ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮದುವೆ ವಿಡಿಯೋ ಪ್ರಸಾರ ಹಕ್ಕು ಭಾರಿ ಮೊತ್ತಕ್ಕೆ ಸೇಲ್!

ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಎಲ್ಲಕ್ಕೂ ಬೆಲೆ ಇದೆ, ಎಲ್ಲವೂ ಮಾರಾಟವಾಗುತ್ತವೆ ಎಂಬರ್ಥ ನೀಡುವ ಗಾದೆಯೊಂದು ಇಂಗ್ಲೀಷ್‌ನಲ್ಲಿದೆ. ಬಾಲಿವುಡ್‌ನಲ್ಲಿ ಅದಕ್ಕೀಗ ಉದಾಹರಣೆ ದೊರೆತಿದೆ.

ಬಾಲಿವುಡ್‌ನ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿವಾಹ ಆಗುತ್ತಿದ್ದು, ತಮ್ಮ ವಿವಾಹದಿಂದ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ! ತಮ್ಮ ಮದುವೆಯ ಪ್ರಸಾರ ಹಕ್ಕನ್ನು ಅವರು ಒಟಿಟಿ ಒಂದಕ್ಕೆ ಮಾರಾಟ ಮಾಡಿದ್ದಾರೆ.

ಸೆಲೆಬ್ರಿಟಿಗಳ ಮದುವೆಗಳು ಮೊದಲಿಂದಲೂ ಟಿಆರ್‌ಪಿ ಸರಕು. ಯಾವುದೇ ಸೆಲೆಬ್ರಿಟಿಗಳ ಮದುವೆಗಳಾದರೂ ಮಾಧ್ಯಮಗಳು ಸಾಲು ಗಟ್ಟಿ ಮಂಟಪದ ಮುಂದೆ ನಿಂತು ಲೈವ್ ಬಿತ್ತರಿಸುತ್ತವೆ. ನಮ್ಮ ರಾಜ್ಯದಲ್ಲಿಯೂ ಇದೇ ಕತೆ. ಬಾಲಿವುಡ್‌ ಸಹ ಇದಕ್ಕೆ ಹೊರತೇನೂ ಅಲ್ಲ. ಸೆಲೆಬ್ರಿಟಿ ಮದುವೆಗಳಿಗೆ ಇರುವ ಬೇಡಿಕೆಯನ್ನು ಗಮನಿಸಿರುವ ಒಟಿಟಿಯೊಂದು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ಮದುವೆಯ ಪ್ರಸಾರ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

ಮದುವೆ ಪ್ರಸಾರ ಹಕ್ಕು ಖರೀದಿಸಿದ ಅಮೆಜಾನ್ ಪ್ರೈಂ

ಮದುವೆ ಪ್ರಸಾರ ಹಕ್ಕು ಖರೀದಿಸಿದ ಅಮೆಜಾನ್ ಪ್ರೈಂ

ಭಾರತದ ಜನಪ್ರಿಯ ಒಟಿಟಿ ಎನಿಸಿಕೊಂಡಿರುವ ಅಮೆಜಾನ್ ಪ್ರೈಂ, ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್‌ರ ಮದುವೆಯ ಡಿಜಿಟಲ್ ಪ್ರಸಾರ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ. ಯಾವುದೇ ಸ್ಟಾರ್ ನಟರ ಸಿನಿಮಾಗಳಿಗೆ ನೀಡುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಇವರಿಬ್ಬರ ಮದುವೆಗೆ ನೀಡಿದೆ ಅಮೆಜಾನ್ ಪ್ರೈಂ. ಇವರ ಮದುವೆ ಪ್ರಸಾರ ಹಕ್ಕು ಮಾರಾಟವಾಗಿರುವ ಕಾರಣಕ್ಕೆಂದೇ ಭಾರಿ ಗುಟ್ಟಾಗಿ ಮದುವೆ ಮಾಡಲಾಗುತ್ತಿದೆ. ಅತಿಥಿಗಳಿಂದ ಒಪ್ಪಂದಕ್ಕೆ ಸಹಿ ಸಹ ಮಾಡಿಸಿಕೊಳ್ಳಲಾಗುತ್ತಿದೆ!

80 ಕೋಟಿ ಡೀಲ್‌ಗೆ ಸಹಿ!

80 ಕೋಟಿ ಡೀಲ್‌ಗೆ ಸಹಿ!

