For Quick Alerts
  ALLOW NOTIFICATIONS  
  For Daily Alerts

  'ಲೆಜೆಂಡ್' ಸಿನಿಮಾಕ್ಕೆ 'ಲೆಜೆಂಡರಿ' ಸಂಭಾವನೆ ಪಡೆದ ಊರ್ವಶಿ ರೋಟೆಲಾ

  |

  ತಮಿಳಿನಲ್ಲಿ 'ದಿ ಲೆಜೆಂಡ್' ಹೆಸರಿನ ಸಿನಿಮಾ ಒಂದು ಇತ್ತೀಚೆಗೆ ಬಿಡುಗಡೆ ಆಗಿದೆ. ನೋಡಲು ಸುಮಾರಾಗಿರುವ ಆದರೆ ಭಾರಿ ಹಣ ಹೊಂದಿರುವ 'ಪ್ಯಾಷೊನೇಟ್' ವ್ಯಕ್ತಿಯೊಬ್ಬ ನಟಿಸಿ, ನಿರ್ಮಾಣವೂ ಮಾಡಿರುವ ಸಿನಿಮಾ ಅದು.

  ತನ್ನನ್ನು ತಾನು 'ಪ್ರಮೋಟ್' ಮಾಡಿಕೊಳ್ಳಲು ಮಾಡಿರುವ ಸಿನಿಮಾ ಇದು ಎಂಬುದು ಟ್ರೈಲರ್ ನೋಡಿದರೆಯೇ ಅರ್ಥವಾಗುತ್ತದೆ.

  ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ 'Mr.ಐರಾವತ'ನ ಊರ್ವಶಿಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ 'Mr.ಐರಾವತ'ನ ಊರ್ವಶಿ

  ಸರವಣ ಶಾಪಿಂಗ್‌ ಮಾಲ್‌ ಚೈನ್‌ನ ಮಾಲೀಕರಾಗಿರುವ 52 ವರ್ಷ ವಯಸ್ಸಿನ ಅರುಲ್ ಶರವಣ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಸಿನಿಮಾಕ್ಕೆ ಬಂಡವಾಳವೂ ಅವರದ್ದೇ. ಭಾರಿ ಅದ್ಧೂರಿಯಾಗಿ ತಮ್ಮ ಸಿನಿಮಾವನ್ನು ನಿರ್ಮಾಣ ಮಾಡಿಕೊಂಡಿರುವ ಅರುಲ್, ಸಿನಿಮಾದ ಮೈಲೇಜ್ ಹೆಚ್ಚಿಸಿಕೊಳ್ಳಲು ಬಾಲಿವುಡ್ ಬೆಡಗಿ ಊರ್ವಶಿ ರೋಟೆಲಾಾ ಅನ್ನು ನಾಯಕಿಯಾಗಿ ಕರೆತಂದಿದ್ದಾರೆ. ಈ ಸಿನಿಮಾಕ್ಕೆ ಭಾರಿ ಸಂಭಾವನೆಯನ್ನೇ ನಟಿ ಊರ್ವಶಿ ಪಡೆದಿದ್ದಾರೆ!

  ಭಾರಿ ಸಂಭಾವನೆ ಪಡೆದ ಊರ್ವಶಿ

  ಭಾರಿ ಸಂಭಾವನೆ ಪಡೆದ ಊರ್ವಶಿ

  'ದಿ ಲೆಜೆಂಡ್' ಸಿನಿಮಾದಲ್ಲಿ ನಟಿಸಲು ಊರ್ವಶಿ ರೋಟೆಲಾ ಭಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಈ ಸಿನಿಮಾಕ್ಕಾಗಿ ಊರ್ವಶಿ ರೋಟೆಲಾಾ ಸುಮಾರು 20 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಊರ್ವಶಿ ರೋಟೆಲಾ ಸಾಮಾನ್ಯವಾಗಿ ಪಡೆವ ಸಂಭಾವನೆಗಿಂತಲೂ ಮೂರುಪಟ್ಟು ಹೆಚ್ಚು ಸಂಭಾವನೆಯನ್ನು ಈ ಸಿನಿಮಾಕ್ಕಾಗಿ ಪಡೆದಿದ್ದಾರೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎನಿಸಿಕೊಂಡಿದ್ದಾರೆ.

  ನಟಿ ಊರ್ವಶಿ ರೌಟೆಲ್ಲ ಉಟ್ಟಿರುವ ಸೀರೆಯ ಬೆಲೆ ಕೇಳಿ ಹೌಹಾರದಿರಿ!ನಟಿ ಊರ್ವಶಿ ರೌಟೆಲ್ಲ ಉಟ್ಟಿರುವ ಸೀರೆಯ ಬೆಲೆ ಕೇಳಿ ಹೌಹಾರದಿರಿ!

