For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಯೋಗಿ ಆದಿತ್ಯನಾಥ್!

  |

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದ ಹವಾ ನಿಧಾನಕ್ಕೆ ಆರಂಭವಾಗುತ್ತಿದೆ. ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್‌ನ ಸಿನಿಮಾ ಇದೆನ್ನಲಾಗುತ್ತಿರುವ 'ಆದಿಪುರುಷ್' ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರಚಾರದ ಯೋಜನೆಯನ್ನೇ ಸಿನಿಮಾ ತಂಡ ಹಾಕಿಕೊಂಡಿದೆ.

  ಸಿನಿಮಾದ ಪ್ರಚಾರ ಕಾರ್ಯ ಇದೇ ದಸರಾದಿಂದ ಆರಂಭವಾಗಲಿದ್ದು, ಶೀಘ್ರದಲ್ಲಿಯೇ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಿರುವುದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್!

  ನೋವಿನಲ್ಲಿರುವ ಪ್ರಭಾಸ್ ಬಗ್ಗೆ ಹೀಗೊಂದು ಗಾಸಿಪ್: ಫ್ಯಾನ್ಸ್‌ಗೆ ಆ ಟೀಂ ಮೇಲೆ ಅನುಮಾನ? ನೋವಿನಲ್ಲಿರುವ ಪ್ರಭಾಸ್ ಬಗ್ಗೆ ಹೀಗೊಂದು ಗಾಸಿಪ್: ಫ್ಯಾನ್ಸ್‌ಗೆ ಆ ಟೀಂ ಮೇಲೆ ಅನುಮಾನ?

  ರಾಮಾಯಣ ಕತೆ ಆಧರಿಸಿದ 'ಆದಿಪುರುಷ್' ಸಿನಿಮಾದ ಟೀಸರ್ ಅನ್ನು ಅಯೋಧ್ಯೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದು, ಟೀಸರ್ ಬಿಡುಗಡೆ ಕಾರ್ಯವನ್ನು ಹಿಂದು ಮುಖವಾಣಿ ಎಂದೇ ಪರಿಗಣಿತವಾಗುವ ವ್ಯಕ್ತಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಡಲಿದ್ದಾರೆ ಎನ್ನಲಾಗಿದೆ.

  ಅಕ್ಟೋಬರ್ 03 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಯೋಗಿ ಆದಿತ್ಯನಾಥ್ ಅಂದು ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿಶೇಷವೆಂದರೆ ಯೂಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆ ಆಗುವ ಮುನ್ನ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿರುವ ಹಿಂದಿಯ 'ವಿಕ್ರಂ-ವೇದ' ಸಿನಿಮಾದ ಜೊತೆಗೆ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

  ಇದು ಮಾತ್ರವಲ್ಲದೆ, ಅಕ್ಟೋಬರ್ 05 ರಂದು ದೆಹಲಿಯ ಪ್ರಸಿದ್ಧ ಕೆಂಪು ಕೋಟೆಯ ಬಳಿ ನಡೆಯಲಿರುವ ರಾಮ್‌ ಲೀಲಾನಲ್ಲಿ ರಾವಣ ದಹನವನ್ನು ಈ ಬಾರಿ ಪ್ರಭಾಸ್ ಮಾಡಲಿದ್ದಾರೆ. ರಾವಣ ಮಾತ್ರವೇ ಅಲ್ಲದೆ ಕುಂಬಕರ್ಣ, ಮೇಘನಾದರ ಪ್ರತಿಕೃತಿಗಳನ್ನು ಸಹ ನಿರ್ಮಿಸಲಾಗುತ್ತದೆ. ಈ ಬಾರಿಯ ಪ್ರತಿಕೃತಿಗಳು 100 ಅಡಿ ಎತ್ತರ ಇರಲಿವೆ. ಈ ಬಾರಿಯ ದಸರಾ ಆಚರಣೆ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಿ ಅಕ್ಟೋಬರ್ 05 ಕ್ಕೆ ಅಂತ್ಯವಾಗಲಿದೆ.

  'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಿ ಸೆನನ್ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಹನುಮಂತನ ಪಾತ್ರದಲ್ಲಿ ಮರಾಠಿ ನಟ ದೇವದತ್ತ ನಾಗೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸಿದ್ದಾರೆ. ಸಿನಿಮಾವನ್ನು ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ತೆರೆ ಕಾಣಿಸುವ ಯೋಜನೆಯಲ್ಲಿದೆ ಚಿತ್ರತಂಡ.

  English summary
  Uttar Pradesh CM Yogi Adityanath may release Prabhas starrer Adipurush movie teaser in Ayodhya.
  Wednesday, September 21, 2022, 22:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X