ರಣ್ವೀರ್- ದೀಪಿಕಾ, ವಿರಾಟ್- ಅನುಷ್ಕಾ ಬಳಿಕ ಆ ದೇಶದಲ್ಲಿ ವರುಣ್- ಲಾವಣ್ಯ ಕಲ್ಯಾಣ? ಮುಹೂರ್ತ ಫಿಕ್ಸ್?
ಟಾಲಿವುಡ್ ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಪ್ರೀತಿ ಹಸೆಮಣೆ ಏರಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೆ ಜೋಡಿಯ ಮದುವೆ ನಿಶ್ಚಯವಾಗಿತ್ತು. ಸರಳವಾಗಿಯೇ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಮೆಗಾ ಫ್ಯಾಮಿಲಿ ಸದಸ್ಯರ ಜೊತೆಗೆ ಕೆಲವೇ ಆಪ್ತರು ಸಮಾರಂಭದಲ್ಲಿ ಭಾಗಿ ಆಗಿದ್ದರು. ತಮ್ಮ ಲವ್‌ಸ್ಟೋರಿಯನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದ ಜೋಡಿ ಕೊನೆಗೆ ಉಂಗುರ ಬದಲಿಸಿಕೊಂಡಿದ್ದರು.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಈ ಆರಡಿ ನಟನಿಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಆದರೆ ಪ್ರಯತ್ನ ಮಾತ್ರ ಬಿಟ್ಟಿಲ್ಲ. ಸದ್ಯ 'ಗಾಂಡೀವಧಾರಿ ಅರ್ಜುನ' ಎನ್ನುವ ಚಿತ್ರದಲ್ಲಿ ಮೆಗಾ ಪ್ರಿನ್ಸ್ ನಟಿಸಿದ್ದಾರೆ. ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇಂತಹ ಹೊತಲ್ಲೇ ವರುಣ್- ಲಾವಣ್ಯ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ. ಈ ವರ್ಷಾಂತ್ಯಕ್ಕೆ ಇಬ್ಬರು ಹಸೆಮಣೆ ಏರುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಮುಂದಿನ ತಿಂಗಳೇ ಮದುವೆ ಎನ್ನುವ ಗುಸುಗುಸು ಶುರುವಾಗಿದೆ.

ವರುಣ್- ಲಾವಣ್ಯ ನಿಶ್ಚಿತಾರ್ಥದ ಬೆನ್ನಲ್ಲೇ ಮೆಗಾ ಡಾಟರ್ ನಿಹಾರಿಕಾ ಡಿವೋರ್ಸ್ ಸುದ್ದಿ ಬಂದಿತ್ತು. ಇದನ್ನು ಕೇಳಿ ಮೆಗಾ ಫ್ಯಾನ್ಸ್ ಬೇಸರಗೊಂಡಿದ್ದರು. ಆದರೆ ಅದರ ಬೆನ್ನಲ್ಲೇ ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಮನೆಮಾಡುತ್ತಿರುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಗುಸುಗುಸು ಮಾತ್ರ ಜೋರಾಗಿದೆ.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ವಿವಾಹ ಸಮಾರಂಭ ಆಗಸ್ಟ್ 24 ರಂದು ನಡೆಯಲಿದೆಯಂತೆ. ಇಟಲಿಯಲ್ ಜೋಡಿಯ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲ್ಯಾನ್ ನಡೆಯುತ್ತೆ ಎನ್ನಲಾಗ್ತಿದೆ. ಈ ಮದುವೆ ಸಮಾರಂಭದಲ್ಲಿ ಮೆಗಾ, ಅಲ್ಲು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ ಎನ್ನುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ಇವರಿಬ್ಬರ ಪ್ರೀತಿ ಶುರುವಾಗಿದ್ದು ಇಟಲಿಯಲ್ಲಿ. 'ಮಿಸ್ಟರ್' ಚಿತ್ರದಲ್ಲಿ ಮೊದಲಿಗೆ ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಚಿತ್ರೀಕರಣಕ್ಕಾಗಿ ಇಟಲಿಗೆ ಹೋಗಿದ್ದಾರೆ. ಅಲ್ಲೇ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಅದು ಈಗ ಮದುವೆವರೆಗೂ ಬಂದು ನಿಂತಿದೆ.
ಕರಿಯರ್ ಸೆಟ್ಲ್ ಆಗಿವವರೆಗೂ ಲವ್‌ಸ್ಟೋರಿ ಯಾರಿಗೂ ಗೊತ್ತಾಗದಂತೆ ಸೀಕ್ರೆಟ್ ಮೇಂಟೇನ್ ಮಾಡಿದ್ದರು. ತಮ್ಮ ಪ್ರೀತಿ ಶುರುವಾದ ಇಟಲಿಯಲ್ಲೇ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಬೇಕು ಎಂದು ವರುಣ್- ಲಾವಣ್ಯ ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ. ಶ್ರೀಮಂತರು, ಸಿನಿಮಾ ತಾರೆಯರ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಇಟಲಿ ಹೇಳಿಮಾಡಿಸಿದ ಜಾಗ. ಹಾಗಾಗಿ ಅಲ್ಲೇ ಇಬ್ಬರು ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. ಆಗಸ್ಟ್ 24ಕ್ಕೆ ಇಟಲಿಯಲ್ಲಿ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಮರುದಿನವೇ 'ಗಾಂಡೀವಧಾರಿ ಅರ್ಜುನ' ಸಿನಿಮಾ ರಿಲೀಸ್ ಆಗಲಿದೆ.
ತಮ್ಮ ಸಿನಿಮಾ ರಿಲೀಸ್ ವೇಳೆ ಪ್ರಚಾರ ಮಾಡುವುದು ಬಿಟ್ಟು ವರುಣ್ ತೇಜ್ ಮದುವೆ ಆಗುತ್ತಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಇಟಲಿಯಲ್ಲಿ ಮದುವೆ ಅಂದಮೇಲೆ ಬಹಳ ತಯಾರಿ ಇರುತ್ತದೆ. ಮೂರ್ನಾಲ್ಕು ದಿನ ಮೊದಲೇ ಫ್ಲೈಟ್ ಏರಬೇಕಿದೆ. ಹಾಗಾದರೆ ತಮ್ಮ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ವರುಣ್ ಭಾಗಿ ಆಗುವುದಿಲ್ಲವಾ? ಎನ್ನುವ ಪ್ರಶ್ನೆ ಎದ್ದಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಕ್ಲಾರಿಟಿ ಸಿಗಬೇಕಿದೆ.
ಬಾಲಿವುಡ್ ತಾರೆಯರು ಕೂಡ ಇಟಲಿಯಲ್ಲಿ ಮದುವೆ ಆಗಿ ಗಮನ ಸೆಳೆದಿದ್ದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶೆಟ್ಟಿ 2017ರಲ್ಲಿ ಇಟಲಿಯ ಬೊರ್ಗೊ ಫಿನೋಚಿಯಾದಲ್ಲಿ ಮದುವೆ ಆಗಿದ್ದರು. 2018ರಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅದೇ ದೇಶದ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಮುಂಬೈ ಹಾಗೂ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


Click it and Unblock the Notifications