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ಮದುವೆ ವಿಡಿಯೋ ಪ್ರಸಾರ ಮಾಡಲು ಬರೋಬ್ಬರಿ 80 ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿದೆಯಂತೆ ಅಮೆಜಾನ್. ಕತ್ರಿಕಾ ಕೈಫ್ ಹಾಗೂ ವಿಕ್ಕಿ ಕೌಶಲ್ ತಮ್ಮ ಮದುವೆಗೆ ಈ ಮೊತ್ತದ ಕಾಲು ಭಾಗದಷ್ಟು ಸಹ ಖರ್ಚು ಮಾಡಿಲ್ಲ. ಈ ಹಿಂದೆ ಅಮೆಜಾನ್ ಪ್ರೈಂ ಮೊದಲ ಬಾರಿಗೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಒಟಿಟಿಯಲ್ಲಿ ಬಿತ್ತರಿಸಿತ್ತು, ಇದೀಗ ಮದುವೆಯನ್ನು ಬಿತ್ತರಿಸಲು ಹೊರಟಿದೆ.

ಸಿಕ್ಸ್‌ ಸೆನ್ಸ್‌ ಹೋಟೆಲ್‌ನಲ್ಲಿ ಅದ್ದೂರಿ ವಿವಾಹ

ಸಿಕ್ಸ್‌ ಸೆನ್ಸ್‌ ಹೋಟೆಲ್‌ನಲ್ಲಿ ಅದ್ದೂರಿ ವಿವಾಹ

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರುಗಳು ರಾಜಸ್ಥಾನದ ಸವಾಯಿ ಮಾಧೋಪುರ್‌ನ ಸಿಕ್ಸ್ ಸೆನ್ಸ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಸಿಕ್ಸ್ ಸೆನ್ಸ್ ಹೋಟೆಲ್ ಅನ್ನು ಬರ್ವರಾ ಕೋಟೆ ಎಂಥಲೂ ಕರೆಯುತ್ತಾರೆ. ಈಗಾಗಲೇ ಹೋಟೆಲ್‌ನ ಮುಂದೆ ಭಾರಿ ಭದ್ರತೆ ವಿಧಿಸಲಾಗಿದೆ. ಅತಿಥಿಗಳ ಹೊರತಾಗಿ ಹೋಟೆಲ್‌ಗೆ ಇನ್ಯಾರಿಗೂ ಪ್ರವೇಶ ವಿಲ್ಲ. ಮದುವೆಗೆ ಆಗಮಿಸುವ ಅತಿಥಿಗಳಿಗೂ ಸಹ ಹಲವು ನಿಯಮಗಳನ್ನು ವಿಧಿಸಲಾಗಿದೆ.

ದೂರು ನೀಡಿರುವ ವಕೀಲ

ದೂರು ನೀಡಿರುವ ವಕೀಲ

ಈ ನಡುವೆ ರಾಜಸ್ಥಾನದ ವಕೀಲರೊಬ್ಬರು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರುಗಳ ವಿರುದ್ಧ ದೂರು ದಾಖಲಿಸಿದ್ದಾರೆ. ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಚೌಹಾಟ್ ಮಠ ದೇವಾಲಯದ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಭಕ್ತಾದಿಗಳು ತೊಂದರೆ ಪಡುತ್ತಿದ್ದಾರೆ. ನನಗೆ ತಾರಾ ಜೋಡಿಯ ವಿವಾಹದ ಬಗ್ಗೆ ಬೇಸರವಿಲ್ಲ ಆದರೆ ದೇವಾಲಯದ ರಸ್ತೆಯನ್ನು ಬಂದ್ ಮಾಡಿರುವುದು ಭಕ್ತಾದಿಗಳಿಗೆ ಸಮಸ್ಯೆ ಆಗಿದೆ'' ಎಂದು ವಕೀಲ ನೇತ್ರಬಿಂದ್ ಸಿಂಗ್ ದೂರು ದಾಖಲಿಸಿದ್ದಾರೆ. ''ಚೌಹಾತ್‌ ಮಠ ದೇವಾಲಯಕ್ಕೆ ಶ್ರೀಮಂತ ಇತಿಹಾಸವಿದೆ. ಈ ದೇವಾಲಯವು ಶತಮಾನದಷ್ಟು ಹಳೆಯದ್ದು ಎನ್ನಲಾಗುತ್ತದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ವಿವಾಹ ನಡೆಯುತ್ತಿರುವ 'ಸಿಕ್ಸ್ ಸೆನ್ಸ್ ಹೋಟೆಲ್' ಇದೇ ದೇವಾಲಯದ ರಸ್ತೆಯಲ್ಲಿದೆ. ಹಾಗಾಗಿ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಪ್ರತಿದಿನ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಬಂದು ಹೋಗುತ್ತಾರೆ. ರಸ್ತೆ ಬಂದ್ ಮಾಡಿರುವುದರಿಂದ ಭಕ್ತರಿಗೆ ಸಮಸ್ಯೆ ಆಗಿದೆ'' ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

More from Filmibeat

English summary
Vicky Kaushal Katrina Kaif marriage digital telecast rights sold to amazon prime for 80 crore rs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X