
ಆದರೆ ಊರ್ವಶಿ ರೌಟೆಲಾ ಕಾಂತಾರ 2 ಚಿತ್ರದಲ್ಲಿ ನಟಿಸುತ್ತಿಲ್ಲ, ಅದೊಂದು ಗೊಂದಲಾತ್ಮಕ ಪೋಸ್ಟ್ ಅಷ್ಟೇ ಎಂಬುದು ತಿಳಿದುಬಂತು. ಹೀಗೆ ತನ್ನ ಪೋಸ್ಟ್‌ಗಳಿಂದ ಗೊಂದಲ ಹುಟ್ಟುಹಾಕುವ ಊರ್ವಶಿ ರೌಟೆಲಾ ಕ್ರಿಕೆಟಿಗರ ವಿಷಯದಲ್ಲೂ ಸಹ ಹಲವು ಬಾರಿ ವಿವಾದಗಳನ್ನು ಎಬ್ಬಿಸಿದ್ದಾರೆ.
ಈ ಹಿಂದೆ ಆರ್ ಪಿ ಎಂಬ ಕ್ರಿಕೆಟಿಗ ನನಗಾಗಿ ಹೊಟೇಲ್ ಒಂದರಲ್ಲಿ ಹತ್ತು ಗಂಟೆ ಕಾದಿದ್ದ ಎಂದು ಬರೆದುಕೊಂಡು ರಿಷಬ್ ಪಂತ್ ಅನ್ನು ಕೆಣಕಿದ್ದ ಊರ್ವಶಿ ರೌಟೆಲಾ ಕಳೆದ ವಿಶ್ವಕಪ್ ವೇಳೆ ಪಾಕಿಸ್ತಾನದ ನಸೀಮ್ ಶಾನನ್ನು ಮೈದಾನದಲ್ಲಿಯೇ ಗುರಾಯಿಸಿ ಸುದ್ದಿಗೀಡಾಗಿದ್ದರು.

ಬಳಿಕ ನಸೀಮ್ ಶಾ ಊರ್ವಶಿ ರೌಟೆಲಾಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿ, ಮತ್ತೆ ಅನ್‌ಫಾಲೋ ಮಾಡಿದ್ದೂ ಸಹ ನಡೆಯಿತು. ಹೀಗೆ ಈ ಇಬ್ಬರ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹಾಗೂ ಟ್ರೋಲ್‌ಗೆ ಎಡೆ ಮಾಡಿಕೊಟ್ಟಿತ್ತು. ಅಂದು ಇಬ್ಬರೂ ಸಹ ಆತ ಯಾರೆಂದು ಗೊತ್ತಿಲ್ಲ, ಆಕೆ ಯಾರು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರಾದರೂ ಈಗ ಓಪನ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿಕೊಂಡಿದ್ದಾರೆ. ಹೌದು, ನಸೀಮ್ ಶಾ ಹಂಚಿಕೊಂಡಿದ್ದ ಇತ್ತೀಚೆಗಿನ ಫೋಟೊವೊಂದಕ್ಕೆ ಹುಟ್ಟುಹಬ್ಬದ ಶುಭಾಶಯಗಳು, ಡಿಎಸ್‌ಪಿ ಶ್ರೇಯಾಂಕ ಗಳಿಸಿದ್ದಕ್ಕೂ ಶುಭಾಶಯಗಳು ಎಂದು ಊರ್ವಶಿ ರೌಟೆಲಾ ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ನಸೀಮ್ ಶಾ ಧನ್ಯವಾದಗಳು ಎಂದು ಬರೆದಿದ್ದಾರೆ. ಸದ್ಯ ಈ ಇಬ್ಬರ ನಡುವಿನ ಈ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು, ಟ್ರೋಲ್‌ಗೂ ಸಹ ಒಳಗಾಗಿದೆ.


Click it and Unblock the Notifications