  ಹಲವು ನಟಿಯರು ನಿರಾಕರಿಸಿದ್ದಾರೆ

  ಹಲವು ನಟಿಯರು ನಿರಾಕರಿಸಿದ್ದಾರೆ

  'ದಿ ಲೆಜೆಂಡ್' ಸಿನಿಮಾದಲ್ಲಿ ನಟಿಸಲು ಕೆಲವು ಪ್ರಮುಖ ಬಾಲಿವುಡ್ ನಟಿಯರನ್ನು ಕೇಳಲಾಯಿತಂತೆ. ಶ್ರದ್ಧಾ ಕಪೂರ್ ಅನ್ನೂ ಸಹ ಸಂಪರ್ಕ ಮಾಡಲಾಗಿತ್ತಂತೆ ಆದರೆ ಉದ್ಯಮಿ ಅರುಲ್ ಶರವಣ ಜೊತೆ ನಟಿಸಲು ಹಲವರು ಹಿಂದೇಟು ಹಾಕಿದ್ದಾರೆ. ಹಾಗಾಗಿ ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ಊರ್ವಶಿ ರೋಟೆಲಾಾ ಅನ್ನು ಒಪ್ಪಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಲಕ್ಷ್ಮಿ ರೈ ಸಹ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಗೀತಿಕಾ ತಿವಾರಿ ಸಹ ನಾಯಕಿಯಾಗಿ ನಟಿಸಿದ್ದಾರೆ.

  ವಿಜ್ಞಾನಿಯ ಪಾತ್ರದಲ್ಲಿ ಅರುಲ್ ಶರವಣ

  ವಿಜ್ಞಾನಿಯ ಪಾತ್ರದಲ್ಲಿ ಅರುಲ್ ಶರವಣ

  ಸಿನಿಮಾದಲ್ಲಿ ಅರುಲ್ ಶರವಣ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಂಶೋಧನೆಯೊಂದನ್ನು ಮಾಡಿ ಇಡೀಯ ಮಾನವ ಕುಲವನ್ನೇ ರಕ್ಷಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ! ಸಿನಿಮಾವನ್ನು ಜೆಡಿ ಜೆರ್ರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸ್ವತಃ ಅರುಲ್ ಶರವಣ. ನಿರ್ಮಾಣ ಸಂಸ್ಥೆ ಶರವಣ ಪ್ರೊಡಕ್ಷನ್ಸ್. ಸಿನಿಮಾದಲ್ಲಿ ಸುಮನ್ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಕೇಳಿ ಬಂದಿವೆ. ಸಿನಿಮಾ ಬಹುತೇಕ ಫ್ಲಾಪ್ ಆಗಿದೆ.

  ಶರವಣ ಸ್ಟೋರ್ಸ್ ಮಾಲೀಕ ಅರುಲ್

  ಶರವಣ ಸ್ಟೋರ್ಸ್ ಮಾಲೀಕ ಅರುಲ್

  ಭಾರತದ ಅತಿ ದೊಡ್ಡ ಕುಟುಂಬ ವಾರಸ್ದಾರಿಕೆಯ ರೀಟೇಲ್ ಶಾಪಿಂಗ್ ಚೈನ್ 'ಶರವಣ ಸ್ಟೋರ್ಸ್'ನ ಮಾಲೀಕತ್ವದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. 1969 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಈವರೆಗೆ ಭಾರತದ ಹಲವು ನಗರಗಳಲ್ಲಿ ಮಾಲ್‌ಗಳನ್ನು ಹೊಂದಿದೆ. ಬಟ್ಟೆ ಮತ್ತು ಆಭರಣ ಮಾರುತ್ತಿದ್ದ ಶರವಣ ಸ್ಟೋರ್ಸ್ ಇದೀಗ ಹಲವು ದಿನೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳನ್ನು ಸಹ ಮಾರಾಟ ಮಾಡಲು ಆರಂಭಿಸಿದೆ. 2017 ರಲ್ಲಿ ಶರವಣ ಸ್ಟೋರ್ಸ್‌ನ ನಿವ್ವಳ ಆದಾಯ 600 ಕೋಟಿ ಆಗಿತ್ತು. ಸುಮಾರು 10,000 ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಶರವಣ ಸ್ಟೋರ್ಸ್‌ನಲ್ಲಿದ್ದಾರೆ.

  Recommended Video

  ತೆಲುಗು ಶೂಟಿಂಗ್ ಸೆಟ್ನಲ್ಲಿ ಚಂದನ್ ಮೇಲೆ ಹಲ್ಲೆ!! Chandan Kumar | Filmibeat Kannada
  English summary
  Bollywood actress Urvasi Rautela charge huge remuneration for her first Tamil movie The Legend. She took 20 crore rs.
  Monday, August 1, 2022, 17:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X